#ಮುನ್ನುಡಿ...
1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ.

#ಬಿ_ರೇಣುಕೇಶ್, ಪತ್ರಕರ್ತರು.

#I have been working in the field of journalism for the last 26 - 27 years. I started @UdayaSaakshi YouTube news channel and www.udayasaakshi.com news website. Please support...

#B_Renukesha, Journalist


Udaya Saakshi

shimoga news update | ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ

ಗೆಲುವಿನ ಸಂಭ್ರಮಕ್ಕಿಂತ ಸೋಲಿನ ಪಾಠ ಅಮೂಲ್ಯ

ಶಿವಮೊಗ್ಗ: ಸೋಲು ಎಂಬುದು ಅಂತ್ಯವಲ್ಲ, ಅದು ಗೆಲುವಿನತ್ತ ಕರೆದೊಯ್ಯುವ ಮೆಟ್ಟಿಲು. ಸೋತು ಗೆದ್ದಾಗ ಮಾತ್ರ ಗೆಲುವು ನಿಜವಾದ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಹೆಚ್.ಎಸ್. ರುದ್ರಪ್ಪ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆ ಎಂದರೆ ಕೇವಲ ಗೆಲುವು ಸೋಲಿನ ಲೆಕ್ಕಾಚಾರವಲ್ಲ. ಅದು ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸೋಲನ್ನು ಎದುರಿಸುವ ಮನೋಸ್ಥೈರ್ಯವನ್ನು ಕಲಿಸುವ ಜೀವನದ ಪಾಠಶಾಲೆ. ಇಂದು ಇಡೀ ದೇಶ ಕ್ರೀಡೆಯತ್ತ ಹೊಸ ಉತ್ಸಾಹದಿಂದ ನೋಡುತ್ತಿದೆ. ಕ್ರೀಡೆ ದೇಶದ ಹೆಮ್ಮೆ ಹಾಗೂ ಯುವಶಕ್ತಿಯ ಪ್ರತೀಕವಾಗಿ ರೂಪುಗೊಳ್ಳುತ್ತಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವೂ ಹಲವು ಸೌಲಭ್ಯ ಹಾಗೂ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದರು.

ಸೋಲು ಗೆಲುವಿನ ಸೋಪಾನ ಎಂಬುದನ್ನು ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಮೈದಾನದಲ್ಲಿ ಎದುರಾಗುವ ಪ್ರತಿಯೊಂದು ಸೋಲೂ ಮುಂದಿನ ಗೆಲುವಿಗೆ ಅಗತ್ಯವಾದ ಅನುಭವವನ್ನು ನೀಡುತ್ತದೆ. ಗೆಲ್ಲುವ ಉತ್ಸಾಹದಷ್ಟೇ ಸೋಲನ್ನು ಸ್ವೀಕರಿಸುವ ಮನೋಭಾವವೂ ಕ್ರೀಡಾಪಟುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಕ್ರೀಡೆ ಬದುಕನ್ನು ಅರಳಿಸುವ ಶಕ್ತಿ ಹೊಂದಿದೆ. ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನೂ ಕ್ರೀಡೆ ಸದೃಢಗೊಳಿಸುತ್ತದೆ.

ಇಂದಿನ ಜೀವನಶೈಲಿಯಲ್ಲಿ ಜಂಕ್ ಫುಡ್‌ನ ಅತಿಯಾದ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಆತಂಕದ ಸಂಗತಿ.
ಹಿರಿಯರನ್ನು ಗೌರವಿಸುವ ಸೌಜನ್ಯತೆ ಹಾಗೂ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ವಿದ್ಯೆಯ ಜತೆಗೆ ಸಂಸ್ಕಾರ, ಸೌಜನ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನರ ಜವಾಬ್ದಾರಿಯಾಗಿದೆ ಎಂದರು.

ಕ್ರೀಡಾಂಗಣದಲ್ಲಿ ಗೆಲುವಿನ ಸಂಭ್ರಮಕ್ಕಿಂತಲೂ ಭಾಗವಹಿಸುವ ಮನೋಭಾವ, ಎದುರಾಳಿಯ ಗೌರವ ಹಾಗೂ ಸೋಲಿನಿಂದ ಕಲಿಯುವ ಗುಣವೇ ಶ್ರೇಷ್ಠ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಕ್ರೀಡೆಯ ಸ್ಫೂರ್ತಿ ಹೊಸ ಕನಸುಗಳಿಗೆ ದಾರಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಡಿಡಿಪಿಯು ಚಂದ್ರಪ್ಪ.ಎಸ್.ಗುಂಡಪಲ್ಲಿ, ಪ್ರಾಂಶುಪಾಲರಾದ ಆರ್.ಆದಿತ್ಯ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಫ್.ಕುಟ್ರಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಯೋಗೀಶ್.ಎಸ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಶಿಧರ್.ಡಿ.ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ತಾಲ್ಲೂಕುಗಳಿಂದ ಭಾಗವಹಿಸಿದ್ದ ತಂಡಗಳಿಗೆ ಕ್ರೀಡಾಪಟು ಯಶವಂತ ಜಂಬೂರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

#shimoga #shivamogga #news #newsfeed #newaupdate

2 hours ago | [YT] | 1

Udaya Saakshi

ಶಿವಮೊಗ್ಗ : ನಾಲ್ಕು ನವಜಾತ ಸಿಂಹದ ಮರಿಗಳ ಸಾವು – ತಡವಾಗಿ ಬೆಳಕಿಗೆ ಬಂದ ಪ್ರಕರಣ!
ಶಿವಮೊಗ್ಗ, ಸೆಪ್ಟೆಂಬರ್ 27: ಶಿವಮೊಗ್ಗ ನಗರದ ಹೊರವಲಯ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದಲ್ಲಿ ನಾಲ್ಕು ನವಜಾತ ಸಿಂಹದ ಮರಿಗಳು ಮೃತಪಟ್ಟಿರುವ ದಾರುಣ ಘಟನೆ ಇತ್ತೀಚೆಗೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ!
ಗುಜರಾತ್ ರಾಜ್ಯದಿಂದ ತ್ಯಾವರೆಕೊಪ್ಪ ತರಲಾಗಿದ್ದ ‘ಸಾರಾ’ ಎಂಬ ಹೆಣ್ಣು ಸಿಂಹವು ಸೆಪ್ಟೆಂಬರ್ ಮೊದಲ ವಾರದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದು ಚೊಚ್ಚಲ ಹೆರಿಗೆಯಾಗಿತ್ತು.
ಆದರೆ ತಾಯಿ ಸಿಂಹದಿಂದ ಸಮರ್ಪಕವಾಗಿ ಹಾಲು ದೊರಕದ ಕಾರಣದಿಂದ, ಮರಿಗಳು ಕ್ರಮೇಣ ನಿತ್ರಾಣಗೊಂಡಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.
ಇದರಿಂದ ದಿನಕಳೆದಂತೆ ಮರಿಗಳ ಆರೋಗ್ಯ ಮತ್ತಷ್ಟು ಹದಗೆಟ್ಟು, ನಾಲ್ಕು ಮರಿಗಳು ಸೆಪ್ಟೆಂಬರ್ ಮೂರನೇ ವಾರದಲ್ಲಿ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ.
ನಿಗೂಢ : ಸಿಂಹದ ಮರಿಗಳ ಜನನದ ಬಗ್ಗೆಯಾಗಲಿ, ಅವುಗಳ ಅನಾರೋಗ್ಯ ಹಾಗೂ ಮೃತಪಟ್ಟ ವಿಷಯದ ಕುರಿತಂತೆ ತ್ಯಾವರೆಕೊಪ್ಪ ಸಿಂಹಧಾಮ ಆಡಳಿತ ಗೌಪ್ಯತೆ ಕಾಪಾಡಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಒಟ್ಟಾರೆ ನಾಲ್ಕು ಮರಿಗಳ ಸಾವಿನ ಕುರಿತಂತೆ ಅದಿಕೃತ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದ್ದು, ನಾಲ್ಕು ಮರಿಗಳ ಸಾವು ವನ್ಯಜೀವಿ ಪ್ರಿಯರಲ್ಲಿ ಅತೀವ ಬೇಸರ ಉಂಟು ಮಾಡಿದೆ.
Shivamogga : Death of Four Newborn Lion Cubs – Incident Comes to Light Late!
Shivamogga, September 27: A tragic incident involving the death of four newborn lion cubs at the Tyavarekoppa Tiger and Lion Safari, located on the outskirts of Shivamogga city, has reportedly occurred, though the matter has only recently come to light.
A female lion named 'Sara', brought to Tyavarekoppa from Gujarat, gave birth to four cubs in the first week of September. This was her first litter.
Reports indicate that the cubs gradually became weak because they did not receive adequate milk from the mother.
Consequently, their health deteriorated over time, and it is reported that all four cubs died during the third week of September.
Mystery: The administration of the Tyavarekoppa Lion Safari maintained secrecy regarding the birth of the cubs, their illness, and their subsequent deaths, sparking various discussions among the public.
While official details regarding the deaths of the four cubs are yet to be released, the incident has caused deep distress among wildlife enthusiasts.

2 hours ago | [YT] | 0

Udaya Saakshi

shimoga news update | ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ

ಗೆಲುವಿನ ಸಂಭ್ರಮಕ್ಕಿಂತ ಸೋಲಿನ ಪಾಠ ಅಮೂಲ್ಯ

ಶಿವಮೊಗ್ಗ: ಸೋಲು ಎಂಬುದು ಅಂತ್ಯವಲ್ಲ, ಅದು ಗೆಲುವಿನತ್ತ ಕರೆದೊಯ್ಯುವ ಮೆಟ್ಟಿಲು. ಸೋತು ಗೆದ್ದಾಗ ಮಾತ್ರ ಗೆಲುವು ನಿಜವಾದ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಹೆಚ್.ಎಸ್. ರುದ್ರಪ್ಪ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆ ಎಂದರೆ ಕೇವಲ ಗೆಲುವು ಸೋಲಿನ ಲೆಕ್ಕಾಚಾರವಲ್ಲ. ಅದು ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸೋಲನ್ನು ಎದುರಿಸುವ ಮನೋಸ್ಥೈರ್ಯವನ್ನು ಕಲಿಸುವ ಜೀವನದ ಪಾಠಶಾಲೆ. ಇಂದು ಇಡೀ ದೇಶ ಕ್ರೀಡೆಯತ್ತ ಹೊಸ ಉತ್ಸಾಹದಿಂದ ನೋಡುತ್ತಿದೆ. ಕ್ರೀಡೆ ದೇಶದ ಹೆಮ್ಮೆ ಹಾಗೂ ಯುವಶಕ್ತಿಯ ಪ್ರತೀಕವಾಗಿ ರೂಪುಗೊಳ್ಳುತ್ತಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವೂ ಹಲವು ಸೌಲಭ್ಯ ಹಾಗೂ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದರು.

ಸೋಲು ಗೆಲುವಿನ ಸೋಪಾನ ಎಂಬುದನ್ನು ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಮೈದಾನದಲ್ಲಿ ಎದುರಾಗುವ ಪ್ರತಿಯೊಂದು ಸೋಲೂ ಮುಂದಿನ ಗೆಲುವಿಗೆ ಅಗತ್ಯವಾದ ಅನುಭವವನ್ನು ನೀಡುತ್ತದೆ. ಗೆಲ್ಲುವ ಉತ್ಸಾಹದಷ್ಟೇ ಸೋಲನ್ನು ಸ್ವೀಕರಿಸುವ ಮನೋಭಾವವೂ ಕ್ರೀಡಾಪಟುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಕ್ರೀಡೆ ಬದುಕನ್ನು ಅರಳಿಸುವ ಶಕ್ತಿ ಹೊಂದಿದೆ. ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನೂ ಕ್ರೀಡೆ ಸದೃಢಗೊಳಿಸುತ್ತದೆ.

ಇಂದಿನ ಜೀವನಶೈಲಿಯಲ್ಲಿ ಜಂಕ್ ಫುಡ್‌ನ ಅತಿಯಾದ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಆತಂಕದ ಸಂಗತಿ.
ಹಿರಿಯರನ್ನು ಗೌರವಿಸುವ ಸೌಜನ್ಯತೆ ಹಾಗೂ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ವಿದ್ಯೆಯ ಜತೆಗೆ ಸಂಸ್ಕಾರ, ಸೌಜನ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನರ ಜವಾಬ್ದಾರಿಯಾಗಿದೆ ಎಂದರು.

ಕ್ರೀಡಾಂಗಣದಲ್ಲಿ ಗೆಲುವಿನ ಸಂಭ್ರಮಕ್ಕಿಂತಲೂ ಭಾಗವಹಿಸುವ ಮನೋಭಾವ, ಎದುರಾಳಿಯ ಗೌರವ ಹಾಗೂ ಸೋಲಿನಿಂದ ಕಲಿಯುವ ಗುಣವೇ ಶ್ರೇಷ್ಠ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಕ್ರೀಡೆಯ ಸ್ಫೂರ್ತಿ ಹೊಸ ಕನಸುಗಳಿಗೆ ದಾರಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಡಿಡಿಪಿಯು ಚಂದ್ರಪ್ಪ.ಎಸ್.ಗುಂಡಪಲ್ಲಿ, ಪ್ರಾಂಶುಪಾಲರಾದ ಆರ್.ಆದಿತ್ಯ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಫ್.ಕುಟ್ರಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಯೋಗೀಶ್.ಎಸ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಶಿಧರ್.ಡಿ.ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ತಾಲ್ಲೂಕುಗಳಿಂದ ಭಾಗವಹಿಸಿದ್ದ ತಂಡಗಳಿಗೆ ಕ್ರೀಡಾಪಟು ಯಶವಂತ ಜಂಬೂರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

#shimoga #shivamogga #news #newsfeed #newaupdate

2 hours ago | [YT] | 0

Udaya Saakshi

ಶಿವಮೊಗ್ಗ : ಕೆರೆ ಬಳಿ ಎಂಜಿನಿಯರಿಂಗ್ ವಿದ್ಯಾರ್ಥಿ – ಸಿನಿಮೀಯ ಶೈಲಿಯಲ್ಲಿ ವಿನೋಬನಗರ ಪೊಲೀಸರ ಎಂಟ್ರಿ – ಏನೀದು ಕೇಸ್?
ಶಿವಮೊಗ್ಗ, ಸೆಪ್ಟೆಂಬರ್ 26: ಆ***ತ್ಮಹ***ತ್ಯೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ತಿಳಿಸಿ ಕೆರೆಯ ಬಳಿ ಆಗಮಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನು, ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಪತ್ತೆ ಮಾಡಿ ರಕ್ಷಿಸಿದ ಘಟನೆ ಸೆಪ್ಟೆಂಬರ್ 26 ರಂದು ನಡೆದಿದೆ.
ಏನೀದು ಘಟನೆ? : ಶಿವಮೊಗ್ಗದ ಬಡಾವಣೆಯೊಂದರ ನಿವಾಸಿಯಾದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ, ‘ಆ***ತ್ಮಹ***ತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆನೆ. ಕ್ಷಮಿಸಿ…’ ಎಂದು ತನ್ನ ಕುಟುಂಬದವರಿಗೆ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ತಿಳಿಸಿದ್ದ.
ಗಾಬರಿಗೊಂಡ ಕುಟುಂಬದವರು ಈ ಸಂಗತಿಯನ್ನು, ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರಿಗೆ ತಿಳಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಂತೋಷ್ ಕುಮಾರ್ ಅವರು, ತಮ್ಮ ಸಿಬ್ಬಂದಿಗಳ ಮೂಲಕ ವಿದ್ಯಾರ್ಥಿಯ ಪತ್ತೆಗೆ ಕ್ರಮಕೈಗೊಂಡಿದ್ದರು.
ಈ ನಡುವೆ ವಿನೋಬನಗರ ಪೊಲೀಸ್ ಠಾಣೆ ಸಿಬ್ಬಂದಿ ಯೋಗೇಶ್ ಹಾಗೂ ಎಸ್ಪಿ ಕಚೇರಿ ಸಿಬ್ಬಂದಿ ಗುರುರಾಜ್ ರವರು ವಿದ್ಯಾರ್ಥಿಯು ಶಿವಮೊಗ್ಗದ ಹೊರವಲಯ ಸೋಮಿನಕೊಪ್ಪದ ಕೆರೆ ಬಳಿಯಿರುವುದನ್ನು ಪತ್ತೆ ಹಚ್ಚಿದ್ದರು.
ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕೆರೆ ಬಳಿಯಿದ್ದ ವಿದ್ಯಾರ್ಥಿಯನ್ನು ಪೊಲೀಸರು ರಕ್ಷಿಸಿ ಕರೆತಂದಿದ್ದಾರೆ. ನಂತರ ಅವರ ಕುಟುಂಬದವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ. ಉತ್ತಮ ಕರ್ತವ್ಯ ನಿರ್ವಹಿಸಿದ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಯೋಗೇಶ್ ಮತ್ತು ಗುರುರಾಜ್ ಅವರಿಗೆ ಎಸ್ಪಿ ನಿಖಿಲ್ ಬಿ ಅವರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Shivamogga: Engineering student near the lake – Vinobanagara police make a cinematic entry – What is the case?

#shimoga #shivamogga #shimoganews #shimogapolice #shimoganewsupdate

21 hours ago | [YT] | 0

Udaya Saakshi

ಶಿವಮೊಗ್ಗದಲ್ಲಿ ಸೆಪ್ಟೆಂಬರ್ 28 ರಂದು 'ಉದ್ಯೋಗ ಮೇಳ' : ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ಭಾಗಿ ಶಿವಮೊಗ್ಗ, ಸೆಪ್ಟೆಂಬರ್ 26: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್ 28 ರಂದು ಬೆಳಿಗ್ಗೆ 10 ಗಂಟೆಗೆ ನೇರ 'ಉದ್ಯೋಗ ಮೇಳ'ವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. 28-09-2026 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಸಂದರ್ಶನ ನಡೆಯಲಿದೆ.
ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮಾ 18 ರಿಂದ 35 ವರ್ಷ ಒಳಗಿನ ಹಾಗೂ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ: 9380663606 ಗೆ ಕರೆ ಮಾಡಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
'Job Fair' in Shivamogga on September 28: Prestigious Private Firms to Participate. Shivamogga, September 26: A direct 'Job Fair' has been organized by the District Employment Exchange on September 28 at 10:00 AM.
Prestigious private companies will participate in this job fair and select candidates through direct interviews. The interviews will be held on September 28 at 10:00 AM at the District Employment Exchange, Gutyappa Colony, Pampa Nagar 2nd Cross, Sagar Road, Shivamogga.
Candidates holding SSLC, PUC, ITI, or Diploma qualifications, as well as graduates—aged between 18 and 35 years—are eligible to participate. Candidates attending the interview must bring their bio-data and a copy of their Aadhaar card. Admission to the job fair is free.
For further information, one may contact the District Employment Exchange, Shivamogga directly or call 9380663606, the Employment Officer stated.
#shimoga #shivamogga #news #NewsUpdate #jobvacancy #jobmela #jobs

1 day ago | [YT] | 3

Udaya Saakshi

shimoga power cut news | ಶಿವಮೊಗ್ಗ ನಗರದ 30 ಕ್ಕೂ ಅಧಿಕ ಏರಿಯಾಗಳಲ್ಲಿ ಸೆಪ್ಟೆಂಬರ್ 29 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಸೆಪ್ಟೆಂಬರ್ 26 : ಶಿವಮೊಗ್ಗ ನಗರದ 220 ಕೆವಿ ಎಂಆರ್ಎಸ್ ಮುಖ್ಯ ಸ್ವೀಕರಣಾ ಕೇಂದ್ರದಲ್ಲಿ 66 ಕೆವಿ ಡಿವಿಜಿ - 01 ಬಸ್ ತ್ರೈಮಾಸಿಕ ನಿರ್ವಹಣಾ ಕೆಲಸವಿರುವುದರಿಂದ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9.30 ರಿಂದ ಸಂಜೆ 05.30 ರವರೆಗೆ ತಾವರೆಚಟ್ನಹಳ್ಳಿ ಎ ಎ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಕಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಶಿವಬಸವ ನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇ ಔಟ್, ತ್ರಿಮೂರ್ತಿ ನಗರ, ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್ ಬಿ ಎಸ್ ನಗರ, ಅಶ್ವತ್ಥ ನಗರ, ಕೀರ್ತಿ ನಗರ, ದೇವಂಗಿ 01 ನೇ ಹಂತ, ಬಸವೇಶ್ವರ ನಗರ,
ಡಾಲರ್ಸ್ ಕಾಲೋನಿ, ಪವನ ಶ್ರೀ ನಗರ, ಕೃಷಿ ನಗರ 01 ನೇ ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ ಪೆಬಲ್ಸ್ ಅಪಾರ್ಟ್ಮೆಂಟ್, ಶಾಂತಿನಗರ / ರಾಗಿಗುಡ್ಡ, ಪಾಪ್ಯುಲರ್ ರೈಸ್ ಮಿಲ್, ಪೇಸ್ ಕಾಲೇಜ್, ತರಳುಬಾಳು ಬಡಾವಣೆ,
ಈಶ್ವರ್ ರೈಸ್ ಮಿಲ್, ಸೇವಾಲಾಲ್ ನಗರ, ತಾವರೆಚಟ್ನಹಳ್ಳಿ ವಡ್ಡರಹಟ್ಟಿ, ವಿಜಯಲಕ್ಷ್ಮಿ ರೈಸ್ ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್ ಯುಜಿಡಿ ಪ್ಲಾಂಟ್,
ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಜೆಎನ್ಎನ್ಸಿ ಇಂಜಿನಿಯರಿಂಗ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

Power Outage in Over 30 Areas of Shivamogga City on September 29!
Shivamogga, September 26: MESCOM has announced that there will be a power outage on September 29 from 9:30 AM to 5:30 PM in the areas listed below—which receive power from the Tavarechatnahalli A-Station—due to quarterly maintenance work on the 66 kV DVJ-01 bus at the 220 kV MRS Main Receiving Station in Shivamogga city.
Details: Power supply will be interrupted in the following areas: Shivabasava Nagar, Indira Gandhi Layout, Kuvempu Nagar, SUDA Layout, Trimurthi Nagar, Navule, Maruti Layout, Savalanga Road, Sarji Convention Hall, LBS Nagar, Ashwatha Nagar,
Keerthi Nagar, Devangi Phase 1, Basaveshwara Nagar, Dollars Colony, Pavana Shree Nagar, Krishi Nagar (1st and 2nd Main Roads), Royal Layout, Anoop Patil Layout (Pebbles Apartment),
Shantinagar/Ragigudda, Popular Rice Mill, PACE College, Taralabalu Layout, Eshwar Rice Mill, Sevalal Nagar, Tavarechatnahalli Vaddarahatti, Vijayalakshmi Rice Mill, Devangi Thota, Tavarechatnahalli UGD Plant,
Gundappa Shed UGD Plant, Shad Nagar, Mallikarjuna Nagar, Reddy Layout, JNNC Engineering College, and surrounding areas. MESCOM has requested consumers to cooperate.

#shimoga #shivamogga #news #NewsUpdate #jobvacancy #jobmela #jobs

1 day ago | [YT] | 0

Udaya Saakshi

ಶಿವಮೊಗ್ಗ : ಅಸ್ವಸ್ಥಗೊಂಡು ಕುಸಿದು ಬಿದ್ದ ಮಹಿಳೆಗೆ ನೆರವಿನಹಸ್ತ!
ಶಿವಮೊಗ್ಗ, ಸೆಪ್ಟೆಂಬರ್ 25: ಅಸ್ವಸ್ಥಗೊಂಡು ಕುಸಿದು ಬಿದ್ದು ರಕ್ತಗಾಯಗೊಂಡಿದ್ದ ಮಹಿಳೆಯೋರ್ವರಿಗೆ, ‘ಅಕ್ಕ ಪಡೆ’ ನೆರವಾದ ಘಟನೆ ಶಿವಮೊಗ್ಗ ನಗರದ ಗಾಂಧಿ ಬಜಾರ್ ರಸ್ತೆಯಲ್ಲಿ ನಡೆದಿದೆ.
ಅಕ್ಕ ಪಡೆ ಸಿಬ್ಬಂದಿ ಗಾಂಧಿ ಬಜಾರ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆ, ಮಹಿಳೆಯೋರ್ವರು ತಲೆ ಸುತ್ತಿನಿಂದ ರಸ್ತೆಯಲ್ಲಿ ಬಿದ್ದಿದ್ದರು. ಇದರಿಂದ ಅವರಿಗೆ ರಕ್ತಗಾಯವಾಗಿತ್ತು.
ತಕ್ಷಣವೇ ಸ್ಥಳದಲ್ಲಿದ್ದ ಅಕ್ಕ ಪಡೆ ಸಿಬ್ಬಂದಿಗಳಾದ ಎಎಸ್ಐ ಜಯಂತಿ, ಸಿಬ್ಬಂದಿಗಳಾದ ಮಧುರಾ, ಸುಪ್ರಿಯಾರವರು ಮಹಿಳೆಯ ನೆರವಿಗೆ ದೌಡಾಯಿಸಿದ್ದಾರೆ.
ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಹಿಳೆಯ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.
Shivamogga: Helping hand for a woman who collapsed after falling ill!
Shivamogga, September 25: An incident occurred on Gandhi Bazaar Road in Shivamogga city where the ‘Akka Pade’ (women’s police squad) came to the aid of a woman who had collapsed due to illness.
While the Akka Pade personnel were on duty on Gandhi Bazaar Road, a woman fell on the street after feeling dizzy, resulting in a bleeding injury.
Akka Pade personnel present at the scene—ASI Jayanthi and staff members Madhura and Supriya—immediately rushed to the woman's aid.
They transported her to a nearby hospital in a vehicle and ensured she received medical treatment. Subsequently, they informed the woman's family and sent her home with them.

2 days ago | [YT] | 3

Udaya Saakshi

ಶಿವಮೊಗ್ಗ : ಕಾಲೇಜ್ ಗೆ ಚಕ್ಕರ್ ಹಾಕಿ ಗಾಂಧಿ ಪಾರ್ಕ್ ನಲ್ಲಿ ಓಡಾಡಿಕೊಂಡಿದ್ದವರಿಗೆ ಅಕ್ಕ ಪಡೆ ಮಾಡಿದ್ದೇನು?
ಶಿವಮೊಗ್ಗ, ಸೆಪ್ಟೆಂಬರ್ 25: ಕಾಲೇಜ್ ಗೆ ಹೋಗದೆ ಗಾಂಧಿ ಪಾರ್ಕ್ ನಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು, ಅಕ್ಕ ಪಡೆ ಪೊಲೀಸರು ಬುದ್ದಿಮಾತು ಹೇಳಿ ಮರಳಿ ಕಾಲೇಜ್ ಗಳಿಗೆ ಕಳುಹಿಸಿದ ಘಟನೆ ನಡೆದಿದೆ.
ಕಾಲೇಜ್ ನ ತರಗತಿ ಅವಧಿಯ ವೇಳೆ, ಪಾಠ-ಪ್ರವಚನಗಳಲ್ಲಿ ಭಾಗಿಯಾಗದ ಕೆಲ ಕಾಲೇಜ್ ಯುವಕ – ಯುವತಿಯರು ಗಾಂಧಿ ಪಾರ್ಕ್ ನಲ್ಲಿ ಓಡಾಡಿಕೊಂಡಿದ್ದರು.
ಇದೆ ವೇಳೆ ಗಾಂಧಿ ಪಾರ್ಕ್ ನಲ್ಲಿ ಗಸ್ತು ಕಾರ್ಯದಲ್ಲಿದ್ದ ಅಕ್ಕ ಪಡೆಯ ಸಿಬ್ಬಂದಿಗಳು ಸದರಿ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. ಈ ವೇಳೆ ಕಾಲೇಜ್ ಗೆ ಚಕ್ಕರ್ ಹಾಕಿ, ಪಾರ್ಕ್ ನಲ್ಲಿ ಓಡಾಡಿಕೊಂಡಿರುವ ಸಂಗತಿ ಬಾಯ್ಬಿಟ್ಟಿದ್ದಾರೆ.
ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದ್ದಾರೆ. ಪೋಕ್ಸೋ ಕಾಯ್ದೆ ಹಾಗೂ ಇತರ ವಿದ್ಯಾರ್ಥಿ ಸಂಬಂಧಿತ ಕಾನೂನುಗಳ ಬಗ್ಗೆ ಅರಿವು ಮೂಡಿಸಿ, ಮರಳಿ ಕಾಲೇಜ್ ಗೆ ಕಳುಹಿಸಿಕೊಟ್ಟಿದ್ದಾರೆ.
Shivamogga: What did the 'Akka Pade' (Women's Safety Squad) do to students skipping college to roam Gandhi Park?
Shivamogga, September 25: An incident occurred where the 'Akka Pade' police counseled and sent back to college a group of male and female students who were casually roaming Gandhi Park instead of attending classes.
During college hours, some young men and women were found wandering in Gandhi Park instead of participating in their academic lessons.
Personnel from the 'Akka Pade' squad, who were on patrol in the park, questioned the students. The students admitted that they had skipped college to spend time in the park.
The personnel counseled the students, raised awareness about the POCSO Act and other laws relevant to students, and sent them back to their colleges.

#shimoga #shivamogga #news #NewsUpdate #Akkapade

2 days ago | [YT] | 5

Udaya Saakshi

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ಲು, ಚಕ್ರಾ, ಸಾವೇಹಕ್ಲು, ಮಾಣಿ, ಯಡೂರು, ಮಾಸ್ತಿಕಟ್ಟೆಗಳಲ್ಲಿ ಬಿದ್ದ ಮಳೆ ವಿವರ. (25/09/2026)

#rain #shimoga #shivamogga #hosanagara #RainAlert

2 days ago | [YT] | 5

Udaya Saakshi

👉 ಭದ್ರಾ ಜಲಾಶಯದ ನೀರಿನ ಸಂಗ್ರಹದ ವಿವರ. (25/09/2026)

BhadraReservoir ProjectTime 6am Date:*25.09.2026* Dam F.R.L186'0"
(WrtMSL):2158.0 Total storage capacity of Dam : 71.535 TMC *Present :* Dam level :176'3" (Wrt MSL) : 2148.25 storage capacity :59.802 TMC
Inflow *533* Cusecs Outflow :*4410* R.B.C:2650Cusecs L.B.C:380Cusecs UBP&KDR: 770 Riversluice:500 Evaporation:110 Last year level :185'0"
Capacity:70.279 Tmc . inflow:2533
Out flow:4350

#shimoga #shivamogga #news #newsfeed #bhadradam #BhadraRiver

2 days ago | [YT] | 3