Southwood Talkies 

We are passionate about giving you nothing but the best in entertainment.
Do you feel the need to connect your brand to the vast digital audience without making them feel like it's an ad they just watched? SWT came into existence as an answer


Southwood Talkies

Here’s #Ramayana Karnataka theatres list. 🏹

Many more to be added. 💥
Experience the epic on the big screen from November 5 ✨

Book your tickets now. 🏹
KARNATAKA Release by #MonsterMindCreations

#RamayanaOnNov5th
#RamayanabyNamitMalhotra

@malhotra_namit @niteshtiwari22 @TheNameIsYash #RanbirKapoor @Sai_Pallavi92 @iamsunnydeol @_ravidubey @HansZimmer @arrahman @IMAX @PF__Studios @dneg #MonsterMindCreations @worldofRamayana @Tseries

5 days ago | [YT] | 75

Southwood Talkies

*NEE NANGE ALLAVA Trailer releasing on OCT 31*

Not just a love story… ❤️‍🔥
It’s an emotion, an experience, and a story waiting to unfold! 🎬🔥

Get ready to witness love beyond the ordinary. ❤️‍🔥

#NeeNangeAllava #Manojpnadalumane #KannadaCinema #SuramMovies
#Rahularcot

1 week ago | [YT] | 1

Southwood Talkies

‘ಈ ಬದುಕಿಗೆ' in the magical voice of @sanjithhegde
First Video Song Out On @saregama_kannada | This Nov 1st

@dheerenrk @sandeep_sunkada @amruthaprem._ @geetha_shivarajkumar @geethapictures @yatheesh_n_kollegal @aryangowda600 @mayurambekallu @raovishwajith @saregama_kannada @the_biglittle @harisharasu_pro

#PabbarDec11

1 week ago | [YT] | 11

Southwood Talkies

Janumada Jodi song out now from #Ramayana 🏹

https://youtu.be/fQIfJpRa5BU

In cinemas worldwide from 5th November ✨

Book your tickets now. 🏹
AP & TG by @SVCRelease

#RamayanaOnNov5th
#RamayanabyNamitMalhotra

@malhotra_namit @niteshtiwari22 @TheNameIsYash #RanbirKapoor @Sai_Pallavi92 @iamsunnydeol @_ravidubey @HansZimmer @arrahman @IMAX @PF__Studios @dneg #MonsterMindCreations @worldofRamayana @Tseries

1 week ago | [YT] | 39

Southwood Talkies

*ರಮೇಶ್ ಅರವಿಂದ್ ಅವರ 106ನೇ ಚಿತ್ರ ‘ದೈಜಿ’ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ; ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟ*

*ಶಿವಶ್ರೀ ಸ್ಕಂದ ಗಾಯನ, ಡಾಲಿ ಧನಂಜಯ್ ಸಾಹಿತ್ಯ, ಸೋನು ನಿಗಮ್ ಧ್ವನಿ ಚಿತ್ರದ ವಿಶೇಷ ಆಕರ್ಷಣೆ*

ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ ‘ದೈಜಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತ ತಲುಪಿವೆ. ಸದ್ಯ ಸೌಂಡ್ ಮಿಕ್ಸಿಂಗ್ ಹಾಗೂ ವಿಎಫ್‌ಎಕ್ಸ್‌ನ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ರಮೇಶ್ ಅರವಿಂದ್ ಅವರ ವೃತ್ತಿಜೀವನದ 106ನೇ ಚಿತ್ರ ಎಂಬುದು ‘ದೈಜಿ’ಯ ವಿಶೇಷತೆ.

ರವಿ ಕಶ್ಯಪ್ ಹಾಗೂ ಸುಧಾ ಕಶ್ಯಪ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ಮಾಪಕ ರವಿ ಕಶ್ಯಪ್ ಅವರು ತಿಳಿಸಿರುವ ನೈಜ ಘಟನೆಗಳನ್ನು ಆಧರಿಸಿ ಚಿತ್ರದ ಕಥೆ ಹಾಗೂ ಚಿತ್ರಕಥೆಯನ್ನು ಅಭಿಜಿತ್ ವೈ.ಆರ್. ಮತ್ತು ಆಕಾಶ್ ಶ್ರೀವತ್ಸ ರಚಿಸಿದ್ದಾರೆ. ನೈಜ ಘಟನೆಗಳ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿರುವ ‘ದೈಜಿ’ ವಿಭಿನ್ನ ನಿರೂಪಣೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದೆ.

ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್, ಬಿ.ಎಂ. ಗಿರಿರಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅಲೆಕ್ಸಾಂಡರ್ ಟೈಲರ್, ಸ್ಯಾಂಡಿ ಹಿಗಿನ್ಸ್ ಸೇರಿದಂತೆ ವಿದೇಶಿ ಕಲಾವಿದರೂ ಚಿತ್ರದ ಭಾಗವಾಗಿದ್ದಾರೆ.

*ಮೂವರು ಸಂಗೀತ ನಿರ್ದೇಶಕರಿಂದ ವಿಭಿನ್ನ ಸಂಗೀತದ ಅನುಭವ*

‘ದೈಜಿ’ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಸಂಗೀತವೂ ಒಂದು. ಜುಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದ ಕೆಲಸವೂ ಪೂರ್ಣಗೊಂಡಿದೆ. ಹಾರರ್ ಚಿತ್ರಗಳಿಗೆ ಹಾಲಿವುಡ್ ಶೈಲಿಯಲ್ಲಿ ನೀಡುವ ಸೌಂಡ್ ಟ್ರೀಟ್‌ಮೆಂಟ್ ಅನ್ನು ಕನ್ನಡದ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವನ್ನು ಜುಡಾ ಸ್ಯಾಂಡಿ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ವಿಶಿಷ್ಟ ಧ್ವನಿ ಅನುಭವ ನೀಡುವುದು ಚಿತ್ರತಂಡದ ಉದ್ದೇಶವಾಗಿದೆ.

ಜುಡಾ ಸ್ಯಾಂಡಿ ಸಂಗೀತ ಸಂಯೋಜನೆಯಲ್ಲಿ ವಿಶೇಷ ಇಂಗ್ಲಿಷ್ ಹಾಡೊಂದನ್ನು ರೂಪಿಸಲಾಗಿದೆ. ನಿರ್ಮಾಪಕ ರವಿ ಕಶ್ಯಪ್ ಅವರ ಪುತ್ರಿ ವಿಭಾ ಕಶ್ಯಪ್ ಈ ಹಾಡಿನ ಮೂಲಕ ಮೊದಲ ಬಾರಿಗೆ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ವೆಸ್ಟರ್ನ್ ಕ್ಲಾಸಿಕಲ್ ಸಂಗೀತದಲ್ಲಿ ತರಬೇತಿ ಪಡೆದಿರುವ ವಿಭಾ ಅವರ ವಿಭಿನ್ನ ಧ್ವನಿಯನ್ನು ಗಮನದಲ್ಲಿಟ್ಟುಕೊಂಡು ಈ ಹಾಡನ್ನು ಸಿದ್ಧಪಡಿಸಲಾಗಿದೆ.

‘ಕಾಂತಾರ’ ಖ್ಯಾತಿಯ ಅಬಿ ವಿ. ಅವರು ಚಿತ್ರದ ದೈವಿಕ ಭಾವವನ್ನು ಬಿಂಬಿಸುವ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಬೆಂಗಳೂರಿನಲ್ಲಿ ಭಕ್ತಿಗೀತೆಗಳು ಹಾಗೂ ಡಿವೋಷನಲ್ ರ‌್ಯಾಪ್ ಮೂಲಕ ಗಮನ ಸೆಳೆದಿರುವ ಹರ್ಷ ಧ್ವನಿ ಕೂಡ ಚಿತ್ರದಲ್ಲಿ ವಿಶೇಷ ಹಾಡೊಂದನ್ನು ಹಾಡಿದ್ದಾರೆ.

ಇನ್ನೊಂದು ವಿಶೇಷವೆಂದರೆ, ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಅವರು ‘ದೈಜಿ’ ಚಿತ್ರಕ್ಕೆ ಶಾಸ್ತ್ರೀಯ ಶೈಲಿಯ ಹಾಡೊಂದನ್ನು ಹಾಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ ಈ ಹಾಡು ಚಿತ್ರಕ್ಕೆ ವಿಶೇಷ ಮೆರುಗು ನೀಡಲಿದೆ. ಚಿತ್ರದ ಕಥಾವಸ್ತು ಇಷ್ಟವಾದ ಕಾರಣ ಶಿವಶ್ರೀ ಸ್ಕಂದ ಅವರು ಈ ಹಾಡನ್ನು ಹಾಡಲು ಒಪ್ಪಿಕೊಂಡಿದ್ದಾರೆ ಎಂಬುದು ಗಮನಾರ್ಹ.

*ಸೋನು ನಿಗಮ್–ರಮೇಶ್ ಅರವಿಂದ್ ಕಾಂಬಿನೇಷನ್ ಮತ್ತೆ*

‘ದೈಜಿ’ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ನಟ ಡಾಲಿ ಧನಂಜಯ್ ಅವರ ಸಾಹಿತ್ಯ. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳಿಗೆ ಧನಂಜಯ್ ಸಾಹಿತ್ಯ ರಚಿಸಿದ್ದಾರೆ. ಈ ಎರಡೂ ಹಾಡುಗಳು ಚಿತ್ರದ ಸಂಗೀತದ ವಿಶೇಷತೆ ಹೆಚ್ಚಿಸಲಿವೆ.

ಈ ಹಾಡುಗಳಲ್ಲಿ ಒಂದಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಧ್ವನಿಯಾಗಿದ್ದಾರೆ. ರಮೇಶ್ ಅರವಿಂದ್ ಅಭಿನಯದ ‘ಆಕ್ಸಿಡೆಂಟ್’ ಚಿತ್ರದ ಜನಪ್ರಿಯ ‘ಬಾ ಮಳೆಯೇ ಬಾ’ ಹಾಡಿನ ಮೂಲಕ ಗಮನ ಸೆಳೆದಿದ್ದ ಸೋನು ನಿಗಮ್–ರಮೇಶ್ ಅರವಿಂದ್ ಕಾಂಬಿನೇಷನ್ ಇದೀಗ ‘ದೈಜಿ’ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ. ಈ ಹಿಂದೆ ಜನಪ್ರಿಯವಾಗಿದ್ದ ಈ ಜೋಡಿಯ ಗಾಯನದ ಮೋಡಿ ಮತ್ತೆ ಮರುಕಳಿಸುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ಸಚಿನ್ ಬಸ್ರೂರ್ ಅವರು ಸಂಗೀತ ನಿರ್ದೇಶನದ ಜೊತೆಗೆ ಸಾಹಿತ್ಯ ರಚಿಸಿ, ತಮ್ಮದೇ ಧ್ವನಿಯಲ್ಲಿ ಮತ್ತೊಂದು ಹಾಡನ್ನು ಹಾಡಿದ್ದಾರೆ.

*ತಾಂತ್ರಿಕವಾಗಿ ಶ್ರೀಮಂತವಾಗಿರುವ ‘ದೈಜಿ’*

ಚಿತ್ರಕ್ಕೆ ಶ್ರೀಶ ಕುದುವಳಿ ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಸುನಯನ ಅವರು ಕಾಸ್ಟಿಂಗ್ ನಿರ್ದೇಶಕರಾಗಿ ಹಾಗೂ ಲಕ್ಷ್ಮೀ ಕೃಷ್ಣ ಅವರು ವಸ್ತ್ರ ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಚಿತ್ರದ ಅಂತಿಮ ಹಂತದ ಸೌಂಡ್ ಮಿಕ್ಸಿಂಗ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ನಡೆಯುತ್ತಿವೆ. ಎಲ್ಲಾ ತಾಂತ್ರಿಕ ಕೆಲಸಗಳು ಪೂರ್ಣಗೊಂಡ ಬಳಿಕ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲು ಚಿತ್ರತಂಡ ಯೋಜಿಸಿದೆ. ವಿಭಿನ್ನ ಕಥಾವಸ್ತು, ಅಂತರಾಷ್ಟ್ರೀಯ ಕಲಾವಿದರ ಬಳಗ, ಖ್ಯಾತ ಗಾಯಕರ ಗಾಯನ ಹಾಗೂ ಹಾಲಿವುಡ್ ಶೈಲಿಯ ಧ್ವನಿ ವಿನ್ಯಾಸದೊಂದಿಗೆ ‘ದೈಜಿ’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡುವ ನಿರೀಕ್ಷೆಯಿದೆ.

1 week ago | [YT] | 11

Southwood Talkies

*ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಸದ್ದು ಮಾಡುತ್ತಿರುವ ‘ಗುಡ್ಡದ ಭೂತ’. ಹುಟ್ಟುಹಬ್ಬದ ಸಂಭ್ರಮದಲ್ಲಿ ಸಮರ್ಜಿತ್ ಲಂಕೇಶ್*

*ಪೊಲೀಸ್ ಗೆಟಪ್‌ಗೆ ಮೆಚ್ಚುಗೆ. ‘ಗೌರಿ’ ಚಿತ್ರದ ಮೂಲಕ ಪ್ರಶಸ್ತಿಗಳ ಹೆಗ್ಗಳಿಕೆ*

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಯುವ ನಟ ಸಮರ್ಜಿತ್ ಲಂಕೇಶ್ ಅಭಿನಯದ ‘ಗುಡ್ಡದ ಭೂತ’ ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಸರ್‌ನಲ್ಲಿನ ಅವರ ಪೊಲೀಸ್ ಗೆಟಪ್ ಮತ್ತು ಅಭಿನಯ ಪ್ರೇಕ್ಷಕರ ಕುತೂಹಲ ಹೆಚ್ಚಿಸಿವೆ. ಅಕ್ಟೋಬರ್ 31ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಮರ್ಜಿತ್ ಅವರಿಗೆ ಈ ಯಶಸ್ಸು ವಿಶೇಷ ಸಂಭ್ರಮ ತಂದಿದೆ.

*ಸಬ್‌ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಹೊಸ ಲುಕ್*

‘ಗುಡ್ಡದ ಭೂತ’ ಚಿತ್ರದಲ್ಲಿ ಸಮರ್ಜಿತ್ ಅವರು ಅಲೋಕ್ ಎಂಬ ಸಬ್‌ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎನ್.ಎಂ. ಕಾಂತರಾಜ್ ನಿರ್ಮಾಣದಲ್ಲಿ, ಭರತ್ ಎಸ್. ನಾವುಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಕರಾವಳಿ ಭಾಗದ ಹಿನ್ನೆಲೆಯ ಮರ್ಡರ್ ಮಿಸ್ಟರಿ. ಕುಟುಂಬವೊಂದರಲ್ಲಿ ನಡೆಯುವ ಕೊಲೆಯ ಸುತ್ತ ಕಥೆ ಸಾಗುತ್ತದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಶ್ರೀಹರಿ ಸಂಗೀತ, ದೀಪಕ್ ಕುಮಾರ್ ಛಾಯಾಗ್ರಹಣ ಹಾಗೂ ಶಶಿಧರ್ ಸಂಕಲನ ಚಿತ್ರಕ್ಕಿದೆ.

*‘ಗೌರಿ’ಯಿಂದ ಪ್ರಶಸ್ತಿಗಳ ಗೌರವ*

ಸಮರ್ಜಿತ್ ಅವರ ಸಿನಿಪಯಣದಲ್ಲಿ ‘ಗೌರಿ’ ಚಿತ್ರ ಮಹತ್ವದ ಸ್ಥಾನ ಪಡೆದಿದೆ. ಈ ಚಿತ್ರದ ಅಭಿನಯಕ್ಕಾಗಿ ಫಿಲ್ಮ್‌ಫೇರ್, ಸೈಮಾ, ಶ್ರೀರಾಘವೇಂದ್ರ ಚಿತ್ರವಾಣಿ, ಚಂದನವನ ಕ್ರಿಟಿಕ್ಸ್ ಅವಾರ್ಡ್ ಸೇರಿದಂತೆ ವಿವಿಧ ಪ್ರಶಸ್ತಿಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಈ ಗೌರವಗಳು ಯುವ ನಟನ ಅಭಿನಯ ಸಾಮರ್ಥ್ಯಕ್ಕೆ ದೊರೆತ ಮನ್ನಣೆಯಾಗಿವೆ.

ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶವೂ ಅವರ ಅನುಭವವನ್ನು ಹೆಚ್ಚಿಸಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರೊಂದಿಗೆ ನಟಿಸಿದ ಅನುಭವದ ಜೊತೆಗೆ, ಆ್ಯಕ್ಷನ್, ನೃತ್ಯ ಹಾಗೂ ಅಭಿನಯದ ವಿಭಿನ್ನ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

*ಹುಟ್ಟುಹಬ್ಬದ ಹೊಸ್ತಿಲಲ್ಲಿ ಹೊಸ ನಿರೀಕ್ಷೆ*

ಒಂದು ಮಿಲಿಯನ್ ವೀಕ್ಷಣೆಗಳನ್ನು ದಾಟಿರುವ ‘ಗುಡ್ಡದ ಭೂತ’ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಟೀಸರ್‌ಗೆ ಸಿಗುತ್ತಿರುವ ಮೆಚ್ಚುಗೆ ಚಿತ್ರಮಂದಿರಗಳಲ್ಲಿಯೂ ಪ್ರೇಕ್ಷಕರನ್ನು ಸೆಳೆಯುವ ಭರವಸೆ ಮೂಡಿಸಿದೆ. ಅಕ್ಟೋಬರ್ 31ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಮರ್ಜಿತ್ ಲಂಕೇಶ್ ಅವರಿಗೆ ಈ ಚಿತ್ರ ಮತ್ತಷ್ಟು ಯಶಸ್ಸು ತಂದುಕೊಡಲಿ, ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂಬುದು ಅಭಿಮಾನಿಗಳ ಆಶಯ.

1 week ago | [YT] | 3

Southwood Talkies

ಇದೇ ಡಿಸೆಂಬರ್ 18 ರಂದು ನಮ್ಮ ಪ್ಯಾರ್ ಚಿತ್ರವು ವಿಶ್ವಾದ್ಯಂತ ತೆರೆಕಾಣಲಿದೆ 🥰
✨ PYAAR — an emotional journey of love
🍂 In Cinemas This 18th December 2026

@sm_productions2025 @hs_nagashree1 @ssupreeth2025 @rashika__shetty @officialrishvin @aanandaaudio @anitha_sara_mahesh @nishupriya321 @pramodmaravanthelyricist @palanisenapathy @chandrashekarks @megharajatyagaraja @drmyra_official @mudduraja_anoop_dkd @vishakha_drama_junior_seson5 @haidastudiosofficial @stormstudios7

#SMProductions #PyaarKannadaMovie #Haidastudios #StormStudios

1 week ago | [YT] | 4

Southwood Talkies

Bookings open from tmrw💁🏻‍♀️

1 week ago | [YT] | 17

Southwood Talkies

*"ಅಧ್ಯಕ್ಷ" ಖ್ಯಾತಿಯ ಶರಣ್–ಹೆಬಾ ಪಟೇಲ್ ಜೋಡಿಯ ಮೋಡಿ; ‘ರಾಮ ರಸ’ಕ್ಕೆ ‘ರುಯ್ಯ ರುಯ್ಯ ರಾಮರಸ’ ಮೆರುಗು* !

*ಚಿತ್ರದ ಕಥೆಗೆ ತಿರುವು ನೀಡಲಿದೆ ಶೀರ್ಷಿಕೆ ಗೀತೆ; ವಿಜಯ್ ಪ್ರಕಾಶ್ ಗಾಯನಕ್ಕೆ ಮೆಚ್ಚುಗೆ*

ಜೀ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ಬಹುನಿರೀಕ್ಷಿತ ‘ರಾಮ ರಸ’ ಚಿತ್ರದ ‘ರುಯ್ಯ ರುಯ್ಯ ರಾಮರಸ’ ಶೀರ್ಷಿಕೆ ಗೀತೆ ಸೆವೆನ್ ಸ್ಟಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಪುನೀತ್ ರಂಗಸ್ವಾಮಿ ಸಾಹಿತ್ಯ, ಬಿ.ಜೆ. ಭರತ್ ಸಂಗೀತ ಹಾಗೂ ವಿಜಯ್ ಪ್ರಕಾಶ್ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಶರಣ್, ಹೆಬಾ ಪಟೇಲ್ ಹಾಗೂ ಕಾರ್ತಿಕ್ ಮಹೇಶ್ ಅಭಿನಯಿಸಿದ್ದಾರೆ. ‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್ ಮತ್ತು ಹೇಬಾ ಪಟೇಲ್ ಮತ್ತೆ ಈ ಹಾಡಿನಲ್ಲಿ ಅಭಿನಯಿಸಿರುವುದು ವಿಶೇಷ.

*ಕಥೆಗೆ ತಿರುವು ನೀಡುವ ಹಾಡು*

ನಿರ್ದೇಶಕ ಬಿ.ಎಂ. ಗಿರಿರಾಜ್ ಮಾತನಾಡಿ, “ಚಿತ್ರದ ಆರಂಭದಿಂದಲೂ ಈ ಹಾಡಿನ ಬಗ್ಗೆ ಇಡೀ ತಂಡಕ್ಕೆ ವಿಶೇಷ ವ್ಯಾಮೋಹವಿದೆ. ಹಾಡು ಗೆಲ್ಲುವ ವಿಶ್ವಾಸವಿದ್ದು, ಚಿತ್ರದ ಕಥೆಗೆ ಮಹತ್ವದ ತಿರುವು ನೀಡಲಿದೆ. ಬಿ.ಜೆ. ಭರತ್ ಅವರ ಸಂಗೀತ, ವಿಜಯ್ ಪ್ರಕಾಶ್ ಗಾಯನ ಹಾಗೂ ಪುನೀತ್ ರಂಗಸ್ವಾಮಿ ಸಾಹಿತ್ಯ ಹಾಡಿನ ಮೆರುಗು ಹೆಚ್ಚಿಸಿವೆ. ‘ರಾಮ ರಸ’ದ ಒಳಾರ್ಥವನ್ನು ಪ್ರೇಕ್ಷಕರು ಚಿತ್ರದಲ್ಲೇ ತಿಳಿಯಬೇಕು” ಎಂದರು.

*ಶರಣ್–ಹೆಬಾ ಜೋಡಿ ಮತ್ತೆ ಈ ಹಾಡಿನಲ್ಲಿ ಅಭಿನಯಿಸಿರುವುದು ವಿಶೇಷ*

ನಿರ್ಮಾಪಕ ಹಾಗೂ ಕ್ರಿಯೇಟಿವ್ ಹೆಡ್ ಗುರು ದೇಶಪಾಂಡೆ ಮಾತನಾಡಿ, “ಕಥೆ ಮತ್ತು ಸನ್ನಿವೇಶಕ್ಕೆ ಈ ಹಾಡು ಅಗತ್ಯವಾಗಿತ್ತು. ಪುನೀತ್ ರಂಗಸ್ವಾಮಿ ಉತ್ತಮ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಸುಮಧುರವಾಗಿ ಹಾಡಿದ್ದಾರೆ. ಶರಣ್ ಅವರೊಂದಿಗೆ ಹತ್ತು ವರ್ಷಗಳಿಗೂ ಹೆಚ್ಚಿನ ಸ್ನೇಹವಿದೆ. ಶರಣ್ ಹಾಗೂ ಹೇಬಾ ಪಟೇಲ್ ಈ ಹಾಡಿನಲ್ಲಿ ಅಭಿನಯಿಸಬೇಕೆಂಬುದು ನನ್ನ ಆಸೆಯಾಗಿತ್ತು. ಮುರಳಿ ಮಾಸ್ಟರ್ ಅದ್ಭುತ ನೃತ್ಯ ಸಂಯೋಜನೆ ಮಾಡಿದ್ದಾರೆ”. ತಮ್ಮ ಚಿತ್ರಗಳಿಗೆ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಧ್ರುವ ಸರ್ಜಾ ಮುಂತಾದ ಚಿತ್ರರಂಗದ ಗಣ್ಯರು ನೀಡಿದ ಬೆಂಬಲವನ್ನು ಸ್ಮರಿಸಿದರು. ದರ್ಶನ್ ಅವರೆ ಬಂದು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವಂತೆ ಆಗಲಿ. ಪ್ರೇಕ್ಷಕರ ಪ್ರೋತ್ಸಾಹ ಸದಾ ಇರಲಿ ಎಂದರು.

*ಹಾಡು ಚೆನ್ನಾಗಿದೆ. ಹಾಡಿನಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ :*

ನಟ ಶರಣ್ ಮಾತನಾಡಿ, “ಪೋಷಕ ಕಲಾವಿದನಾಗಿ ಒಂಬತ್ತು ವರ್ಷಗಳಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾದ ಬಳಿಕ ಸುಮಾರು ಹದಿನೈದು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದೇನೆ. ನಾಯಕನಾದರೆ ಒಂದೇ ಸಿನಿಮಾಗೆ ಹೆಚ್ಚು ಸಮಯ ನೀಡ ಬೇಕಾಗುತ್ತದೆ. ‘ಅಧ್ಯಕ್ಷ’ ಚಿತ್ರದ ಬಳಿಕ ಹೆಬಾ ಪಟೇಲ್ ಜೊತೆ ಮತ್ತೆ ನಟಿಸಿರುವುದು ಸಂತೋಷ ತಂದಿದೆ. ಆ ಚಿತ್ರದ ಹಾಡಿಗೂ ವಿಜಯ್ ಪ್ರಕಾಶ್ ಅವರೇ ಧ್ವನಿಯಾಗಿದ್ದರು. ಗುರುದೇಶಪಾಂಡೆ ಹಾಗೂ ಗಿರಿರಾಜ್ ನನ್ನ ಬಹುದಿನಗಳ ಸ್ನೇಹಿತರು. ಹಾಡಿನಂತೆ ಚಿತ್ರವೂ ಯಶಸ್ಸು ಕಾಣಲಿ” ಎಂದು ಹಾರೈಸಿದರು.

ಹೆಬಾ ಪಟೇಲ್ ಮಾತನಾಡಿ, “‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್ ಅವರೊಂದಿಗೆ ಅಭಿನಯಿಸಿರುವುದು ಸಂತೋಷ ತಂದಿದೆ. ಹಾಡು ಚೆನ್ನಾಗಿ ಮೂಡಿಬಂದಿದ್ದು, ‘ರಾಮ ರಸ’ ಚಿತ್ರ ಯಶಸ್ಸು ಕಾಣಲಿ” ಎಂದು ಹಾರೈಸಿದರು.

*ಶರಣ್ ಜೊತೆ ನಟಿಸುವ ಆಸೆ ಈಡೇರಿತು:*

ನಟ ಕಾರ್ತಿಕ್ ಮಹೇಶ್ ಮಾತನಾಡಿ, “ಶರಣ್ ಅವರೊಂದಿಗೆ ನಟಿಸುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಆರಂಭದಲ್ಲಿ ಈ ಹಾಡಿನಲ್ಲಿ ನಾನು ನಟಿಸುತ್ತಿಲ್ಲ ಎಂದು ತಿಳಿದಾಗ ಬೇಸರವಾಯಿತು. ಬಳಿಕ ನಾನೂ ಅಭಿನಯಿಸುತ್ತಿದ್ದೇನೆ ಎಂದು ಗುರುದೇಶಪಾಂಡೆ ಅವರು ತಿಳಿಸಿದಾಗ ತುಂಬಾ ಸಂತೋಷವಾಯಿತು. ಹಾಡು ಚೆನ್ನಾಗಿ ಮೂಡಿಬಂದಿದೆ” ಎಂದರು.

ನಿರ್ಮಾಪಕ ವಿಕ್ರಂ ಆರ್ಯ ಮಾತನಾಡಿ, “ಹಾಡು ಉತ್ತಮವಾಗಿ ಮೂಡಿಬಂದಿದೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದ್ದು, ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.

ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಂಗೀತ ನಿರ್ದೇಶಕ ಬಿ.ಜೆ. ಭರತ್ , ಹಾಡು ಬರೆದಿರುವ ಪುನೀತ್ ರಂಗಸ್ವಾಮಿ ಹಾಗೂ ಛಾಯಾಗ್ರಾಹಕ ಕೃಷ್ಣ ಕುಮಾರ್ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಡಿನ ಕುರಿತು ಮಾತನಾಡಿದರು. ಕನ್ನಡ ಚಿತ್ರರಂಗದ ಹಲವು ಪ್ರಸಿದ್ಧ ನೃತ್ಯ ನಿರ್ದೇಶಕರು ಹಾಗೂ ನಟಿ ಪಾಯಲ್ ಚಂಗಪ್ಪ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

1 week ago | [YT] | 46

Southwood Talkies

*ನಿರೂಪ್‌ ಭಂಡಾರಿ ನಟನೆಯ ʻಸತ್ಯ ಸನ್‌ ಆಫ್‌ ಹರಿಶ್ಚಂದ್ರʼ ಸಿನಿಮಾದ ಟೀಸರ್‌ ರಿಲೀಸ್;‌ ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ನಟನೆ*

ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್‌ ಭಂಡಾರಿ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ ತಾಣಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಟೀಸರ್‌ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ವಿಶೇಷವೆಂದರೆ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಅತ್ಯಂತ ಮಹತ್ವದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ದೊಡ್ಡ ಶಕ್ತಿ ತುಂಬಿದ್ದಾರೆ. ಅಲ್ಲದೆ, ಟೀಸರ್‌ಗೆ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. "ರಾಜಾ ಹರಿಶ್ಚಂದ್ರ ಕಾಲದಿಂದಲೂ ಈ ಹೆಸರಿಗೆ ಒಂದು ದೊಡ್ಡ ಗೌರವ ಮತ್ತು ತೂಕವಿದೆ. ಕಥೆ ಕೇಳಿದ ತಕ್ಷಣ ನನಗೆ ತುಂಬಾ ಇಷ್ಟವಾಯಿತು. 'ರಂಗಿತರಂಗ' ನಂತರ ಮತ್ತೆ ನಿರೂಪ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಹರಿಶ್ಚಂದ್ರ, ನಾನು ಸತ್ಯವನ್ನೇ ಹೇಳುತ್ತೇನೆ, ಇದು ನಿಜಕ್ಕೂ ಅತ್ಯುತ್ತಮವಾದ, ಭಾವನಾತ್ಮಕವಾದ ಸಿನಿಮಾ" ಎಂದರು. ಇದೇ ವೇಳೆ ಶಿವಣ್ಣ ಅವರ ಎಂಟ್ರಿ ಕುರಿತು ಮೆಲುಕು ಹಾಕಿದ ಸಾಯಿಕುಮಾರ್, "ಶಿವಣ್ಣನನ್ನು ಭೇಟಿಯಾದಾಗ ಈ ಕಥೆ ಹಾಗೂ ಪಾತ್ರದ ಬಗ್ಗೆ ಪ್ರಸ್ತಾಪಿಸಿದೆ. ಅವರು ತಕ್ಷಣವೇ ನಿರೂಪ್‌ಗೆ ಕರೆ ಮಾಡಲು ಹೇಳಿ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಾತ್ರ ಮಾಡಲು ಒಪ್ಪಿಕೊಂಡರು. ಅವರ ಉಪಸ್ಥಿತಿ ಸಿನಿಮಾಗೆ ಬಹುದೊಡ್ಡ ಬಲ ತಂದಿದೆ" ಎಂದು ಶಿವಣ್ಣನ ಸರಳತೆಯನ್ನು ಕೊಂಡಾಡಿದರು.

ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, "ಈ ಸಿನಿಮಾಗಾಗಿ ನನ್ನ ಜೀವನದ ಎರಡು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನಿರ್ದೇಶಕ ಸಚಿನ್ ಕಥೆ ಹೇಳಿದಾಗ ಇಷ್ಟವಾಯಿತು, ನಾವಿಬ್ಬರೂ ಜೊತೆಯಾಗಿ ಕುಳಿತು ಎರಡು-ಮೂರು ತಿಂಗಳು ಲ್ಯಾಪ್‌ಟಾಪ್‌ನಲ್ಲೇ ಸಂಪೂರ್ಣ ಚಿತ್ರಕಥೆಯನ್ನು ಹೊಸದಾಗಿ ತಿದ್ದಿ ತೀಡಿದೆವು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್ ಸರ್ ಸೂಕ್ತ ಎಂದು ನಮ್ಮ ತಂದೆ ಸೂಚಿಸಿದರು. ಇನ್ನು ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಮಯದಲ್ಲೂ ಅವರು ತೋರಿದ ಬದ್ಧತೆ, ಉತ್ಸಾಹ ಅದ್ಭುತ. ಶಾಟ್‌ಗೆ ಕರೆದ ತಕ್ಷಣ ಓಡೋಡಿ ಬಂದು ನಟಿಸುತ್ತಿದ್ದರು, ಡೈಲಾಗ್‌ಗಳನ್ನು ಮೊದಲೇ ಕಂಠಪಾಠ ಮಾಡಿಕೊಂಡು ತಯಾರಾಗಿದ್ದರು. ಅದಕ್ಕಾಗಿಯೇ ಅವರು ನಿಜವಾದ ಸೂಪರ್‌ಸ್ಟಾರ್. ಪುಣೆಯಿಂದ ಬಂದು ಕನ್ನಡದಲ್ಲೇ ಮೊದಲ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಅಂಕಿತ್ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದು ತಿಳಿಸಿದರು.

ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬೃಂದಾ ಆಚಾರ್ಯ ಮಾತನಾಡಿ, "ಸಾಯಿಕುಮಾರ್ ಸರ್ ಅವರಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದೇ ಒಂದು ಸೌಭಾಗ್ಯ. ಪರಭಾಷೆಯಿಂದ ಬಂದರೂ ಕನ್ನಡ ಸಿನಿಮಾಗೆ ಜೀವ ತುಂಬುತ್ತಿರುವ ನಿರ್ಮಾಪಕರಿಗೆ ಧನ್ಯವಾದಗಳು. ಹೆದರಿಕೆ ಮತ್ತು ಜವಾಬ್ದಾರಿಯ ನಡುವೆ ಒಂದು ಸಂಪೂರ್ಣ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುತ್ತಿದ್ದೇವೆ. ಭಾವನಾತ್ಮಕ ಅಂಶಗಳ ಜೊತೆಗೆ ಸಾಯಿಕುಮಾರ್ ಮತ್ತು ಶಿವಣ್ಣ ಸರ್ ಅವರ ನಟನೆಯಿಂದಾಗಿ ಸಿನಿಮಾ ಭರ್ಜರಿ ಮಾಸ್ ಆಗಿಯೂ ಮೂಡಿಬಂದಿದೆ" ಎಂದರು.

ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಮಾತನಾಡುತ್ತಾ, "ಚಿತ್ರದಲ್ಲಿ ನಾನು ಪತ್ರಕರ್ತೆಯಾಗಿ 'ಗಾನ' ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಆ ಪಾತ್ರದಲ್ಲಿ ಒಂದು ಶಿಸ್ತು ಮತ್ತು ಪ್ರಾಮಾಣಿಕತೆ ಇತ್ತು. ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲದೆ ತಂದೆ-ತಾಯಂದಿರ ಮೇಲಿನ ಪ್ರೀತಿ ಮತ್ತು ಸಂಸ್ಕಾರದ ಮಹತ್ವವನ್ನು ಸಾರುತ್ತದೆ. ಚಿತ್ರೀಕರಣದ ವೇಳೆ ಸಾಯಿಕುಮಾರ್ ಅವರ 50 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮವನ್ನು ಕೇಕ್ ಕತ್ತರಿಸಿ ಆಚರಿಸಿದೆವು. ಅಷ್ಟು ದೊಡ್ಡ ನಟರಾಗಿದ್ದರೂ 'ನನಗೆ ಸ್ವರ ಕೊಟ್ಟಿದ್ದು ತಂದೆ, ಸಂಸ್ಕಾರ ನೀಡಿದ್ದು ತಾಯಿ' ಎಂದು ಹೇಳುವ ಅವರ ವಿನಮ್ರತೆ ನಮ್ಮೆಲ್ಲರಿಗೂ ಆದರ್ಶ" ಎಂದು ತಮ್ಮ ಅನುಭವ ಹಂಚಿಕೊಂಡರು.

ವಿಶೇಷವೆಂದರೆ ನಟ ನಿರೂಪ್ ಭಂಡಾರಿ ಅವರೇ ಚಿತ್ರಕಥೆ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. 'ಅಂಕಿತ್ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸಚಿನ್ ವಾಲಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್, ಅಶ್ವಿನ್ ಹಾಸನ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ನಟಿಸಿದೆ. ಈ ಸಂಪೂರ್ಣ ಕೌಟುಂಬಿಕ ಮನರಂಜನೆಯ ಸಿನಿಮಾ 2027ರ ಜನವರಿ 22ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

1 week ago | [YT] | 12