We are a NEWSY Channel in an EASY format!
'Masth Magaa' channel regularly brings you the major news, happenings and interesting facts in an 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!


Masth Magaa

ತುಳುವರ ಬಹುದಿನದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ! 🔥

ರಾಜ್ಯದಲ್ಲಿ
(​ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ) 'ತುಳು' ಭಾಷೆಯನ್ನು 2ನೇ ಅಧಿಕೃತ ಭಾಷೆಯಾಗಿ ಘೋಷಿಸಲಾಗಿದೆ. ಕರಾವಳಿ ಜನರಿಗೆ ಇದಕ್ಕಿಂತ ದೊಡ್ಡ ಸಂಭ್ರಮ ಇನ್ನೊಂದಿಲ್ಲ! 💛❤️

​ಆದರೆ, ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಒಂದಾಗಿರುವ 'ತುಳು'ವಿಗೆ ತನ್ನದೇ ಆದ ಲಿಪಿ ಇತ್ತಾ? ತುಳು ಭಾಷೆಯ ಇತಿಹಾಸವೇನು?

​ಈ ಐತಿಹಾಸಿಕ ಸಂಭ್ರಮದ ಹೊತ್ತಲ್ಲಿ, ತುಳು ಭಾಷೆಯ ಇತಿಹಾಸ ಹಾಗೂ ಅದರ ಲಿಪಿಯ ಬಗ್ಗೆ ಈ ಹಿಂದೆ ಮಾಡಿದ್ದ ವಿಶೇಷ ವರದಿಯನ್ನ ಮತ್ತೊಮ್ಮೆ ನೋಡಿ. ತುಳು ಭಾಷೆಯ ಹಿಂದಿರುವ ಆ ರೋಚಕ ಕಥೆಯನ್ನು ತಿಳಿದುಕೊಳ್ಳಿ. 👇

​ತುಳು ಭಾಷೆಯ ಇತಿಹಾಸದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯಲಿ, ಇದೇ ಖುಷಿಯಲ್ಲಿ ವಿಡಿಯೋನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ!

#Tulu #Tulunadu #TuluOfficialLanguage #MasthMagaa #AmarPrasad #Mangaluru #Udupi #TuluHistory

3 days ago | [YT] | 66

Masth Magaa

ಸ್ನೇಹಿತರೇ, ಭಾರತದ ಆಟೋಮೊಬೈಲ್ ಸೆಕ್ಟರ್‌ನಲ್ಲಿ ದೊಡ್ಡ ಬೆಳವಣಿಗೆ ಆಗಿದೆ🚗💥

ಭಾರತದ JSW ಗ್ರೂಪ್ ಮತ್ತು ಜರ್ಮನ್‌ ದೈತ್ಯ 'ಸ್ಕೋಡಾ-ಫೋಕ್ಸ್‌ವ್ಯಾಗನ್' ಮಧ್ಯೆ ಬರೋಬ್ಬರಿ 10,000 ಕೋಟಿ ರೂಪಾಯಿಯ ಮೆಗಾ ಡೀಲ್ ಫೈನಲ್ ಆಗ್ತಿದೆ!
51:49 ಪಾಲುದಾರಿಕೆಯ ಈ ಜಾಯಿಂಟ್ ವೆಂಚರ್‌ಗೆ (JV) ಇವೆರಡು ಕಂಪನಿಗಳು MoU ಸೈನ್ ಮಾಡಿವೆ.

ಹಾಗಾದ್ರೆ ಏನಿದು ಹೊಸ ಜಾಯಿಂಟ್ ವೆಂಚರ್‌? ಭಾರತದ ಕಾರ್ ಮಾರ್ಕೆಟ್‌ಗೆ ಹಾಗೂ EV ಸೆಕ್ಟರ್‌ಗೆ ಏನೆಲ್ಲಾ ಲಾಭ ಆಗುತ್ತೆ? ಲಕ್ಸುರಿ ಕಾರುಗಳ ಕಥೆ ಏನು?

ಈ ಇಂಟ್ರೆಸ್ಟಿಂಗ್ ಬಿಸಿನೆಸ್ ಡೀಲ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗಾಗಲೇ ನಮ್ಮ ವಿಡಿಯೋದಲ್ಲಿ ಡಿಟೇಲ್ ಆಗಿ ವಿವರಿಸಿದ್ದೀವಿ. ಮಿಸ್ ಮಾಡ್ದೆ ಕೆಳಗಿರೋ ಲಿಂಕ್ ಕ್ಲಿಕ್ ಮಾಡಿ, ಫುಲ್ ಸ್ಟೋರಿ ನೋಡಿ! 👇


ನಿಮ್ಮ ಅನಿಸಿಕೆಯನ್ನ ವಿಡಿಯೋ ಕೆಳಗೆ ಕಮೆಂಟ್ ಮಾಡಿ ತಿಳಿಸಿ.

#JSWGroup #Volkswagen #SkodaIndia #IndianAutoIndustry #JSWMotor #JSWVolkswagenDeal #JointVenture #IndianAutoIndustry #HybridCars #CarNewsKannada #AutomobileNews s #MasthMagaa

1 week ago | [YT] | 31

Masth Magaa

ನಮಸ್ಕಾರ ಸ್ನೇಹಿತರೆ! 🙏

ಇವತ್ತು ಮೂಡಿಗೆರೆಯ ಮಾಯಾವಿ, ನಮ್ಮೆಲ್ಲರ ನೆಚ್ಚಿನ ಸಾಹಿತಿ, ಪ್ರಕೃತಿ ಪ್ರೇಮಿ ಹಾಗೂ ಕನ್ನಡ ಸಾಹಿತ್ಯದ ಅದ್ಭುತ ಕಥೆಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ. 🌿📚

ತೇಜಸ್ವಿ ಅಂದ್ರೆ ಕೇವಲ ಸಾಹಿತಿ ಮಾತ್ರ ಅಲ್ಲ.. ಅವರೊಂದು ವಿಶ್ವಕೋಶ! ಒಬ್ಬ ಫೋಟೋಗ್ರಾಫರ್, ಕೃಷಿಕ, ಶಿಕಾರಿಗಾರ, ಹಾಗೇ ಪ್ರಕೃತಿಯ ಒಡನಾಡಿ. ಕಾಡಿನ ಕಥೆಗಳನ್ನ, ಹಳ್ಳಿಯ ಜನರ ಮುಗ್ಧತೆಯನ್ನ ನಮ್ಮ ಕಣ್ಣ ಮುಂದೆ ತೆರೆದಿಟ್ಟ ಅದ್ಭುತ ಜೀವಿ ಅವರು.

ರಾಷ್ಟ್ರಕವಿ ಕುವೆಂಪು ಅವರ ಮಗನಾಗಿದ್ದರೂ, ಅವರ ಹೆಸರನ್ನ ಬಳಸಿಕೊಳ್ಳದೇ ತಮ್ಮದೇ ಆದ ವಿಭಿನ್ನ ದಾರಿಯಲ್ಲಿ ಬೆಳೆದವರು ತೇಜಸ್ವಿ.
ಆದ್ರೆ...
ಇಂಗ್ಲಿಷ್‌ನಲ್ಲಿ ಫೇಲ್ ಆಗಿದ್ದ ಆ ಹುಡುಗ ಸಾಹಿತ್ಯ ದಿಗ್ಗಜ ಆಗಿದ್ದು ಹೇಗೆ?
ಆ ಕಾಲದಲ್ಲಿ ಅವರ ಲವ್ ಮ್ಯಾರೇಜ್‌ ಕಥೆ ಹೇಗಿತ್ತು?
ಮೂಡಿಗೆರೆಯ ಕಾಫಿ ಎಸ್ಟೇಟ್‌ನಲ್ಲಿ ಅವರ ಬದುಕು ಹೇಗಿತ್ತು?

ಅವರ ಬದುಕಿನ ಇಂಥಾ ಹಲವು ರೋಚಕ ಹಾಗೂ ಅಪರೂಪದ ವಿಚಾರಗಳನ್ನ ನಮ್ಮ 'ಮಸ್ತ್ ಮಗಾ'ದ ಈ ವೀಡಿಯೋದಲ್ಲಿ ತುಂಬಾ ಡಿಟೇಲ್ ಆಗಿ ಕವರ್ ಮಾಡಿದ್ದೀವಿ. ಈ ವಿಶೇಷ ದಿನದಂದು ಅವರ ಲೈಫ್ ಸ್ಟೋರಿಯನ್ನ ಮಿಸ್ ಮಾಡ್ದೇ ನೋಡಿ.

ವೀಡಿಯೋ ಲಿಂಕ್ ಇಲ್ಲಿದೆ 👇 http://www.youtube.com/watch?v=zNpuVl...

ಹಾಗೇ, 'ಕರ್ವಾಲೊ', 'ಚಿದಂಬರ ರಹಸ್ಯ', 'ಜುಗಾರಿ ಕ್ರಾಸ್'.. ಹೀಗೆ ತೇಜಸ್ವಿಯವರ ಯಾವ ಪುಸ್ತಕ ಅಥವಾ ಕಥೆ ನಿಮಗೆ ತುಂಬಾ ಇಷ್ಟ ಅಂತ ಕಮೆಂಟ್ ಮಾಡಿ ತಿಳಿಸಿ!

1 week ago | [YT] | 99

Masth Magaa

🚨 ಬರ್ತಿದೆ ಭಾರತದ ದೊಡ್ಡ IPO! 🚨

ಬರೋಬ್ಬರಿ 2016 ರಿಂದ ಪೆಂಡಿಂಗ್ ಇದ್ದ NSE (National Stock Exchange) IPOಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ! ಮಾರ್ಕೆಟ್ ಕ್ಯಾಪ್‌ನಲ್ಲಿ ಇದು ಮುಕೇಶ್ ಅಂಬಾನಿ ಅವರ ಜಿಯೋ ಜೊತೆಗೆ ನಿಲ್ಲೋ ಲೆವೆಲ್‌ಗೆ ದೊಡ್ಡದಿದೆ.

📌 ಪ್ರಮುಖ ಹೈಲೈಟ್ಸ್:

ಯಾವಾಗ? ಸೆಪ್ಟೆಂಬರ್ 11 ರಿಂದ ಬುಕ್-ಬಿಲ್ಡಿಂಗ್, ಸೆಪ್ಟೆಂಬರ್ 21 ರ ವಾರದಲ್ಲಿ ಲಿಸ್ಟಿಂಗ್ ಆಗೋ ಚಾನ್ಸ್ ಇದೆ.

ಬೆಲೆ ಎಷ್ಟು? ಸೆಪ್ಟೆಂಬರ್ 15ಕ್ಕೆ ಪ್ರೈಸ್ ಬ್ಯಾಂಡ್ ಫಿಕ್ಸ್ ಆಗಲಿದ್ದು, ಒಂದು ಶೇರ್‌ಗೆ 1800 ರೂಪಾಯಿ ಇರಬೋದು ಅಂತ ಮಾಹಿತಿ ಇದೆ

ವ್ಯಾಲ್ಯುಯೇಶನ್: ಸುಮಾರು ₹4.44 ಲಕ್ಷ ಕೋಟಿ! ಲಿಸ್ಟ್ ಆದ್ರೆ ಭಾರತದ ಟಾಪ್ 10 ಕಂಪನಿಗಳ ಲಿಸ್ಟ್‌ಗೆ ಸೇರುತ್ತೆ.

ಸ್ಪೆಷಾಲಿಟಿ: ಇದು 100% 'ಆಫರ್ ಫಾರ್ ಸೇಲ್'. ಅಂದ್ರೆ ಇದರಿಂದ ಬರೋ ದುಡ್ಡು ಕಂಪನಿಗೆ ಹೋಗಲ್ಲ, ಈಗಿರೋ ಶೇರ್‌ಹೋಲ್ಡರ್ಸ್ ಜೇಬಿಗೆ ಹೋಗುತ್ತೆ.

⚠️ ಗಮನಿಸಬೇಕಾದ ಅಂಶ: ಹೊಸ ರೂಲ್ಸ್‌ನಿಂದಾಗಿ ಇತ್ತೀಚೆಗೆ ಇವರ ಡೆರಿವೇಟಿವ್ಸ್ ಟ್ರೇಡಿಂಗ್ ವಾಲ್ಯೂಮ್ 16% ಕಡಿಮೆಯಾಗಿದೆ. ಆದ್ರೂ ಲಾಭ ಮಾಡೋಕೆ ಒಳ್ಳೆ ಸ್ಕೋಪ್ ಇದೆ ಅಂತಾರೆ ಎಕ್ಸ್‌ಪರ್ಟ್ಸ್. ಕಾಂಪಿಟೇಟರ್ BSE 2017ರಲ್ಲಿ ಲಿಸ್ಟ್ ಆದಾಗಿಂದ ಬರೋಬ್ಬರಿ 28 ಪಟ್ಟು ರಿಟರ್ನ್ಸ್ ಕೊಟ್ಟಿದೆ ಅನ್ನೋದು ನೆನಪಿರಲಿ!

ಎನ್‌ಎಸ್‌ಇ ಐಪಿಒಗೆ ಸಂಬಂಧಿಸಿದ ಪ್ರತಿಯೊಂದು ಲೆಕ್ಕಾಚಾರ ಹಾಗೂ ಕಂಪ್ಲೀಟ್ ಡೀಟೇಲ್ಸ್ ತಿಳಿಯಲು ಈಗಲೇ ಪೂರ್ಣ ವಿಡಿಯೋ ನೋಡಿ! 👇

2 weeks ago | [YT] | 36

Masth Magaa

#ಶಿಕ್ಷಕರದಿನಾಚರಣೆ


"ಗುರು ಬ್ರಹ್ಮ ಗುರು ವಿಷ್ಣು" ಎಂದು ಗೌರವಿಸುವ ನಮ್ಮ ಸಮಾಜದಲ್ಲಿ, ಇಂದು ಸರ್ಕಾರಿ ಶಾಲಾ ಶಿಕ್ಷಕರ ಪರಿಸ್ಥಿತಿ ಹೇಗಿದೆ? ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರು, ಬೋಧಕೇತರ ಕೆಲಸಗಳು ಮತ್ತು ಸಾಲು ಸಾಲು ಸರ್ವೆಗಳಲ್ಲೇ ಹೆಚ್ಚಿನ ಸಮಯ ಕಳೆಯುವಂತಾಗಿದೆ.

🔹 ಬೋಧಕೇತರ ಕೆಲಸಗಳ ಹೊರೆ: ಜಾತಿ ಗಣತಿ, ಎಲೆಕ್ಷನ್ ಡ್ಯೂಟಿ, ಬಿಸಿ ಊಟದ ಲೆಕ್ಕ ಮತ್ತು ಆಪ್‌ಗಳಲ್ಲಿ ನಿತ್ಯ ಮಾಹಿತಿ ಅಪ್‌ಲೋಡ್ ಮಾಡುವ ಅನಿವಾರ್ಯತೆ.

🔹 ಅತಿಯಾದ ಕೆಲಸದ ಒತ್ತಡ: ಸರ್ವೆ ಮತ್ತು ಆಡಳಿತಾತ್ಮಕ ಕೆಲಸಗಳ ಒತ್ತಡದಿಂದ ಶಿಕ್ಷಕರು ಎದುರಿಸುತ್ತಿರುವ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳು.

🔹 ಖಾಲಿ ಇರುವ ಹುದ್ದೆಗಳು: 45,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅನೇಕ ಕಡೆ ಶಾಲಾ ನಿರ್ವಹಣೆ ಕಷ್ಟಕರವಾಗಿದೆ.

🔹 ತಾಂತ್ರಿಕ ತೊಡಕುಗಳು: ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಿಗದೆ ಡೇಟಾ ಎಂಟ್ರಿ ಮಾಡಲು ಎದುರಾಗುತ್ತಿರುವ ಪ್ರಾಯೋಗಿಕ ತೊಂದರೆಗಳು.

🔹 ಅತಿಥಿ ಶಿಕ್ಷಕರ ವೇತನ ವಿಳಂಬ: ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಕಷ್ಟಪಡುತ್ತಿರುವ ಅತಿಥಿ ಶಿಕ್ಷಕರು ಮತ್ತು ವರ್ಗಾವಣೆ ಪ್ರಕ್ರಿಯೆಯ ಗೊಂದಲಗಳು.

ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಇಂದಿನ ನೈಜ ಪರಿಸ್ಥಿತಿಯ ಸಂಪೂರ್ಣ ವಿವರಗಳನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ! 👇

2 weeks ago (edited) | [YT] | 71

Masth Magaa

ಸ್ನೇಹಿತರೆ…
#TOXIC ಸಿನಿಮಾ ಹೇಗಿದೆ?

3 weeks ago | [YT] | 965

Masth Magaa

🚨 ಮತ್ತೆ ಭುಗಿಲೆದ್ದ 'ವಂದೇ ಮಾತರಂ' ವಿವಾದ! ಅಸಲಿಗೆ 1937ರಲ್ಲಿ ಆಗಿದ್ದೇನು?

ನಮಸ್ಕಾರ ಸ್ನೇಹಿತರೆ,

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ 'ವಂದೇ ಮಾತರಂ' ಗೀತೆಯನ್ನು ಸೋನಿಯಾ ಗಾಂಧಿ ಅವರು ಅರ್ಧಕ್ಕೆ ನಿಲ್ಲಿಸಿದರು ಎಂಬ ಆರೋಪ ದೇಶಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿದೆ. ಹೊಸ ಕಾನೂನಿನ ಅಡಿ ಬಿಜೆಪಿ ನಾಯಕರು FIR ಕೂಡ ದಾಖಲಿಸಿದ್ದಾರೆ.

ಆದರೆ, ಇದನ್ನ ಸಮರ್ಥನೆ ಮಾಡ್ಕೊಂಡಿರೋ ಕಾಂಗ್ರೆಸ್, "ನಾವು 1937ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯಂತೆ ಕೈಗೊಂಡ ನಿರ್ಣಯದ ಪ್ರಕಾರ, ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದೇವೆ" ಅಂತ ಹೇಳಿದೆ

ಹಾಗಾದರೆ, ಈ 1937ರ ಕಥೆ ಏನು?
ಅಂದು ಕಾಂಗ್ರೆಸ್ 'ವಂದೇ ಮಾತರಂ' ಗೀತೆಗೆ ಕತ್ತರಿ ಹಾಕಿದ್ದು ಯಾಕೆ? ಮುಸ್ಲಿಂ ಲೀಗ್‌ನ ವಿರೋಧವಿತ್ತಾ? ರವೀಂದ್ರನಾಥ ಟ್ಯಾಗೋರ್ ಅವರ ಪಾತ್ರವೇನು? ಜನಗಣಮನ ಮತ್ತು ವಂದೇ ಮಾತರಂ ನಡುವಿನ ಅಸಲಿ ಇತಿಹಾಸವೇನು?

ಇದೇ ವಿಷಯದ ಬಗ್ಗೆ ಈ ಹಿಂದೆಯೂ ದೊಡ್ಡ ಜಟಾಪಟಿ ನಡೆದಿತ್ತು. ಪ್ರಸ್ತುತ ನಡೆಯುತ್ತಿರುವ ವಿವಾದದ ಮೂಲ ಬೇರು ಇರುವುದು 1937ರ ಇತಿಹಾಸದಲ್ಲಿ! ಈ ಸಂಪೂರ್ಣ ಇತಿಹಾಸವನ್ನು ನಾವು ನಮ್ಮ ಈ ಹಿಂದಿನ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದೆವು. ಇಂದಿನ ರಾಜಕೀಯ ಮೇಲಾಟವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ವಿಡಿಯೋವನ್ನು ನೀವು ನೋಡಲೇಬೇಕು.

👇 ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ನೋಡಿ:
https://youtu.be/y-tJ-9-VW0A?si=09Voj...

ನಿಮ್ಮ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ'ನ ಸಂಪೂರ್ಣ ಗೀತೆ ಹಾಡಬೇಕಾ ಅಥವಾ ಕೇವಲ 2 ಚರಣ ಹಾಡುವುದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ. ಧನ್ಯವಾದಗಳು. 🇮🇳

#VandeMataram #VandeMataramRow #Congress #BJP #SoniaGandhi #NarendraModi #MasthMagaa #KannadaNews #AmarPrasad

1 month ago | [YT] | 84

Masth Magaa

🚨 ಬ್ರೇಕಿಂಗ್ ನ್ಯೂಸ್‌! 🚨

ಪಾಕಿಸ್ತಾನ, ಟರ್ಕಿ ಮತ್ತು ಸೌದಿ ಅರೇಬಿಯಾ ಟ್ರೈಲ್ಯಾಟರಲ್‌ ಡಿಫೆನ್ಸ್‌ ಅಗ್ರಿಮೆಂಟ್‌ಗೆ ಸಹಿ ಹಾಕಿವೆ..
ಇಸ್ಲಾಮಿಕ್‌ ನ್ಯಾಟೋ ಅನ್ನ ರೆಡಿ ಮಾಡ್ಕೊಂಡಿವೆ.. ಇನ್ಮೇಲೆ ಇಲ್ಲಿ ಒಂದು ದೇಶದ ಮೇಲೆ ಯಾರಾದ್ರು ಅಟ್ಯಾಕ್‌ ಆದ್ರೆ ಅದನ್ನ ಮೂರು ದೇಶಗಳ ಮೇಲೆ ಅಟ್ಯಾಕ್‌ ಅಂತ ಕನ್ಸಿಡರ್‌ ಮಾಡಲಾಗುತ್ತೆ..

ಹಾಗಾದ್ರೆ ಏನಿದು ಅಗ್ರಿಮೆಂಟ್‌.. ಇದ್ರಿಂದ ಭಾರತಕ್ಕೆ ಏನು ಅಪಾಯ ಇದೆ..
ಇದನ್ನ ನಾವು ಡಿಟೇಲಾಗಿ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಿದ್ದೀವಿ.. 👇

ವಿಡಿಯೋ ನೋಡೊಕೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ 👇

1 month ago | [YT] | 48

Masth Magaa

🚨 ಬಿಗ್‌ ನ್ಯೂಸ್‌ 🚨

ಸ್ನೇಹಿತ್ರೆ,
ಅಕ್ಟೋಬರ್ 1, 2028 ರಿಂದ ಎಲ್ಲಾ ವಾಹನಗಳಿಗೆ V2V (ವೆಹಿಕಲ್-ಟು-ವೆಹಿಕಲ್) ಸಂವಹನ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಲು ಸರ್ಕಾರ ಕರಡು ಸಿದ್ಧಪಡಿಸಿದೆ.

ಹಾಗಾದ್ರೆ
ಕಾರುಗಳು ಒಂದಕ್ಕೊಂದು ಮಾತಾಡ್ತಾವಾ? ಏನಿದು ವೆಹಿಕಲ್-ಟು-ವೆಹಿಕಲ್ ಕಮ್ಯೂನಿಕೇಷನ್‌ ಕ್ರಾಂತಿ!

ಮನುಷ್ಯರಷ್ಟೇ ಅಲ್ಲ, ಇನ್ಮುಂದೆ ಕಾರುಗಳು ಮತ್ತು ಬೈಕ್‌ಗಳು ಕೂಡ ರಸ್ತೆಯಲ್ಲಿ ಪರಸ್ಪರ ಮಾತಾಡಿಕೊಳ್ಳಲಿವೆ! 🚗💬

ಅಪಘಾತವಾಗುವ 10 ಸೆಕೆಂಡು ಮುಂಚಿತವಾಗಿ ನಿಮ್ಮ ವಾಹನಕ್ಕೆ ವಾರ್ನಿಂಗ್ ಸಿಗುವ ಈ ಅದ್ಭುತ 'V2V' ತಂತ್ರಜ್ಞಾನವನ್ನು 2028ರಿಂದಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ದಟ್ಟ ಮಂಜು, ಬ್ಲೈಂಡ್ ಸ್ಪಾಟ್ಸ್ ಮತ್ತು ಅನಿರೀಕ್ಷಿತ ಬ್ರೇಕ್‌ಗಳಿಂದ ಆಗುವ ಸರಣಿ ಅಪಘಾತಗಳನ್ನು ತಡೆಯಲು ಇದು ಹೇಗೆ ಸಂಜೀವನಿಯಾಗಲಿದೆ?

ಹಳೆ ವಾಹನಗಳು ಹಾಗೂ ಬೈಕ್ ಸವಾರರಿಗೆ ಇದರಿಂದೇನು ಸವಾಲುಗಳಿವೆ? ಇದ್ರ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ..

👇 ವೀಡಿಯೊ ಲಿಂಕ್ ಇಲ್ಲಿದೆ, ಈಗಲೇ ಕ್ಲಿಕ್ ಮಾಡಿ ನೋಡಿ:

ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಶೇರ್ ಮಾಡಿ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ!

#RoadSafety #V2VCommunication

1 month ago | [YT] | 24

Masth Magaa

#ಕಾರ್ಗಿಲ್‌ ವಿಜಯ್‌ ದಿವಸ್‌

1 month ago | [YT] | 84