Southwood Talkies 

We are passionate about giving you nothing but the best in entertainment.
Do you feel the need to connect your brand to the vast digital audience without making them feel like it's an ad they just watched? SWT came into existence as an answer


Southwood Talkies

*"ರಾಮರಸ" ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮ*

ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ, ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ *'ರಾಮರಸ'* ತನ್ನ ಚಿತ್ರೀಕರಣದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ ಬಿರುಸಿನ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ.

ಪ್ರೇಕ್ಷಕರು ಚಿತ್ರತಂಡದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದಕ್ಕಿಂತಲೂ ಮಿಗಿಲಾದ ಒಂದು ವಿಶಿಷ್ಟ ಮತ್ತು ಅದ್ಭುತ ಸಿನಿಮಾ ಅನುಭವವನ್ನು ನೀಡಲು 'ರಾಮರಸ' ಸಜ್ಜಾಗುತ್ತಿದೆ. ಈಗಾಗಲೇ ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರಕ್ಕೆ ಈಗ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ.

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ *ಅದಾ ಶರ್ಮಾ (Adah Sharma)* ಈ ಚಿತ್ರದ ಪ್ರಮುಖ ಪಾತ್ರವೊಂದರ ಮೂಲಕ ತಂಡವನ್ನು ಸೇರಿಕೊಂಡಿದ್ದಾರೆ. ತಮ್ಮ ವೈವಿಧ್ಯಮಯ ನಟನೆಯಿಂದ ಗುರುತಿಸಿಕೊಂಡಿರುವ ಅದಾ ಶರ್ಮಾ, ಈ ಸಿನಿಮಾದಲ್ಲಿ ಅತ್ಯಂತ ವಿಭಿನ್ನ ಮತ್ತು ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ತಾರಾಬಳಗಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ.

*"ಇಡೀ ಸೃಷ್ಟಿಯೇ ಪರಾಶಕ್ತಿಯ ಲೀಲೆ. ಹಾಲುಣಿಸುವವಳೂ ತಾಯಿ. ಮಣ್ಣು ಮುಕ್ಕಿಸುವವಳೂ ತಾಯಿ. ಆದರೆ ಹಾಲು ಯಾವುದು, ಮಣ್ಣು ಯಾವುದು ಅನ್ನುವುದರ ಅರಿವು ಪಡೆಯುವುದೇ ಇಡೀ ಬದುಕಿನ ಮಾಯೆ. ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸಲು ತಾಯಿ ರಾಮರಸದಲ್ಲಿ ಯಾವ ರೂಪ ತಾಳಿ ಬರಲಿದ್ದಾಳೆ? ಅದನ್ನು ನೋಡಿಯೇ ಸವಿಯಬೇಕು."*

*ಸ್ಟಾರ್‌ಗಳ ದಂಡು:*
ರಾಮರಸ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ವಿಜೇತ *ಕಾರ್ತಿಕ್ ಮಹೇಶ್, ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್, ಕಾಮಿಡಿ ಕಿಂಗ್ ಶರಣ್,* ಮತ್ತು ಗ್ಲಾಮರಸ್ ನಟಿ *ಹೆಬ್ಬಾ ಪಟೇಲ್* ಸೇರಿದಂತೆ ದೊಡ್ಡ ತಾರಾಗಣವೇ ಒಂದೇ ಪರದೆಯ ಮೇಲೆ ಅಬ್ಬರಿಸಲಿದೆ.

*ತಾಂತ್ರಿಕ ವರ್ಗ:*
ಈ ಚಿತ್ರಕ್ಕೆ *ಡಿಒಪಿ - ಕೃಷ್ಣ ಕುಮಾರ್ (KK), ಸಂಗೀತ ನಿರ್ದೇಶಕ - ಬಿ.ಜೆ. ಭರತ್, ಸಂಕಲನ - ಅರ್ಜುನ್ ಕಿಟ್ಟು, ಸಾಹಿತ್ಯ - ಡಾ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ, ಪುನೀತ್ ರಂಗಸ್ವಾಮಿ, ಕ್ರಿಯೇಟಿವ್ ಹೆಡ್ - ಗುರು ದೇಶಪಾಂಡೆ* ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

*ನಿರ್ಮಾಣ:*
*ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ* ಅವರು ಈ ಚಿತ್ರವನ್ನು *ಜಿ ಸಿನಿಮಾಸ್ ಪ್ರೊಡಕ್ಷನ್ (G Cinemas Production), ಸೆವೆನ್ ಸ್ಟಾರ್ ಮೂವೀಸ್ (Seven Star Movies) ಅಸೋಸಿಯೇಷನ್ ನೊಂದಿಗೆ* ಅತ್ಯಂತ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

*ಇನ್ನೂ ಕಾದಿದೆ ದೊಡ್ಡ ಸರ್ಪ್ರೈಸ್:*
ಚಿತ್ರತಂಡದ ಪ್ರಕಾರ ಇದು ಕೇವಲ ಆರಂಭವಷ್ಟೇ! ಚಿತ್ರದಲ್ಲಿರುವ ಇನ್ನೂ ಹಲವು ಪ್ರಮುಖ ಪಾತ್ರಗಳು ಹಾಗೂ ಯಾರೂ ಊಹಿಸದ ಸ್ಟಾರ್ ನಟರ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಒಂದೊಂದಾಗಿ ಪರಿಚಯಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

*ಉನ್ನತ ತಾಂತ್ರಿಕ ಗುಣಮಟ್ಟ:*
ಈ ಚಿತ್ರಕ್ಕೆ ಸದ್ಯ ಅತ್ಯುನ್ನತ ಮಟ್ಟದ ಎಡಿಟಿಂಗ್, ಗ್ರಾಫಿಕ್ಸ್ (VFX) ಮತ್ತು ಸೌಂಡ್ ಡಿಸೈನಿಂಗ್ ಕೆಲಸಗಳು ನಡೆಯುತ್ತಿದ್ದು, ಪ್ರೇಕ್ಷಕರಿಗೆ ದೃಶ್ಯ ವೈಭವದ ಅನುಭವ ನೀಡಲು ತಂಡ ಹಗಲಿರುಳು ಶ್ರಮಿಸುತ್ತಿದೆ.

ಚಿತ್ರೀಕರಣ ಮುಗಿದಿರುವುದರಿಂದ ಚಿತ್ರವನ್ನು ಆದಷ್ಟು ಬೇಗ ಬೆಳ್ಳಿಪರದೆಗೆ ತರಲು ಪೋಸ್ಟ್-ಪ್ರೊಡಕ್ಷನ್ ಸ್ಟುಡಿಯೋಗಳಲ್ಲಿ ಕೆಲಸಗಳು ಭರದಿಂದ ಸಾಗುತ್ತಿವೆ. ಶೀಘ್ರದಲ್ಲೇ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯ ದಿನಾಂಕ ಹಾಗೂ ಮುಂದಿನ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಅನಾವರಣಗೊಳಿಸಲಿದೆ.

2 hours ago | [YT] | 1

Southwood Talkies

*ಅನಿಲ್‌ ಶೆಟ್ಟಿ ನಟನೆಯ ‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್*

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ಮೇಘನಾ ಗಾಂವ್ಕರ್ ಮತ್ತೊಮ್ಮೆ ವಿಭಿನ್ನ ಹಾಗೂ ಸವಾಲಿನ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಖ್ಯಾತ ನಿರ್ದೇಶಕ ‘ಸಿಂಪಲ್’ ಸುನಿ ಆ್ಯಕ್ಷನ್ ಕಟ್ ಹೇಳುತ್ತಿರುವ, ಅನಿಲ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ವಿಶಿಷ್ಟ ‘ಸಾಧ್ವಿ’ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರ ತಮ್ಮ ನಿಜ ಜೀವನಕ್ಕೆ ಅಚ್ಚರಿಯ ರೀತಿಯಲ್ಲಿ ತೀರ ಹತ್ತಿರವಾಗಿದೆ ಎಂದು ಅವರು ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಟಿ ಮೇಘನಾ, "ಚಿತ್ರದಲ್ಲಿ ಆಕೆ ಒಬ್ಬ ಆಧ್ಯಾತ್ಮಿಕ ಗುರು. ಹೀಗಾಗಿ ಆ ಸಾಧ್ವಿ ಪಾತ್ರವು ಸದಾ ಸಂತೋಷ, ಜೀವನ ಮತ್ತು ಆಂತರಿಕ ಶಾಂತಿಯ ಬಗ್ಗೆ ಮಾತನಾಡುತ್ತದೆ. ಆಕೆ ಆಡುವ ಮಾತುಗಳು ಹಾಗೂ ವಿಚಾರಗಳ ಜೊತೆಗೆ ನಾನು ಸಂಪೂರ್ಣವಾಗಿ ಕನೆಕ್ಟ್ ಆಗಲು ಸಾಧ್ಯವಾಯಿತು. ಕಳೆದ ಕೆಲವು ವರ್ಷಗಳಿಂದ ನನ್ನ ವೈಯಕ್ತಿಕ ಬದುಕಿನಲ್ಲಿಯೂ ಒಂದು ಬಗೆಯ ನೆಮ್ಮದಿ ಹಾಗೂ ಆಂತರಿಕ ಶಾಂತಿ ದೊರೆತಿದೆ. ಹಾಗಾಗಿ ಚಿತ್ರದ ಸಂಭಾಷಣೆಗಳು ಕೂಡ ನನಗೆ ಅತ್ಯಂತ ಸಹಜವಾಗಿಯೇ ಒಲಿದುಬಂದವು. ನಿರ್ದೇಶಕ ಸುನಿ ಬಹುಶಃ ನನ್ನ ನೈಜ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿಯೇ ಈ ವಿಶಿಷ್ಟ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿರಬಹುದು" ಎಂದು ತಿಳಿಸಿದ್ದಾರೆ.

ಕೇವಲ ನಟನೆಯಷ್ಟೇ ಅಲ್ಲದೆ, ಈ ಪಾತ್ರದ ಪ್ರತಿಯೊಂದು ವಿವರಕ್ಕೂ ಚಿತ್ರತಂಡ ಸಾಕಷ್ಟು ಪೂರ್ವತಯಾರಿ ಹಾಗೂ ಅಧ್ಯಯನ ನಡೆಸಿದೆ. ಪಾತ್ರದ ವೇಷಭೂಷಣ ಮತ್ತು ಲುಕ್ ಬಗ್ಗೆ ಮಾತನಾಡಿದ ಮೇಘನಾ, "ನಾವಿಬ್ಬರೂ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೆವು. ದೇಶಾದ್ಯಂತ ಇರುವ ನೈಜ ಸಾಧ್ವಿಗಳ ಛಾಯಾಚಿತ್ರಗಳನ್ನು ಪರಿಶೀಲಿಸಿ, ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಹೊಸ ರೂಪ ಕೊಡಲು ನಿರ್ಧರಿಸಿದೆವು. ಆಕೆಗೆ ಸಾಂಪ್ರದಾಯಿಕ ಬಿಳಿ ವಸ್ತ್ರ ತೊಡಿಸುವ ಬದಲು ತಿಳಿ ಕೇಸರಿ ಬಣ್ಣದ ಶೇಡ್ಸ್ ಉಡುಪು ಆರಿಸಿಕೊಂಡೆವು. ಕ್ರಿಂಪ್ಡ್ ಹೇರ್ ಹಾಗೂ ನ್ಯಾಚುರಲ್ ಮೇಕಪ್ ಮೂಲಕ ಇಂದಿನ ಯುವ ಪೀಳಿಗೆಗೂ ಪಾತ್ರ ಆಕರ್ಷಕವಾಗಿ, ಹೊಸತನದಿಂದ ಕಾಣುವಂತೆ ವಿನ್ಯಾಸಗೊಳಿಸಿದ್ದೇವೆ" ಎಂದು ವಿವರಿಸಿದ್ದಾರೆ.

ತಮ್ಮ ಸಿನಿಮಾ ಆಯ್ಕೆಗಳ ಕುರಿತು ಸ್ಪಷ್ಟತೆ ಮೆರೆದಿರುವ ಅವರು, "ನನ್ನ ಗುರಿ ಕೇವಲ ಗ್ಲಾಮರಸ್ ನಾಯಕಿಯಾಗಿ ಅಥವಾ ತೆರೆಯ ಮೇಲೆ ಯಾರದ್ದೋ ಪ್ರೇಯಸಿಯಾಗಿ ನಟಿಸುವುದಷ್ಟೇ ಅಲ್ಲ. ಅಂತಹ ಪಾತ್ರಗಳು ಸಾಮಾನ್ಯವಾಗಿ ಸುಖಾಂತ್ಯದೊಂದಿಗೆ ಮುಗಿದುಹೋಗುತ್ತವೆ. ಆದರೆ ಇಂತಹ ವಿಭಿನ್ನ ಮತ್ತು ಪ್ರಬುದ್ಧ ಪಾತ್ರಗಳು ಸಿಕ್ಕಾಗ ಹೊಸ ಪ್ರಯೋಗಗಳನ್ನು ಮಾಡಲು ನಟಿಯಾಗಿ ದೊಡ್ಡ ಅವಕಾಶ ಸಿಗುತ್ತದೆ. ಸಾಧ್ವಿಯ ಪಾತ್ರ ಮಾಡುವುದು, ಸಂತೋಷ ಮತ್ತು ನೆಮ್ಮದಿಯ ಜೀವನದ ಬಗ್ಗೆ ಬೋಧನೆ ನೀಡುವುದು ನನಗೆ ಸಹಜ ಮುನ್ನಡೆಯಂತೆ ಅನ್ನಿಸಿತು. ಏಕೆಂದರೆ ವೈಯಕ್ತಿಕವಾಗಿಯೂ ನಾನು ಈಗ ಬದುಕಿನ ಅದೇ ಶಾಂತಿಯುತ ಹಂತದಲ್ಲಿದ್ದೇನೆ" ಎಂದು ಹೇಳಿದ್ದಾರೆ.

15 hours ago | [YT] | 2

Southwood Talkies

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ 'ಬೇಲ್' ಚಿತ್ರದ ಅಧಿಕೃತ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾದ ಟ್ರೇಲರ್‌ನಲ್ಲಿ ಪೋಲಿಸ್ ಆಕ್ಷನ್, ನ್ಯಾಯದ ಹೋರಾಟ, ರೋಚಕ ಸಂಘರ್ಷ ಮತ್ತು ತೀವ್ರ ಭಾವನಾತ್ಮಕ ಮುಖಾಮುಖಿಗಳ ಝಲಕ್ ಅನ್ನು ಸಿನಿಪ್ರಿಯರ ಮುಂದಿಟ್ಟಿದೆ. ಟ್ರೈಲರ್ ಮೂಲಕವೇ ಹೈ-ವೋಲ್ಟೇಜ್ ಸಿನಿಮಾ ಅನುಭವದ ಭರವಸೆ ಮೂಡಿಸಿರುವ ಈ ಚಿತ್ರವು ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಶಿವರಾಜಕುಮಾರ್ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್, ಅಬ್ಬರದ ಪೋಲಿಸ್ ಅವತಾರ ಹಾಗೂ ರೋಮಾಂಚಕ ದೃಶ್ಯ ವೈಭವದಿಂದಾಗಿ ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ.

ಚಿತ್ರದಲ್ಲಿ ಶಿವರಾಜಕುಮಾರ್ ದೃಢನಿಶ್ಚಯದ, ಕಟ್ಟುನಿಟ್ಟಿನ ಹಾಗೂ ನಿರ್ಭೀತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಪರಾಧ ಮತ್ತು ನ್ಯಾಯದ ನಡುವಿನ ಜಟಿಲ ಜಗತ್ತಿನಲ್ಲಿ ಎದುರಾಗುವ ಯಾವುದೇ ಆಪತ್ತಿಗೂ ಅಂಜದೆ ಧೈರ್ಯವಾಗಿ ನಿಲ್ಲುವ ಖಡಕ್ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಕೇವಲ ಪೋಲಿಸ್ ವರ್ಸಸ್ ಕ್ರಿಮಿನಲ್ ನಡುವಿನ ಕಥೆಯಾಗಷ್ಟೇ ಉಳಿಯದೆ, ಕೌಟುಂಬಿಕ ಭಾವನಾತ್ಮಕ ತಿರುಳನ್ನು ಹೊಂದಿರುವುದು 'ಬೇಲ್' ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್. ಈ ಚಿತ್ರವನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗಿಸುವ ಲಕ್ಷಣಗಳನ್ನು ತೋರುತ್ತಿದೆ. ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದಕ್ಷಿಣ ಭಾರತದ ಬೃಹತ್ ವೆಚ್ಚದ ಸಿನಿಮಾಗಳ ಮೂಲಕ ಗಮನಸೆಳೆದಿರುವ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ಬಹುದೊಡ್ಡ ಪ್ರತಿಭೆಗಳ ದಂಡೇ ಇದೆ. ಶಿವರಾಜಕುಮಾರ್ ಅವರಿಗೆ ಸಾಥ್ ನೀಡಲು ಡೈಲಾಗ್ ಕಿಂಗ್ ಸಾಯಿಕುಮಾರ್, ಬಹುಭಾಷಾ ನಟ ಜಯರಾಮ್, ಲೂಸ್ ಮಾದ ಯೋಗೇಶ್, ದೀಕ್ಷಿತ್‌ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಕಥೆಯಲ್ಲಿ ಸಮಾನ ತೂಕವಿದ್ದು, ಪಾತ್ರಗಳ ನಡುವಿನ ಸಂಘರ್ಷದ ಸಣ್ಣ ತುಣುಕುಗಳು ಟ್ರೈಲರ್‌ನ ವೇಗ ಮತ್ತು ರೋಚಕತೆಯನ್ನು ಹೆಚ್ಚಿಸಿವೆ.

ಸುಮಾರು ಎರಡೂವರೆ ನಿಮಿಷಗಳ ಈ ಟ್ರೈಲರ್‌ಗೆ ಚುರುಕಾದ ಸಂಕಲನ, ಪವರ್‌ಫುಲ್ ಸಂಭಾಷಣೆಗಳು ಮತ್ತು ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಜೀವ ತುಂಬಿದೆ. ಖ್ಯಾತ ಸರೇಗಮ ಸೌತ್ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ದೊಡ್ಡ ಮಟ್ಟದ ಪ್ರಚಾರ ಅಭಿಯಾನಕ್ಕೆ ಕೈಜೋಡಿಸಿದೆ. ಒಟ್ಟಾರೆಯಾಗಿ, ಶಿವಣ್ಣನ ಖಡಕ್ ಖಾಕಿ ಅವತಾರ ಹಾಗೂ ಭರ್ಜರಿ ಮಾಸ್-ಎಮೋಷನಲ್ ಡ್ರಾಮಾವನ್ನು ಹೊತ್ತು ತರುತ್ತಿರುವ 'ಬೇಲ್' ಅಕ್ಟೋಬರ್ 2 ರಂದು ಬೆಳ್ಳಿತೆರೆಗೆ ಬರಲು ಸಂಪೂರ್ಣ ಸಜ್ಜಾಗಿದೆ.

18 hours ago | [YT] | 6

Southwood Talkies

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ ಕಥೆ

ಬೆಂಗಳೂರು: ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ ಆಯಾಮಗಳನ್ನು ತಮ್ಮದೇ ಸರಳ ಹಾಗೂ ಭಾವನಾತ್ಮಕ ನಿರೂಪಣೆಯ ಮೂಲಕ ಕಟ್ಟಿಕೊಡುವ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಹೊಸ ಚಿತ್ರ ‘ಮೈ ಬೇಬಿ’. ಸುಮಖ ಮತ್ತು ಈಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ಹೊಸ ತಲೆಮಾರಿನ ಪ್ರೀತಿ ಮತ್ತು ಸಂಬಂಧಗಳನ್ನು ಅವರದೇ ಬದುಕಿನ ದೃಷ್ಟಿಕೋನದಲ್ಲಿ ಕಟ್ಟಿಕೊಡುವ ಕಥೆಯಾಗಿದೆ.

ಪ್ರೀತಿಗೆ ಕಾಲಾತೀತವಾದ ಒಂದು ಭಾವವಿದ್ದರೂ, ಅದನ್ನು ಬದುಕುವ ರೀತಿ ಪ್ರತಿ ತಲೆಮಾರಿನಲ್ಲೂ ಬದಲಾಗುತ್ತಲೇ ಇರುತ್ತದೆ. ಇಂದಿನ ತಲೆಮಾರಿನ ಸ್ವಾತಂತ್ರ್ಯ, ವೈಯಕ್ತಿಕ ಆಯ್ಕೆಗಳು ಮತ್ತು ಸಂಬಂಧಗಳ ಕುರಿತ ಹೊಸ ದೃಷ್ಟಿಕೋನವನ್ನು ‘ಮೈ ಬೇಬಿ’ ತನ್ನ ಕಥೆಯ ಮೂಲಕ ತೆರೆದಿಡುತ್ತದೆ.

“ಪ್ರತಿ ತಲೆಮಾರಿನಲ್ಲೂ ಪ್ರೀತಿಯನ್ನು ಹೊಸ ರೀತಿಯಲ್ಲಿ ಹೇಳಬೇಕಾಗುತ್ತದೆ. ಪ್ರೀತಿಯ ಮೂಲಭಾವ ಒಂದೇ ಆಗಿದ್ದರೂ, ಪ್ರತಿ ಪೀಳಿಗೆಯ ಬದುಕಿನ ಸಂದರ್ಭಗಳು, ಸಂಘರ್ಷಗಳು ಮತ್ತು ಸಮಸ್ಯೆಗಳು ಬದಲಾಗುತ್ತವೆ. ಆ ಬದಲಾವಣೆಯನ್ನು ಕಥೆಗಳು ಗುರುತಿಸಬೇಕು,” ಎನ್ನುತ್ತಾರೆ ಪ್ರೀತಮ್ ಗುಬ್ಬಿ.

ಇಂದಿನ ಯುವಜನರ ಬದುಕಿನಲ್ಲಾಗಿರುವ ಬದಲಾವಣೆಯೂ ಈ ಚಿತ್ರದ ಪ್ರಮುಖ ಅಂಶ. ಹಿಂದಿನ ಪೀಳಿಗೆಗಳಿಗೆ ಹೋಲಿಸಿದರೆ ಇಂದಿನ ತಲೆಮಾರು ಹೆಚ್ಚು ಸ್ವತಂತ್ರವಾಗಿ, ತಮ್ಮದೇ ನಿರ್ಧಾರಗಳ ಬಗ್ಗೆ ಸ್ಪಷ್ಟತೆಯಿಂದ ಬದುಕುತ್ತಿದೆ. ಸಂಬಂಧಗಳಲ್ಲಿಯೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ತಮ್ಮದೇ ಬದುಕಿನ ಅರ್ಥವನ್ನು ಹುಡುಕುವ ಮನೋಭಾವ ಹೆಚ್ಚಾಗಿದೆ.

“ಇಂದಿನ ತಲೆಮಾರು ಹೆಚ್ಚು ಸ್ವಾವಲಂಬಿ. ತಮ್ಮ ಬದುಕಿನ ಬಗ್ಗೆ ಅವರಿಗೆ ಹೆಚ್ಚು ಸ್ಪಷ್ಟತೆ ಇದೆ. ಹಿಂದಿನ ಪೀಳಿಗೆಯವರಿಗಿದ್ದ ಕೆಲವು ಬಂಧಗಳು ಮತ್ತು ಅವಲಂಬನೆಗಳು ಇವರಲ್ಲಿ ಕಡಿಮೆ. ‘ಮೈ ಬೇಬಿ’ ಅಂತಹ ಇಬ್ಬರು ವ್ಯಕ್ತಿಗಳ ಕಥೆ. ಅವರು ಒಟ್ಟಿಗೆ ಸಾಗುವ ಪಯಣದಲ್ಲಿ ಬದುಕನ್ನೂ, ಪ್ರೀತಿಯನ್ನೂ ಹೊಸ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತಾರೆ,” ಎನ್ನುತ್ತಾರೆ ಅವರು.

‘ಮೈ ಬೇಬಿ’ಯಲ್ಲಿ ಪ್ರೀತಿ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವಾಗಿ ಸೀಮಿತವಾಗುವುದಿಲ್ಲ. ಒಟ್ಟಿಗೆ ಬದುಕಿನ ಪಯಣವನ್ನು ಕೈಗೊಳ್ಳುವಾಗ ಅವರ ಆಯ್ಕೆಗಳು, ಬದಲಾಗುವ ದೃಷ್ಟಿಕೋನಗಳು ಮತ್ತು ಪರಸ್ಪರರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೇ ಕಥೆಯ ಭಾವನಾತ್ಮಕ ಹೂರಣ.

ಚಿತ್ರದ ಚಿತ್ರೀಕರಣ ಹಿಮಾಚಲ ಪ್ರದೇಶ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಕಥೆಯಲ್ಲಿನ ಇಬ್ಬರು ನಾಯಕ-ನಾಯಕಿಯರ ಪಯಣಕ್ಕೆ ಈ ಎರಡು ವಿಭಿನ್ನ ಪರಿಸರಗಳು ವಿಶೇಷ ಆಯಾಮ ನೀಡಲಿವೆ.

ಚಿತ್ರಕ್ಕೆ ಅಭಿಲಾಷ್ ಕಲಾತಿ ಛಾಯಾಗ್ರಹಣ ಮಾಡುತ್ತಿದ್ದು, ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ರಂಗನಾಥ್ ಕೆಂಪನಹಳ್ಳಿ ಮತ್ತು ಅಥರ್ವ್ ಆರ್. ಕೆಂಪನಹಳ್ಳಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಹೊಸ ತಲೆಮಾರಿನ ಪ್ರೀತಿ ಮತ್ತು ಸಂಬಂಧಗಳನ್ನು ಅವರದೇ ಬದುಕಿನ ಭಾಷೆಯಲ್ಲಿ ಹೇಳುವ ‘ಮೈ ಬೇಬಿ’, ಸಾರ್ವಕಾಲಿಕವಾದ ಪ್ರೀತಿಯ ಭಾವನೆಯನ್ನು ಸಮಕಾಲೀನ ಅನುಭವಗಳೊಂದಿಗೆ ಜೋಡಿಸುವ ಪ್ರಯತ್ನವಾಗಿದೆ.

18 hours ago | [YT] | 6

Southwood Talkies

ನಿರ್ಮಾಪಕಿ ರಾಧಾ ಅವರ ರಾಧಾ ಫಿಲಮ್ಸ್ ಲಾಂಛನದಲ್ಲಿ, ಪ್ರತಿಭಾವಂತ ನಿರ್ದೇಶಕ ಅಗಸ್ತ್ಯ ಅವರ ನಿರ್ದೇಶನದ ಜೊತೆಗೆ ಸ್ವತಃ ನಾಯಕರಾಗಿ ಅಭಿನಯಿಸಿರುವ ಬಹುನಿರೀಕ್ಷಿತ 'ಮಾರಿಗೆ ದಾರಿ' ಸಿನಿಮಾ ನವೆಂಬರ್ 20 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಳ್ಳಲಿದೆ!

A FILM By - AGASTYA
Hero - AGASTYA
Producer - RADHA
Banner - RADHA FILMS

@radha_films
@director_agastya
@mandya_star_ananth
@cockroch.sudhi
@jagadish_rj
@rio_musix
@the_tattoo_ghost


#radhafilms
#maarigedaari
#directoragastya
#mandyastarananath
#cockrochsudhi
#thetattooghost

2 days ago | [YT] | 9

Southwood Talkies

*​ಬೆಳ್ಳಿಪರದೆಯ ಮೇಲೆ ಮರುಜೀವ ಪಡೆಯಲಿದೆ 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ ಅಮರ ಕಥನ!*


​ಕೆಲವು ಧ್ವನಿಗಳು ಕೇಳಿಸುತ್ತವೆ, ಕೆಲವು ನೆನಪಿನಲ್ಲಿ ಉಳಿಯುತ್ತವೆ, ಆದರೆ ಇನ್ನು ಕೆಲವು ನಾದಗಳು ದೇಶದ ಆತ್ಮದ ಭಾಗವಾಗಿಯೇ ಬರೆದುಹೋಗುತ್ತವೆ. ಅಂತಹ ಅಪರೂಪದ ಸಂಗೀತ ಮಹಾವೃಕ್ಷ, ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ ಜೀವನಾಧಾರಿತ ಚಿತ್ರ (ಬಯೋಪಿಕ್) ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ಪವಿತ್ರ ಕ್ಷೇತ್ರವಾದ ಚೆನ್ನೈನ 'ದಿ ಮ್ಯೂಸಿಕ್ ಅಕಾಡೆಮಿ'ಯಲ್ಲಿ, ಅವರ 110ನೇ ಜಯಂತಿಯ ಶುಭ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಪ್ರಕಟಿಸಲಾಗಿದೆ.


​ಅನೇಕ ವರ್ಷಗಳ ನಿರಂತರ ಶ್ರಮ, ಸೂಕ್ತ ಹಕ್ಕುಗಳು, ಸಾಹಿತ್ಯಿಕ ಮೂಲಗಳು ಹಾಗೂ ಕುಟುಂಬದ ಸಮ್ಮತಿಯನ್ನು ಪಡೆದುಕೊಂಡು, ಅತ್ಯಂತ ಗೌರವ ಮತ್ತು ಸತ್ಯಸಂಧತೆಯಿಂದ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಎಂ.ಎಸ್. ಅಮ್ಮನವರ ಭಕ್ತಿ, ಶ್ರದ್ಧೆ ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಅವರು ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಈ ಬಯೋಪಿಕ್ ನಿರ್ಮಾಣವಾಗುತ್ತಿದೆ.


​ಈ ಮಹತ್ವದ ಚಿತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ ಪಾತ್ರವನ್ನು ಇಂದಿನ ತಲೆಮಾರಿನ ಅತ್ಯಂತ ಜನಪ್ರಿಯ ನಟಿ ರಾಶ್ಮಿಕಾ ಮಂದಣ್ಣ ಪೋಷಿಸುತ್ತಿದ್ದಾರೆ. ಕೇವಲ ಒಬ್ಬ ಗಾಯಕಿಯಾಗಿ ಮಾತ್ರವಲ್ಲದೆ, ಅವರ ಜೀವನದ ಭಾವನೆಗಳು, ಹೋರಾಟಗಳು, ಆಧ್ಯಾತ್ಮಿಕ ಪಯಣ ಹಾಗೂ ಶಕ್ತಿಯನ್ನು ಪ್ರೇಕ್ಷಕರ ಮುಂದೆ ಅತ್ಯಂತ ರೋಚಕವಾಗಿ ತೆರೆದಿಡಲು ರಾಶ್ಮಿಕಾ ಸಜ್ಜಾಗಿದ್ದಾರೆ.


​ಇನ್ನು ಈ ಐತಿಹಾಸಿಕ ಬಯೋಪಿಕ್‌ಗೆ ಯುವಜನರ ನೆಚ್ಚಿನ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕಾಲಾತೀತ ಶಾಸ್ತ್ರೀಯ ರಾಗಗಳು ಹಾಗೂ ಇಂದಿನ ಯುವ ಪೀಳಿಗೆಯ ನಡುವೆ ಅದ್ಭುತ 'ಸಂಗೀತ ಸೇತುವೆ' ನಿರ್ಮಿಸುವ ಹೊಣೆಗಾರಿಕೆಯನ್ನು ಅವರು ವಹಿಸಿಕೊಂಡಿದ್ದಾರೆ. ಭಾವನಾತ್ಮಕ ಕಥಾಹಂದರಕ್ಕೆ ಹೆಸರಾದ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಈ ಬೃಹತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


​ಇದು ಕೇವಲ ಒಬ್ಬ ಗಾಯಕಿಯ ಕಥೆಯಲ್ಲ; ಸಂಗೀತವನ್ನು ಭಕ್ತಿಯನ್ನಾಗಿ, ಭಕ್ತಿಯನ್ನು ಭಾವನೆಯನ್ನಾಗಿ ಪರಿವರ್ತಿಸಿ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ಮಹಾನ್ ಚೇತನದ ಪಯಣ. ಜಾಗತಿಕ ವೇದಿಕೆಗಳಲ್ಲಿ ಪ್ರತಿಧ್ವನಿಸಿದ ಆ ಅಮರ ಧ್ವನಿ, ಈಗ ಬೆಳ್ಳಿಪರದೆಯ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ.

5 days ago | [YT] | 8

Southwood Talkies

*ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ‘ರಣಬಾಲಿ’ ಟೀಸರ್ ರಿಲೀಸ್: ದಸರಾ ಹಬ್ಬಕ್ಕೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಿಡುಗಡೆ!*

ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯನ್ ಕಾಂಬಿನೇಷನ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ.

1854 ರಿಂದ 1878ರ ನಡುವಿನ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ರಾಯಲಸೀಮೆ ಪ್ರಾಂತ್ಯದಲ್ಲಿ ನಡೆದ ರೋಚಕ ನೈಜ ಘಟನೆಗಳನ್ನು ಆಧರಿಸಿ ಈ ಪಿರಿಯಾಡಿಕ್ ಡ್ರಾಮಾವನ್ನು ತೆರೆಗೆ ತರಲಾಗುತ್ತಿದ್ದು, ಚಿತ್ರದಲ್ಲಿ ವಿಜಯ್ ದೇವರಕೊಂಡ ಶಕ್ತಿಶಾಲಿ ಯೋಧನಾಗಿ ಅಬ್ಬರಿಸಿದ್ದಾರೆ. ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿರುವ ಈ ಬೃಹತ್ ಕ್ಯಾನ್ವಾಸ್‌ನ ಸಿನಿಮಾ, ದಸರಾ ಹಬ್ಬದ ವಿಶೇಷ ಕೊಡುಗೆಯಾಗಿ ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.

ಚಿತ್ರದಲ್ಲಿ ವಿಜಯ್ ದೇವರಕೊಂಡ ‘ರಣಬಾಲಿ’ ಎಂಬ ಪರಾಕ್ರಮಿ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಪತ್ನಿ 'ಜಯಮ್ಮ'ನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಇನ್ನು ಹಾಲಿವುಡ್‌ನ ಖ್ಯಾತ ನಟ ಅರ್ನಾಲ್ಡ್ ವೋಸ್ಲೂ ಈ ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿ ಹಾಗೂ ಮುಖ್ಯ ಖಳನಾಯಕನಾಗಿ ಅಖಾಡಕ್ಕಿಳಿದಿರುವುದು ಚಿತ್ರದ ತೂಕವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಜೊತೆಯಾಗಿ ಮಿಂಚಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ವಿಜಯ್ ಮತ್ತು ರಶ್ಮಿಕಾ, ಈ ಚಿತ್ರದ ಮೂಲಕ ಮೂರನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ದಂಪತಿಯಾದ ನಂತರ ಈ ಹಿಟ್ ಜೋಡಿಯಿಂದ ಬರುತ್ತಿರುವ ಮೊದಲ ಸಿನಿಮಾ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.

ಟೀಸರ್ ಹಂಚಿಕೊಂಡು ಕಥೆಯ ಗಾಂಭೀರ್ಯದ ಬಗ್ಗೆ ತಿಳಿಸಿರುವ ಚಿತ್ರತಂಡ, "ಅವರು ಆ ಕಥೆಯನ್ನು ಹೂತುಹಾಕಿದರು... ಅವರು ಆ ಹೆಸರನ್ನು ಅಳಿಸಿಹಾಕಿದರು. ತಮ್ಮ ಪಾಪಗಳನ್ನು ತೊಡೆದುಹಾಕಲು ಯತ್ನಿಸಿದರು. ಆದರೆ ಆತನ ಎದೆಯಲ್ಲಿದ್ದ ರೌದ್ರಾಗ್ನಿಯನ್ನು ಮಾತ್ರ ಯಾರಿಂದಲೂ ಹೂತುಹಾಕಲು ಸಾಧ್ಯವಾಗಲಿಲ್ಲ. ಜಾನಪದ ಕಥೆಗಳು ಮತ್ತು ಇತಿಹಾಸ ಆತನನ್ನು ಎಂದಿಗೂ ಮರೆಯುವುದಿಲ್ಲ. ಇದು ರಣಬಾಲಿ ಎಂಬ ಯೋಧನ ಪ್ರತಿಜ್ಞೆ" ಎಂದು ರೋಷಾವೇಷದ ಸಾಲುಗಳನ್ನು ಹಂಚಿಕೊಂಡಿದೆ. ಮತ್ತೊಂದೆಡೆ ನಾಯಕ ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, "ಅತಿಥಿಗಳಾಗಿ ಬಂದು ಕ್ರೂರ ಶೋಷಕರಾಗಿ ಉಳಿದುಬಿಟ್ಟವರನ್ನು ಹಾಗೂ ಅವರ ವಿರುದ್ಧ ರಕ್ತ ಹರಿಸಲು ನಿರ್ಧರಿಸಿದ ನಮ್ಮ ಹಳ್ಳಿಗಳ ಸ್ವಾಭಿಮಾನಿ ಜನರನ್ನು ಎಂದಿಗೂ ಮರೆಯಬೇಡಿ" ಎಂದು ಬರೆದುಕೊಂಡು ಕಥೆಯ ಕ್ರಾಂತಿಕಾರಿ ಹಿನ್ನೆಲೆಯನ್ನು ಅನಾವರಣಗೊಳಿಸಿದ್ದಾರೆ.

ಟಿ-ಸೀರೀಸ್ ಅರ್ಪಣೆಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಮೆಗಾ ಪ್ರಾಜೆಕ್ಟ್ ಅನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಭಾರತದ ಖ್ಯಾತ ಸಂಗೀತ ಜೋಡಿ ಅಜಯ್-ಅತುಲ್ ಶಕ್ತಿಶಾಲಿ ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದು, ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಅವರ ಅದ್ಭುತ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣವು ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿವೆ. ಐತಿಹಾಸಿಕ ಕಥಾಹಂದರ ಹಾಗೂ ಮೈನವಿರೇಳಿಸುವ ಸಾಹಸ ದೃಶ್ಯಗಳೊಂದಿಗೆ ‘ರಣಬಾಲಿ’ ಇದೇ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.

1 week ago | [YT] | 16

Southwood Talkies

https://youtu.be/0yECAVwgwrw?si=pIdTl...

Presenting the Alakh Niranjan lyrical video , above is the link💁🏻‍♀️

2 weeks ago | [YT] | 23

Southwood Talkies

*ಕಮಲ್ ಹಾಸನ್ – ಎಸ್.ಯು. ಅರುಣ್ ಕುಮಾರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ; ವೈರಲ್ ಆಯ್ತು ಲುಕ್ ಟೆಸ್ಟ್!*

ಕಮಲ್ ಹಾಸನ್ ಅವರ ಮುಂಬರುವ ಹೊಸ ಚಿತ್ರದ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ. ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದ ಲುಕ್ ಟೆಸ್ಟ್ ಸೆ.2ರಂದು ನಡೆದಿದ್ದು, ಅದಕ್ಕೆ ಸಂಬಂಧಿಸಿದ ಝಲಕ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಸಿನಿಪ್ರಿಯರು ಹಾಗೂ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಕಮಲ್ ಹಾಸನ್ ಅವರ ಈ ಹೊಚ್ಚಹೊಸ ಲುಕ್ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕಮಲ್ ಹಾಸನ್ ಮತ್ತು ನಿರ್ದೇಶಕ ಎಸ್.ಯು. ಅರುಣ್ ಕುಮಾರ್ ಜೋಡಿಯಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈ ಕಾಂಬಿನೇಷನ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದಾ ಹೊಸತನವನ್ನು ಮೈಗೂಡಿಸಿಕೊಂಡು, ವಿಭಿನ್ನ ಪಾತ್ರಗಳ ಮೂಲಕ ಹೊಸ ಪ್ರಯೋಗಗಳನ್ನು ಮಾಡುವ ಕಮಲ್ ಹಾಸನ್ ಅವರ ಈ ಹೊಸ ಅವತಾರ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಚಿತ್ರದ ಕಥಾಹಂದರವನ್ನು ರಹಸ್ಯವಾಗಿಟ್ಟಿದ್ದರೂ, ಈ ಸಿನಿಮಾ ಪ್ರೇಕ್ಷಕರನ್ನು ಎಂತಹ ಹೊಸ ಲೋಕಕ್ಕೆ ಕರೆದೊಯ್ಯಲಿದೆ ಎಂಬುದರ ಸಣ್ಣ ಸುಳಿವನ್ನು ಈ ಲುಕ್ ನೀಡಿದೆ.

ಬಹುನಿರೀಕ್ಷಿತ ಈ ಚಿತ್ರವನ್ನು ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮತ್ತು ಟರ್ಮರಿಕ್ ಮೀಡಿಯಾ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿದ್ದು, ಈ ಪ್ರತಿಷ್ಠಿತ ಸಹಭಾಗಿತ್ವವು ಚಿತ್ರದ ತೂಕವನ್ನು ಹೆಚ್ಚಿಸಿದೆ. ಕಮಲ್ ಹಾಸನ್ ನಾಯಕರಾಗಿ, ಎಸ್.ಯು. ಅರುಣ್ ಕುಮಾರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ, ಶೂಟಿಂಗ್ ಆರಂಭಕ್ಕೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಲುಕ್ ಟೆಸ್ಟ್ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಸಿನಿಮಾದ ಕುರಿತಾದ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

2 weeks ago | [YT] | 13

Southwood Talkies

ಪ್ರಣಯದ ಪುಸ್ತಕ ಪ್ರತಿ ಪುಟದಲ್ಲೂ..ನಮ್ಮ ಹೆಸರೇ ಅಚ್ಚಾಗಿದೆ.. 'ಚೆಲುವೆ ಕೇಳೇ ಚೆಲುವೆ'
First single 'Cheluve Kele cheluve’ OUT NOW on @saregama_kannada

#Bail @kvn.productions @nimmashivarajkumar @officialsaikumar @actorjayaram_official @loosemada_yogi @Pavanwadeyar @b_ajaneesh @vaidysomasundaram @apekshapurohit @wadeeyarmovies @saregama_kannada @dheekshithshettyofficial @sanjanaa_anand @sangitha.act @harisharasu_pro @the_Biglittle #BailTeaser #BailOnOct2

2 weeks ago | [YT] | 14