Its all about " KARUNAADU "
Welcome to Lofty Land, a space where the rich tapestry of history, literature, Janapada (folklore) stories, arts, and cinema come to life. Dive into captivating tales, explore the world of classical and contemporary arts, and uncover the stories that shaped cultures.
ಲಾಫ್ಟಿ ಲ್ಯಾಂಡ್‌ಗೆ ಸ್ವಾಗತ,
ಇತಿಹಾಸ, ಸಾಹಿತ್ಯ, ಜನಪದ ಕಥೆಗಳು, ಕಲೆಗಳು ಮತ್ತು ಜಗತ್ತನ್ನು ಅನ್ವೇಷಿಸಿ, ಸಂಸ್ಕೃತಿಗಳನ್ನು ರೂಪಿಸಿದ ಕತೆಗಳನ್ನು ಅನಾವರಣಗೊಳಿಸಿ.ಲಾಫ್ಟಿ ಲ್ಯಾಂಡ್ ಮಾನವ ಅಭಿವ್ಯಕ್ತಿಯ ಹೃದಯದಲ್ಲಿ ಮತ್ತು ಸೃಜನಾತ್ಮಕತೆಯಲ್ಲಿ ಒಂದು ಪ್ರಯಾಣವನ್ನು ಒದಗಿಸುತ್ತದೆ.
ಸಲಹೆ ಮತ್ತು ಸಹಕಾರಕ್ಕೆ - +91 6360 520 385
MCN Partner : Aiplex
LOFTY LAND
ಮರಳಿನಡಿ ಹೂತುಹೋಗಿದ್ದ ತಲಕಾಡಿನ ಇತಿಹಾಸ…
ಉತ್ಖನನದಲ್ಲಿ ಹೊರಬಂದದ್ದು ಕೇವಲ ಅವಶೇಷಗಳಲ್ಲ, ಒಂದು ಕಾಲಘಟ್ಟದ ಕಥೆ!
ತಲಕಾಡಿನ ಉತ್ಖನನದ ಹಿಂದೆ ಅಡಗಿರುವ ಇತಿಹಾಸದ ಹಲವು ಮಹತ್ವದ ಸಂಗತಿಗಳನ್ನು ನಿಮ್ಮ ಮುಂದೆ ತರುತ್ತಿದ್ದೇವೆ.
ಈ ವಿಶೇಷ ಸಂಚಿಕೆಯಲ್ಲಿ ಪ್ರಮುಖ ಇತಿಹಾಸಕಾರ MS ಕೃಷ್ಣಾಮೂರ್ತಿ ಅವರು ಅಂದಿನ ಉತ್ಖನನದ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಜೊತೆಯಲ್ಲಿ, ದೇವಾಲಯಗಳು ಹಾಗೂ ವಾಸ್ತುಶಿಲ್ಪ ರಚನೆಗಳ ಕುರಿತು ದೀರ್ಘಕಾಲದ ಅಧ್ಯಯನ ನಡೆಸಿರುವ A. N. ಪ್ರಭಾಕರ್ ಅವರ ಉಪಸ್ಥಿತಿಯೂ ಈ ಸಂಚಿಕೆಯ ವಿಶೇಷತೆ.
ಇದು Lofty Land Original Seriesನ ಮತ್ತೊಂದು ವಿಶೇಷ ಸಂಚಿಕೆ.
ತಲಕಾಡಿನ ಮಣ್ಣಿನೊಳಗೆ ಅಡಗಿರುವ ಕಥೆಗಳನ್ನು ಕೇಳಲು ಸಿದ್ಧರಾಗಿ…
🎬 ಸಂಚಿಕೆ ಶೀಘ್ರದಲ್ಲೇ!
#LoftyLand #LoftyLandOriginals #Talakadu #TalakadExcavation #ತಲಕಾಡು #ತಲಕಾಡಿನಉತ್ಖನನ #KarnatakaHistory #KannadaHistory #ಕರ್ನಾಟಕಇತಿಹಾಸ #Archaeology #ArchaeologyKarnataka #KarnatakaHeritage #HistoryOfKarnataka #HistoricalResearch #KannadaContent #HeritageKarnataka
10 hours ago | [YT] | 32
View 0 replies
LOFTY LAND
ಈ ವಾರದ ಒಗಟು
---------------------------
18. ಅಕ್ಕ ಪಕ್ಕದಲ್ಲಿದ್ದರೂ ಅದನ್ನು ಇದು ನೋಡೋಕಾಗಲ್ಲ.ಇದನ್ನು ಅದು ನೋಡೋಕಾಗಲ್ಲ.
📝ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ, ಪುಸ್ತಕ ಗೆಲ್ಲಿ!
2 days ago | [YT] | 5
View 5 replies
LOFTY LAND
Many literary works in Telugu mention the ruling lords as “Karnāṭakṣitipa”. Bukka I is described as “Karnāṭakṣitipa” by Poet Vallabharāya in his work entitled Krīḍābhirāmamu. This Kāvya, “poem” was written during Devarāya II’s time. (1424-1446 CE).
Śrīnātha one of the poets of Reḍḍi chieftains court is well known for his Chāṭu, “Extempore verses” in Telugu. He was in the capital Vijayanagara during the times of King Devarāya II. When he was delayed meeting the king he prays to Goddess Kannaḍa Rājyalakṣmī to pity on him and make him return home quickly. And in another verse, he says that the King of Karṇāṭa honoured him with Kanakābhiṣeka, “Ablution in gold” in the mauktika sabhāgāra, “Pearl Hall”.
All historians agree that Kṛṣṇarāya’s period was the Augustan age of Telugu literature. Also the king is the author of Āmuktamālyada. In his dream the king hears Lord Viṣṇu addressing him as Kannaḍa Rājyaramāramaṇa .
One can go on citing more and more examples but afraid of prolixity. Now it is time to remember and convince the scholarly world that Haṃpi was the capital under the name of “Vijayanagara” of the vast Karnāṭaka Sāmrājya spread from Kṛṣṇā to Kanyākumāṛi North South and the two oceans East West.
Apart from literature there are inscriptions in Telugu which also repeat Karnāṭaka Sāmrājya- Karnāṭaka Empire and Vijayanagara the capita.
Sanskrit Literature:
In the Svaramelakalānidhi Rāmayamātya, the author relates conditions of the kingdom and how Sadāśivarāya, last king of the empire came to the throne in 1542 CE. He writes: “Traitors who have reduced King Sadāśivarāya helpless and make him rule from Guttagiri, Aḷiya Rāmarāya defeated them and made the king sit on the throne of Karnāṭaka. This action of his brought him more fame .”
The Viśvaguṇādarśacaṃpū is a kāvya, “a poetical work” in Sanskrit by Veṃkaṭādhvarin who lived at Kāñcipuram in the 17th century. He mentions a certain Tātācārya who was the Guru of Karnāṭaka king. Although the name of the king is not mentioned the commentator thinks that the king in question must be King Kṛṣṇarāya and his half brother Acyutarāya. For our purpose it is more important to note that the king is mentioned as King of Karnāṭaka. Even a century after the downfall of the kingdom the name of the empire as Karnāṭaka was not forgotten in the south.
No doubt historians are much indebted to the foreign chroniclers. But one should make a distinction between the accounts by the contemporaneous and post visitors. Earlier visitors and Portuguese horse merchants of Kṛṣṇadevarāya’s times have referred the empire as “Narasynga” and the capital Bisnaga, Bizenegalia, Bidjanagar etc. From King Acyutarāya’s rule the visitors and merchants who wrote misnamed the empire by the name of the capital except Diogo de Couto. Being an archivist of Goa archives, he has given the correct information about the empire and its capital. Sewell quotes Couto: “The Portuguese historian Diogo do Couto who was in Goa in 1616 as an archivist writes ... the city Visaja Nagar, which we corruptly call Bisnaga; and we call the kingdom by that name, but the natives amongst themselves always call it the ‘Kingdom of Canara”. (Sewell, 2nd edn. p. 21) Although having the exact knowledge about the capital and the empire yet he entitled his book A Forgotten Empire (Vijayanagar). His work was meant for his European public. Consequently, he didn’t care for the historical facts and thus disseminated the errors.
From above citations except Sewell’s, it is clear that the name of the empire was Karnāṭaka and never Vijayanagara. The capital was called Vijayanagara and not the empire.
In the introduction to the second volume Dr. S. H. Ritti has cited a good number of inscriptions mentioning the name of the, empire as Karnāṭaka and he emphatically says that the empire was never called Vijayanagara . Dr. Ritti ends the paragraph of the subtitle Name of the Empire with the following statement: “Nevertheless, it is indeed necessary to use the proper naminclature. The future historians of Vijayanagara should take note of this while setting to write her history”. Now, it is better to keep aside Sewell’s book and work afresh on the history of the Karnāṭaka Empire through authentic documents.
Hope the future historians will take the essence of Prof Ritti’s words and write Vijayanagara the capital city of Karnāṭaka Sāmrājya, “Karnāṭaka Empire” Karnāṭaka Sāmrājya".
- Dr.Vasundara Kavali Filliozat
5 days ago | [YT] | 169
View 35 replies
LOFTY LAND
ಕರ್ನಾಟಕ–ಆಂಧ್ರಪ್ರದೇಶದ ಗಡಿಯಲ್ಲಿ, ಹಿಂದೂಪುರ ಸಮೀಪವಿರುವ ಚೌಳೂರು ಸಾಮಾನ್ಯ ಹಳ್ಳಿಯಂತೆ ಕಾಣಬಹುದು. ಆದರೆ ಇಲ್ಲಿರುವ ಎರಡು ಅಪರೂಪದ ಶಾಸನಗಳು ವಿಜಯನಗರ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ವಿಭಿನ್ನ ಕಥೆಗಳನ್ನು ಹೇಳುತ್ತವೆ.
ಮೊದಲನೆಯದು ಕನ್ನಡ ಶಾಸನ. ದೇವಸ್ಥಾನಕ್ಕೆ ನೀಡಿದ ದಾನ ಹಾಗೂ ಕಲ್ಯಾಣಿ ಮತ್ತು ಮಂಟಪ ನಿರ್ಮಿಸಿದ ವಿವರಗಳನ್ನು ಇದು ದಾಖಲಿಸಿದೆ. ಇದರ ಅತ್ಯಂತ ವಿಶೇಷ ಅಂಶವೆಂದರೆ, ಧಾನ್ಯ ಅಳೆಯುತ್ತಿದ್ದ **‘ಕೊಳಗ’** ಎಂಬ ಮಾಪನವನ್ನು ಪದಗಳಲ್ಲಿ ಬರೆಯದೆ ವಿಶೇಷ ಚಿಹ್ನೆಯ ಮೂಲಕ ಸೂಚಿಸಿರುವುದು! ‘ಮೂರುವರೆ ಕೊಳಗ’ ಎಂಬ ಅಳತೆಯಲ್ಲಿ ಬಳಕೆಯಾಗಿರುವ ಈ ಸಂಕೇತವು ಕನ್ನಡ ಶಾಸನ ಪರಂಪರೆಯ ಅಪರೂಪದ ದಾಖಲೆಯಾಗಿದೆ.
ಎರಡನೆಯದು ಕ್ರಿ.ಶ. 1556ರ ತೆಲುಗು ಶಾಸನ. ಚೌಳೂರನ್ನು ಅಂದು **‘ಚೌತೂರು ಅಲಿಯಾಸ್ ತಿಮ್ಮಸಮುದ್ರಂ’** ಎಂದು ಕರೆಯಲಾಗುತ್ತಿತ್ತು ಎಂಬುದರ ಜೊತೆಗೆ, ವಿವಿಧ ಶಾಖೆ ಮತ್ತು ಸೂತ್ರಗಳಿಗೆ ಸೇರಿದ **‘ವಿಪ್ರವಿನೋದಿಗಳು’** ಹನುಮಂತರಾಯ ದೇವರಿಗೆ ನೀಡಿದ ದಾನವನ್ನೂ ಇದು ದಾಖಲಿಸುತ್ತದೆ. ವಿಪ್ರವಿನೋದಿಗಳೆಂಬ ವಿಶಿಷ್ಟ ಸಮುದಾಯದ ಅಸ್ತಿತ್ವವನ್ನು ತಿಳಿಸುವ ಕೆಲವೇ ಶಾಸನಗಳಲ್ಲಿ ಇದೂ ಒಂದು.
ವಿಜಯನಗರದ ಅಂತ್ಯಕಾಲದ ರಾಜಕೀಯ–ಸಾಮಾಜಿಕ ಬದಲಾವಣೆಗಳ ನಡುವೆ ಈ ಸಮುದಾಯವು ಈ ಪ್ರದೇಶಕ್ಕೆ ಬಂದು ನೆಲೆಸಿದ ಹಿನ್ನೆಲೆಯೇನು? ಕೊಳಗಕ್ಕೆ ಪ್ರತ್ಯೇಕ ಚಿಹ್ನೆಯನ್ನು ಏಕೆ ಬಳಸಲಾಗಿತ್ತು?
ಒಂದೇ ಊರಿನ ಎರಡು ಶಾಸನಗಳಲ್ಲಿ ಅಡಗಿರುವ ಈ ಅಪರೂಪದ ಇತಿಹಾಸವನ್ನು ಸಂಶೋಧಕರಾದ **ಕೆ. ಧನಪಾಲ್** ಅವರು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ.
#LoftyLand #Chowlur #KannadaInscription #TeluguInscription #VipraVinodulu #Vijayanagara #KDhanapal #KarnatakaHistory
1 week ago | [YT] | 166
View 3 replies
LOFTY LAND
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಮೀಪದ ವಿದುರಾಶ್ವತ್ಥ—ಪುರಾಣ ಮತ್ತು ಸ್ವಾತಂತ್ರ್ಯ ಹೋರಾಟದ ರಕ್ತಸಾಕ್ಷಿ ಒಂದೇ ನೆಲದಲ್ಲಿ ಬೆಸೆದುಕೊಂಡಿರುವ ಐತಿಹಾಸಿಕ ಕ್ಷೇತ್ರ.
ಸ್ಥಳಪುರಾಣದ ಪ್ರಕಾರ, ಮಹಾಭಾರತದ ವಿದುರನು ಮೈತ್ರೇಯ ಮಹರ್ಷಿಗಳ ಆಶ್ರಮವಿದ್ದ ಈ ಸ್ಥಳದಲ್ಲಿ ಅಶ್ವತ್ಥ ವೃಕ್ಷವನ್ನು ನೆಟ್ಟು ಪೂಜಿಸಿದನು. ಅದರ ಬುಡದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು ಮತ್ತು ತುದಿಯಲ್ಲಿ ಶಿವ ನೆಲೆಸಿದ್ದಾರೆಂಬ ನಂಬಿಕೆಯಿಂದ ಈ ಕ್ಷೇತ್ರಕ್ಕೆ ‘ವಿದುರಾಶ್ವತ್ಥ’ ಎಂಬ ಹೆಸರು ಬಂದಿತು. ಇಲ್ಲಿರುವ ಅಶ್ವತ್ಥನಾರಾಯಣಸ್ವಾಮಿ ದೇವಸ್ಥಾನ ಮತ್ತು ಸಾವಿರಾರು ನಾಗಶಿಲೆಗಳು ಕ್ಷೇತ್ರದ ಧಾರ್ಮಿಕ ಮಹತ್ವವನ್ನು ಸಾರುತ್ತವೆ.
ಆದರೆ ಇದೇ ಪವಿತ್ರ ನೆಲ 1938ರ ಏಪ್ರಿಲ್ 25ರಂದು ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾಯಿತು. ನಿಷೇಧಾಜ್ಞೆಯನ್ನು ಮೀರಿ ರಾಷ್ಟ್ರಧ್ವಜ ಹಾರಿಸಲು ಸೇರಿದ್ದ ಹೋರಾಟಗಾರರು ಮತ್ತು ಗ್ರಾಮಸ್ಥರ ಮೇಲೆ ಅಂದಿನ ಮೈಸೂರು ಸಂಸ್ಥಾನದ ಪೊಲೀಸರು ಗುಂಡಿನ ಮಳೆಗರೆದರು. ಅನೇಕರು ಪ್ರಾಣ ಕಳೆದುಕೊಂಡು, ಹಲವರು ಗಾಯಗೊಂಡ ಈ ಘಟನೆ ಇತಿಹಾಸದಲ್ಲಿ **‘ಕರ್ನಾಟಕದ ಜಲಿಯನ್‌ವಾಲಾ ಬಾಗ್’** ಎಂದೇ ಗುರುತಿಸಲ್ಪಟ್ಟಿತು.
ಒಂದೆಡೆ ವಿದುರನ ಪೌರಾಣಿಕ ಕಥೆ; ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದ ಕನ್ನಡಿಗರ ವೀರಗಾಥೆ!
ವಿದುರಾಶ್ವತ್ಥದ ಸ್ಥಳಪುರಾಣ, ದೇವಸ್ಥಾನದ ಮಹತ್ವ ಮತ್ತು ಮರೆತುಹೋಗಿರುವ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನು ಇತಿಹಾಸಕಾರ ಹಾಗೂ ಸಂಶೋಧಕರಾದ **ಕೆ. ಧನಪಾಲ್** ಅವರು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ.
#LoftyLand #Vidurashwatha #KarnatakaHistory #FreedomStruggle #JallianwalaBagh #KDhanapal #Gowribidanur
1 week ago | [YT] | 72
View 1 reply
LOFTY LAND
🪔🌸 May this auspicious Ganesh Chaturthi mark the beginning of a beautiful journey filled with positivity, prosperity, peace, and success. Ganpati Bappa Morya! 🙏🐘
#GaneshChaturthi #GanpatiBappaMorya #GaneshUtsav #GanpatiFestival #PositiveVibes #Prosperity #Peace #LordGanesha
1 week ago | [YT] | 22
View 0 replies
LOFTY LAND
ತುಮಕೂರು ಜಿಲ್ಲೆಯ ತೀತಾ ಸಮೀಪವಿರುವ ಇಂದಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಚಲಿತ ಕಥೆ ಸುಮಾರು ನೂರು ವರ್ಷಗಳ ಹಿಂದಿನಿಂದ ಆರಂಭವಾಗುತ್ತದೆ.
ಆದರೆ ಆಂಧ್ರಪ್ರದೇಶದ ಹಿಂದುಪುರ ಸಮೀಪದ ಗೊರವನಹಳ್ಳಿ–ಗೊರ್ರೆಪಲ್ಲಿಯಲ್ಲಿ ಅಚ್ಯುತರಾಯರ ಕಾಲಕ್ಕೆ ಸೇರಿದ, ಸುಮಾರು 500 ವರ್ಷಗಳಷ್ಟು ಹಳೆಯ ಮಹಾಲಕ್ಷ್ಮೀ ದೇವಸ್ಥಾನವಿದೆ. ಅದರ ಆವರಣದಲ್ಲಿರುವ ಏಳು ಶಾಸನಗಳು ದೇವಸ್ಥಾನ ನಿರ್ಮಾಣದ ಉದ್ದೇಶ, ಹಣ ಸಂಗ್ರಹಿಸಿದ ವಿಧಾನ ಹಾಗೂ ಅದನ್ನು ದಾಖಲಿಸಿದ ವ್ಯಕ್ತಿಯ ಹೆಸರನ್ನೂ ತಿಳಿಸುತ್ತವೆ.
ಒಂದೆಡೆ ಇತ್ತೀಚಿನ ಜನಪದ ಕಥೆ; ಮತ್ತೊಂದೆಡೆ ವಿಜಯನಗರ ಕಾಲದ ನೇರ ಶಾಸನಾಧಾರ!
ಹಾಗಾದರೆ ಐತಿಹಾಸಿಕವಾಗಿ ಪ್ರಾಚೀನವಾದ ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರ ಯಾವುದು? ಗಡಿಯ ಕಾರಣದಿಂದ ಆಂಧ್ರದಲ್ಲಿ ಸೇರಿಹೋಗಿ, ಇಂದು ಅವಸಾನದ ಅಂಚಿನಲ್ಲಿರುವ ಈ ದೇವಸ್ಥಾನವೇ ಮೂಲ ಗೊರವನಹಳ್ಳಿ ಲಕ್ಷ್ಮೀ ಕ್ಷೇತ್ರವೇ?
ಶಾಸನಗಳ ಆಧಾರದ ಮೇಲೆ ಇತಿಹಾಸಕಾರ ಹಾಗೂ ಸಂಶೋಧಕರಾದ ಕೆ. ಧನಪಾಲ್ ಅವರು ಈ ಮಹತ್ವದ ಸಂಗತಿಯನ್ನು ವಿವರಿಸಿದ್ದಾರೆ. ಸಾಕ್ಷ್ಯಗಳನ್ನು ನೋಡಿ—ಸತ್ಯದ ನೆಲೆಯಲ್ಲಿ ಚರ್ಚಿಸೋಣ.
#LoftyLand #Goravanahalli #MahalakshmiTemple #VijayanagaraEmpire #AchyutaRaya #KannadaInscriptions #KarnatakaHistory
1 week ago | [YT] | 78
View 0 replies
LOFTY LAND
ತುಮಕೂರು ಜಿಲ್ಲೆಯ ತೀತಾ ಸಮೀಪವಿರುವ ಇಂದಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಚಲಿತ ಕಥೆ ಸುಮಾರು ನೂರು ವರ್ಷಗಳ ಹಿಂದಿನಿಂದ ಆರಂಭವಾಗುತ್ತದೆ.
ಆದರೆ ಆಂಧ್ರಪ್ರದೇಶದ ಹಿಂದುಪುರ ಸಮೀಪದ ಗೊರವನಹಳ್ಳಿ–ಗೊರ್ರೆಪಲ್ಲಿಯಲ್ಲಿ ಅಚ್ಯುತರಾಯರ ಕಾಲಕ್ಕೆ ಸೇರಿದ, ಸುಮಾರು 500 ವರ್ಷಗಳಷ್ಟು ಹಳೆಯ ಮಹಾಲಕ್ಷ್ಮೀ ದೇವಸ್ಥಾನವಿದೆ. ಅದರ ಆವರಣದಲ್ಲಿರುವ ಏಳು ಶಾಸನಗಳು ದೇವಸ್ಥಾನ ನಿರ್ಮಾಣದ ಉದ್ದೇಶ, ಹಣ ಸಂಗ್ರಹಿಸಿದ ವಿಧಾನ ಹಾಗೂ ಅದನ್ನು ದಾಖಲಿಸಿದ ವ್ಯಕ್ತಿಯ ಹೆಸರನ್ನೂ ತಿಳಿಸುತ್ತವೆ.
ಒಂದೆಡೆ ಇತ್ತೀಚಿನ ಜನಪದ ಕಥೆ; ಮತ್ತೊಂದೆಡೆ ವಿಜಯನಗರ ಕಾಲದ ನೇರ ಶಾಸನಾಧಾರ!
ಹಾಗಾದರೆ ಐತಿಹಾಸಿಕವಾಗಿ ಪ್ರಾಚೀನವಾದ ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರ ಯಾವುದು? ಗಡಿಯ ಕಾರಣದಿಂದ ಆಂಧ್ರದಲ್ಲಿ ಸೇರಿಹೋಗಿ, ಇಂದು ಅವಸಾನದ ಅಂಚಿನಲ್ಲಿರುವ ಈ ದೇವಸ್ಥಾನವೇ ಮೂಲ ಗೊರವನಹಳ್ಳಿ ಲಕ್ಷ್ಮೀ ಕ್ಷೇತ್ರವೇ?
ಶಾಸನಗಳ ಆಧಾರದ ಮೇಲೆ ಇತಿಹಾಸಕಾರ ಹಾಗೂ ಸಂಶೋಧಕರಾದ ಕೆ. ಧನಪಾಲ್ ಅವರು ಈ ಮಹತ್ವದ ಸಂಗತಿಯನ್ನು ವಿವರಿಸಿದ್ದಾರೆ. ಸಾಕ್ಷ್ಯಗಳನ್ನು ನೋಡಿ—ಸತ್ಯದ ನೆಲೆಯಲ್ಲಿ ಚರ್ಚಿಸೋಣ.
#LoftyLand #Goravanahalli #MahalakshmiTemple #VijayanagaraEmpire #AchyutaRaya #KannadaInscriptions #KarnatakaHistory
1 week ago | [YT] | 41
View 1 reply
LOFTY LAND
ತುಮಕೂರು ಜಿಲ್ಲೆಯ ತೀತಾ ಸಮೀಪವಿರುವ ಇಂದಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಚಲಿತ ಕಥೆ ಸುಮಾರು ನೂರು ವರ್ಷಗಳ ಹಿಂದಿನಿಂದ ಆರಂಭವಾಗುತ್ತದೆ.
ಆದರೆ ಆಂಧ್ರಪ್ರದೇಶದ ಹಿಂದುಪುರ ಸಮೀಪದ ಗೊರವನಹಳ್ಳಿ–ಗೊರ್ರೆಪಲ್ಲಿಯಲ್ಲಿ ಅಚ್ಯುತರಾಯರ ಕಾಲಕ್ಕೆ ಸೇರಿದ, ಸುಮಾರು 500 ವರ್ಷಗಳಷ್ಟು ಹಳೆಯ ಮಹಾಲಕ್ಷ್ಮೀ ದೇವಸ್ಥಾನವಿದೆ. ಅದರ ಆವರಣದಲ್ಲಿರುವ ಏಳು ಶಾಸನಗಳು ದೇವಸ್ಥಾನ ನಿರ್ಮಾಣದ ಉದ್ದೇಶ, ಹಣ ಸಂಗ್ರಹಿಸಿದ ವಿಧಾನ ಹಾಗೂ ಅದನ್ನು ದಾಖಲಿಸಿದ ವ್ಯಕ್ತಿಯ ಹೆಸರನ್ನೂ ತಿಳಿಸುತ್ತವೆ.
ಒಂದೆಡೆ ಇತ್ತೀಚಿನ ಜನಪದ ಕಥೆ; ಮತ್ತೊಂದೆಡೆ ವಿಜಯನಗರ ಕಾಲದ ನೇರ ಶಾಸನಾಧಾರ!
ಹಾಗಾದರೆ ಐತಿಹಾಸಿಕವಾಗಿ ಪ್ರಾಚೀನವಾದ ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರ ಯಾವುದು? ಗಡಿಯ ಕಾರಣದಿಂದ ಆಂಧ್ರದಲ್ಲಿ ಸೇರಿಹೋಗಿ, ಇಂದು ಅವಸಾನದ ಅಂಚಿನಲ್ಲಿರುವ ಈ ದೇವಸ್ಥಾನವೇ ಮೂಲ ಗೊರವನಹಳ್ಳಿ ಲಕ್ಷ್ಮೀ ಕ್ಷೇತ್ರವೇ?
ಶಾಸನಗಳ ಆಧಾರದ ಮೇಲೆ ಇತಿಹಾಸಕಾರ ಹಾಗೂ ಸಂಶೋಧಕರಾದ ಕೆ. ಧನಪಾಲ್ ಅವರು ಈ ಮಹತ್ವದ ಸಂಗತಿಯನ್ನು ವಿವರಿಸಿದ್ದಾರೆ. ಸಾಕ್ಷ್ಯಗಳನ್ನು ನೋಡಿ—ಸತ್ಯದ ನೆಲೆಯಲ್ಲಿ ಚರ್ಚಿಸೋಣ.
#LoftyLand #Goravanahalli #MahalakshmiTemple #VijayanagaraEmpire #AchyutaRaya #KannadaInscriptions #KarnatakaHistory
1 week ago | [YT] | 119
View 3 replies
LOFTY LAND
ಕರುಪತ್ರ
ವಿಜಯನಗರ ಸಾಮ್ರಾಜ್ಯವೇ? ಕರ್ನಾಟಕ ಸಾಮ್ರಾಜ್ಯವೇ?
ನಾವು ಇತಿಹಾಸದಲ್ಲಿ “ವಿಜಯನಗರ ಸಾಮ್ರಾಜ್ಯ” ಎಂದು ಓದಿದ್ದೇವೆ.
ಆದರೆ, ವಿಜಯನಗರವೇ ಸಾಮ್ರಾಜ್ಯದ ಹೆಸರಾಗಿತ್ತೇ? ಅಥವಾ ಅದು ಆ ಮಹಾಸಾಮ್ರಾಜ್ಯದ ರಾಜಧಾನಿಯ ಹೆಸರಾಗಿತ್ತೇ?
ಕ್ರಿ.ಶ. 1517ರ ಚೋಳಸಮುದ್ರದ ಶಾಸನವೊಂದು ಈ ಪ್ರಶ್ನೆಯನ್ನು ಮತ್ತೆ ನಮ್ಮ ಮುಂದೆ ತರುತ್ತದೆ. ಅದರಲ್ಲಿ ಶ್ರೀಕೃಷ್ಣದೇವರಾಯರನ್ನು “ಶ್ರೀ ಕರ್ನಾಟಕ ಸಿಂಹಾಸನಾರೂಢ ಶ್ರೀಕೃಷ್ಣರಾಯ ಮಹಾರಾಯ” ಎಂದು ಉಲ್ಲೇಖಿಸಿರುವುದು ಗಮನಾರ್ಹ. ಇದೇ ಕಾರಣಕ್ಕೆ, ವಿಜಯನಗರದ ರಾಜಕೀಯ ಪರಂಪರೆಯನ್ನು “ಕರ್ನಾಟಕ ಸಾಮ್ರಾಜ್ಯ” ಎಂಬ ವಿಶಾಲ ಪರಿಕಲ್ಪನೆಯಿಂದಲೂ ಪುನರ್‌ಪರಿಶೀಲಿಸಬೇಕೇ ಎಂಬ ಪ್ರಶ್ನೆ ಇತಿಹಾಸಕಾರರ ಮುಂದೆ ನಿಲ್ಲುತ್ತದೆ.
ಇದು ಕೇವಲ ಒಂದು ಪದದ ವಿಚಾರವಲ್ಲ.
ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರ — ಇವು ಒಂದೇ ವಂಶವಲ್ಲ; ಆದರೆ ದಕ್ಷಿಣ ಭಾರತದ ಇತಿಹಾಸದಲ್ಲಿ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯ ವಿವಿಧ ಯುಗಗಳನ್ನು ಪ್ರತಿನಿಧಿಸುವ ಸಾಮ್ರಾಜ್ಯಿಕ ಪರಂಪರೆಗಳು. “ಕರ್ನಾಟಕ ಸಾಮ್ರಾಜ್ಯ” ಎಂಬ ಪರಿಕಲ್ಪನೆಯ ಇತಿಹಾಸವನ್ನು ಅಧ್ಯಯನ ಮಾಡಿದ ಹಳೆಯ ಕನ್ನಡ ಇತಿಹಾಸಕಾರರೂ ಇದ್ದಾರೆ; 1920ರ ದಶಕದಲ್ಲಿಯೇ Karnataka Samrajya ಎಂಬ ಕೃತಿಗಳು ಪ್ರಕಟವಾಗಿದ್ದವು.
ವಿಜಯನಗರದ ಶಕ್ತಿ ಇಂದಿನ ಕರ್ನಾಟಕದ ಗಡಿಗಳೊಳಗೆ ಮಾತ್ರ ಸೀಮಿತವಾಗಿರಲಿಲ್ಲ. ಅದರ ರಾಜಕೀಯ ಪ್ರಭಾವವು ದಕ್ಷಿಣ ಭಾರತದ ವಿಶಾಲ ಪ್ರದೇಶಗಳಿಗೆ ವಿಸ್ತರಿಸಿತ್ತು. ಆದ್ದರಿಂದ “ವಿಜಯನಗರ” ಎಂಬುದು ಒಂದು ನಗರವನ್ನು ಸೂಚಿಸಿದರೆ, “ಕರ್ನಾಟಕ” ಎಂಬುದು ಆ ರಾಜಕೀಯ-ಸಾಂಸ್ಕೃತಿಕ ಪರಂಪರೆಯ ವಿಶಾಲ ಗುರುತನ್ನು ಸೂಚಿಸುತ್ತಿತ್ತೇ? ಎಂಬ ಪ್ರಶ್ನೆಯನ್ನು ಕೇಳುವುದು ಸಹಜ.
ಇಲ್ಲಿ ನಮ್ಮ ಉದ್ದೇಶ ಇತರ ಭಾಷೆ, ಪ್ರದೇಶ ಅಥವಾ ರಾಜವಂಶಗಳ ಇತಿಹಾಸವನ್ನು ಕಡಿಮೆ ಮಾಡುವುದು ಅಲ್ಲ. ತಮಿಳು, ತೆಲುಗು, ಮರಾಠಿ, ಮಲಯಾಳಂ, ಕನ್ನಡ — ದಕ್ಷಿಣ ಭಾರತದ ಪ್ರತಿಯೊಂದು ಪ್ರದೇಶವೂ ಈ ಇತಿಹಾಸದ ಅವಿಭಾಜ್ಯ ಭಾಗ. ಆದರೆ ಆ ಬಹುಭಾಷಿಕ, ಬಹುಧಾರ್ಮಿಕ, ಬಹುಸಾಂಸ್ಕೃತಿಕ ಜಗತ್ತನ್ನು ಒಂದು ಕಾಲದಲ್ಲಿ ಮುನ್ನಡೆಸಿದ ರಾಜಕೀಯ ಶಕ್ತಿಯ ಸ್ವ-ಗುರುತು ಏನಾಗಿತ್ತು ಎಂಬುದನ್ನು ನಾವು ಪ್ರಶ್ನಿಸಲೇಬೇಕು.
ಹೀಗಾಗಿ ನಮ್ಮ ಪ್ರಶ್ನೆ ಸರಳ:
**ವಿಜಯನಗರವು ಕೇವಲ ಒಂದು ರಾಜಧಾನಿಯೇ?
ಅಥವಾ ಅದು ಕರ್ನಾಟಕ ಸಾಮ್ರಾಜ್ಯದ ಮಹಾನ್ ರಾಜಧಾನಿಯೇ?**
ಈ ಪ್ರಶ್ನೆಗೆ ಉತ್ತರವನ್ನು ಭಾವನೆಯಿಂದಲ್ಲ — ಶಾಸನಗಳಿಂದ, ಸಾಹಿತ್ಯದಿಂದ, ನಾಣ್ಯಗಳಿಂದ, ಪ್ರವಾಸಿಗರ ದಾಖಲೆಗಳಿಂದ ಮತ್ತು ಸಮಕಾಲೀನ ಮೂಲಗಳಿಂದ ಹುಡುಕೋಣ.
ಇದು ಕರ್ನಾಟಕದ ಹೆಮ್ಮೆಗಾಗಿ ಇತಿಹಾಸವನ್ನು ಬದಲಿಸುವ ಪ್ರಯತ್ನವಲ್ಲ.
ಕರ್ನಾಟಕದ ಇತಿಹಾಸವನ್ನು ಅದರ ಮೂಲ ಸಾಕ್ಷ್ಯಗಳ ಮೂಲಕ ಮತ್ತೆ ಓದುವ ಆಹ್ವಾನ.
**ಕರ್ನಾಟಕ ಸಾಮ್ರಾಜ್ಯ — ಇದು ಘೋಷಣೆಯಲ್ಲ.
ಇದು ಇತಿಹಾಸಕಾರರು ಮತ್ತೆ ಚರ್ಚಿಸಬೇಕಾದ ಒಂದು ಐತಿಹಾಸಿಕ ಪ್ರಶ್ನೆ.**
— Lofty Land | Lofty Letter
1 week ago | [YT] | 112
View 10 replies
Load more