*ಮಿಸ್ಟರ್ ಅಂಡ್ ಮಿಸಸ್* *ರಾಜಾಹುಲಿ ಆಡಿಯೋ* *ಸಚಿವ ರಾಮಲಿಂಗಾ ರೆಡ್ಡಿ* *ಬಿಡುಗಡೆ*
ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಹೊನ್ನರಾಜ್ ನಾಯಕ ಕಮ್ ನಿರ್ದೇಶಕನಾಗಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕಲಾವಿದರ ಸಂಘದಲ್ಲಿ ನೆರವೇರಿತು. ಸಚಿವ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಲವ್ಲಿಸ್ಟಾರ್ ಪ್ರೇಮ್ ಸಾಂಗ್ ರಿಲೀಸ್ ಮಾಡಿದರು. ನಿರ್ಮಾಪಕರ ಸಂಘದ ಎಂ.ಜಿ.ರಾಮಮೂರ್ತಿ, ನಿರ್ಮಾಪಕ ಸಾರಾ.ಗೋವಿಂದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಹೊನ್ನರಾಜ್ ಈ ಚಿತ್ರದಲ್ಲಿ ನಟನೆ, ನಿರ್ದೇಶನದ ಜತೆ, ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಪ್ರದರ್ಶನಗೊಂಡು ಹಾಕಿದ ಹಣದ 4ರಷ್ಟು ವಾಪಸ್ ಬರಲಿ ಎಂದು ಶುಭ ಹಾರೈಸಿದರು. ನಟ ಪ್ರೇಮ್ ಮಾತನಾಡಿ ಹೊನ್ನರಾಜ್ ನನಗೆ ಜೂನಿಯರ್, ಆಗ ಚಾಮರಾಜ್ ಮಾಸ್ಟರ್ ನಮಗೆಲ್ಲ ಗುರುಗಳು, ಸಿನಿಮಾ ನಿರ್ಮಸಣ ಮಾಡಿದ್ದಾರೆ. ಅವರಿಗೆ ಒಳ್ಳೆ ಫಲ ಸಿಗಲಿ ಎಂದು ಶುಭ ಹಾರೈಸಿದರು. ಸಾರಾ ಗೋವಿಂದು ಮಾತನಾಡಿ ಸಿರಿವಂತ ರಾಜಕಾರಣಿ ಕೈಲಿ ಸಾಂಗ್ ಲಾಂಚ್ ಮಾಡಿಸಿದ್ದೀರಿ, ಸಚಿವರ ಕೈಗುಣ ಚೆನ್ನಾಗಿದೆ. ನಾವೆಲ್ಲ ನಿಮ್ಮ ಬೆನ್ನೆಲುಬಾಗಿರುತ್ತೇವೆ, ರಿಲೀಸ್ ಸಮಯದಲ್ಲಿ ನಿಮ್ಮ ಜತೆ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ನಾಯಕ, ನಿರ್ದೇಶಕ ಹೊನ್ನರಾಜ್ ಮಾತನಾಡುತ್ತ ಇದೊಂದು ಹಳ್ಳಿ ಸೊಗಡಿನ ಚಿತ್ರ. ಯಶ್ ಅಭಿಮಾನಿಯಾದ ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸಮಾಜಸೇವೆ ಅಂತ ಹಳ್ಳಿಗೆ ಒಳ್ಳೆಯದನ್ನು ಮಾಡಲು ಹೋಗಿ ಆತ ಏನೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಫ್ಯಾಮಿಲಿ ಎಂಟರ್ ಟೈನರ್ ಕಥೆಯೊಂದಿಗೆ ಹೇಳಲು ಪ್ರಯತ್ನಿಸಿದ್ದೇನೆ. ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಂಗಿ ಪಾತ್ರವನ್ನು ರೂಪ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸಿಕ್ಕಿದ್ದು ಸೆಪ್ಟೆಂಬರ್ ನಲ್ಲಿ ರಿಲೀಸ್ ಮಾಡೋ ಯೋಜನೆಯಿದೆ. ಈ ಚಿತ್ರ ನಿರ್ಮಾಣದಲ್ಲಿ ಅಂಧರಾದ ನನ್ನ ತಮ್ಮ, ತಂಗಿ ಹಾಗೂ ಚಿಕ್ಕಮ್ಮ, ಸ್ನೇಹಿತರು ಸೇರಿದಂತೆ ಹಲವಾರು ಜನ ಕೈಜೋಡಿಸಿದ್ದಾರೆ ಎಂದು ಹೇಳಿ ಅವರಿಗೆ ವೇದಿಕೆಯಲ್ಲಿ ಗೌರವಿಸಿದರು. ಈ ಚಿತ್ರವನ್ನು ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಮೂಲಕ ಹೊನ್ನುರಾಜ್ ಅವರೇ ನಿರ್ಮಾಣ ಸಹ ಮಾಡಿದ್ದಾರೆ. ಈ ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ ನೃತ್ಯ ನಿರ್ದೇಶನವಿದೆ. ಮೈಸೂರು ಮಂಜುಳ , ರೇಖಾದಾಸ್, ಮಂಜಣ್ಣ, ಗಿರೀಶ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.#chigoramesh#Sandalwood#Actress#MrandMrsRamachari
ಟ್ಯಾಲೆಂಟ್ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಈ ಹಿಂದೆ ’ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದರು. ಆ ಸಾಲಿನಲ್ಲಿ ಮಿಂಚು, ಪ್ರವೀಣ್ ಗಸ್ತಿ ಗೋಕಾಕ್ ಮತ್ತು ಚಿದಂಬರ ಪೂಜಾರಿ ಕಣ್ಣ ಮುಂದೆ ಕಾಣುತ್ತಾರೆ. ಇವರುಗಳ ಬತ್ತಳಿಕೆಯಿಂದ *’ಮಹಾನ್ ಕಿಲಾಡಿ’* ಎಂಬ ರಿಯಾಲಿಟಿ ಷೋ ಶುರುವಾಗಿದೆ. ’ಟ್ಯಾಲೆಂಟ್ ನಿಮ್ಮದು ವೇದಿಕೆ ನಮ್ಮದು’ ಎಂಬ ಅಡಿಬರಹ ಇರಲಿದೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್, ಟೈಟಲ್ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ವಿಧಾನ ಪರಿಷತ್ ಸದಸ್ಯರಾದ ಟಿ.ಶರವಣ, ಉದ್ಯಮಿಗಳಾದ ಡಾ.ಎನ್.ನರಸಿಂಹಮೂರ್ತಿ, ಶ್ರೀಕಾಂತ್, ಡಾ.ಮೋಕ್ಷಗೊಂಡ ಗುರೂಜಿ ಮತ್ತು ಶ್ರೀ ಭಾರ್ಗವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರವಣ, ಕಲಾವಿದರುಗಳಿಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ. ಇವರುಗಳ ಶ್ರಮ ನೋಡಿದಾಗ, ಇಂತಹವರು ಲೈಮ್‌ಲೈಟ್‌ಗೆ ಬರಬೇಕು. ನಿಮಗೆ ಸರ್ಕಾರದಿಂದಲೂ ಅನುದಾನ ಬರಲು ಶಿಪಾರಸ್ಸು ಮಾಡುತ್ತೇನೆಂದು ಭರವಸೆ ನೀಡಿದರು.
*’ಮಹಾನ್ ಕಿಲಾಡಿ’ ಸಾರಥಿ ಮಿಂಚು* ಹೇಳುವಂತೆ, ಒಂದಷ್ಟು ವಿಷಯಗಳಿಂದ ಅವಕಾಶಗಳು ಇಲ್ಲದೆ ಇರುವಾಗ, ಹೊಸತನದೊಂದಿಗೆ ನನ್ನ ಅವಕಾಶವನ್ನು ನಾನೇ ರೂಪಿಸಿಕೊಳ್ಳಬೇಕು. ನಾನು ಕಲಿತುದನ್ನು ಬೇರೆಯವರಿಗೆ ಹೇಳಿಕೊಡಬೇಕು ಎಂಬ ಕಲ್ಪನೆಯನ್ನು ಗೆಳಯ ಪ್ರವೀಣ್ ಗಸ್ತಿಗೆ ಹೇಳಿದಾಗ, ಆತ ಬೆನ್ನಲುಬಾಗಿ ನಿಂತುಕೊಂಡಿದ್ದೇ ಇಲ್ಲಿಯವರೆಗೂ ಬಂದಿದೆ. ಮಿತವ್ಯಯ ಬಜೆಟ್‌ನೊಂದಿಗೆ ಶುರುಮಾಡಿ, ಮುಂದೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಅಕ್ಷರ ಸ್ಟುಡಿಯೋದ ಗೌರಿಪ್ರಸಾದ್ ಚಿತ್ರೀಕರಿಸಲು ಅನುವು ಮಾಡಿಕೊಟ್ಟರು. ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಕೊಟ್ಟಾಗ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದರು. ಇದರಲ್ಲಿ ಮೂರು ಸಲ ಅಡಿಷನ್ ಮಾಡಿ, ಅಂತಿಮವಾಗಿ 22 ಪ್ರತಿಭೆಗಳು ಆಯ್ಕೆಯಾಗಿದ್ದರೆ. ಇವರುಗಳಿಗೆ ಮೇಧಾವಿಗಳಿಂದ ಏಳು ವಾರಗಳ ತರಭೇತಿ ನೀಡಲಾಗಿ, ಕ್ಯಾಮಾರ ಮುಂದೆ ನಿಲ್ಲಿಸಲಾಗಿದೆ. ಕಿರಣ್‌ಕುಮಾರ್ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ದಿಲೀಪ್ ಕುಮಾರ್.ಹೆಚ್.ಆರ್ ಕ್ರಿಯಟೀವ್ ಮುಖ್ಯಸ್ಥ, ಪುಟ್ಟರಾಜು ಡಿಜಿಟಲ್ ಪ್ರಮೋಟರ್, ಚಿದಂಬರ ಪೂಜಾರಿ ಮೆಂಟರ್, ಸ್ಕ್ರಿಪ್ಟ್ ರೈಟರ್ ಶ್ರೀ ಪಲ್ಲವಿ ಆಗಿರುತ್ತಾರೆ. ನನ್ನೊಂದಿಗೆ ಮಹೇಶ್ ಕೃಷ್ಣ, ಪ್ರವೀಣ್ ಗಸ್ತಿ ತೀರ್ಪುಗಾರರಾಗಿರುತ್ತಾರೆ. *’ಮಿಂಚು ಎಂಟರ್‌ಟೈನ್ ಮೆಂಟ್ಸ್ ಯುಟ್ಯೂಬ್’* ಚಾನಲ್‌ದಲ್ಲಿ ಪ್ರಸಾರವಾಗಲಿದೆ. ಎಲ್ಲರೂ ನೋಡಿ ಚಂದದಾರರಾಗಿ, ಲೈಕ್ ಬಟನ್ ಒತ್ತುವುದರ ಮೂಲಕ ಬೆಂಬಲವಾಗಿ ನಿಂತರೆ, ನಮ್ಮ ಶ್ರಮ ಸಾರ್ಥಕವಾಗುತ್ತದೆ. ಮಾದ್ಯಮದವರು ಸಹಕಾರ ನೀಡಬೇಕೆಂದು ಕೋರಿಕೊಂಡರು.
ಛಾಯಾಗ್ರಹಣ ಅಕ್ಷಯ್ ಮೊಕಾಶಿ, ಸಂಕಲನ ಸುನಿಲ್-ಸುರೇಶ್ ಅವರದಾಗಿದೆ. ಇದೇ ಜೂನ್ 13 ರಿಂದ ಶೀರ್ಷಿಕೆ ಹಾಡು ಹೊರ ಬರಲಿದ್ದು, ಮುಂದಿನ ದಿನಗಳಲ್ಲಿ ಶುಕ್ರವಾರ ಮತ್ತು ಶನಿವಾರದಂದು ಒಂದೊಂದು ಗಂಟೆಗಳ ಕಾಲ ವೀಕ್ಷಕರನ್ನು ಮನರಂಜನೆ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಈಗಾಗಲೇ ಓಟಿಟಿ ಹಾಗೂ ವಾಹಿನಿದವರು ಆಸಕ್ತಿ ತೋರಿಸಿದ್ದು, ಮಿಕ್ಕಂತೆ ವಿಜೇತರಿಗೆ ನಗದು ಪುರಸ್ಕಾರ ಇತೆರೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡವು ಹೇಳಿಕೊಂಡಿದೆ.
*ಬೇಲ್ ಫಸ್ಟ್ ಲುಕ್ ರಿಲೀಸ್...ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಶಿವಣ್ಣ..ವರಮಹಾಲಕ್ಷ್ಮಿ ಹಬ್ಬ ಸಿನಿಮಾ ರಿಲೀಸ್*
*'ಬೇಲ್'ಗಾಗಿ ಹೊಸ ಅವತಾರ ತಾಳಿದ ಕರುನಾಡ ಚಕ್ರವರ್ತಿ... ಶಿವಣ್ಣ-ಕೆವಿಎನ್-ಪವನ್ ಒಡೆಯರ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ*
ಕೆವಿಎನ್ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಬೇಲ್. ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೀಗ ಬೇಲ್ ಸಿನಿಮಾದ ಫಸ್ಟ್ ಲುಕ್ ನ್ನು ಅನಾವರಣ ಮಾಡಿದೆ.
ಬೇಲ್ ಸಿನಿಮಾದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ದರ್ಶನ ಕೊಟ್ಟಿರುವ ಕರುನಾಡ ಚಕ್ರವರ್ತಿ, ವಿಜಿ ಎಂಬ ಪಾತ್ರವನ್ನು ಪ್ಲೇ ಮಾಡುತ್ತಿದ್ದಾರೆ. ಕೊಡೆ ಹಿಡಿದು ಸಾಕು ನಾಯಿಯ ಜೊತೆ ಶಿವಣ್ಣ ನಡೆದು ಬರುವ ಸ್ಟೈಲ್ ಸಖತ್ ಕಿಕ್ ಕೊಡ್ತಿದೆ. ಶಿವಣ್ಣ ಹಾಗೂ ಸಾಯಿ ಕುಮಾರ್ ಡೈಲಾಗ್ ಜುಗಲ್ ಬಂದಿಯಂತೂ ಸಿನಿಮಾ ಮೇಲಿನ ಥ್ರಿಲ್ ಹೆಚ್ಚು ಮಾಡಿದೆ.
ರಾತ್ರಿ ಜೋರು ಮಳೆಯಲ್ಲಿ ಬೆಂಗಳೂರು ಚಿತ್ರಣ.. ನಿಧಾನವಾಗಿ ನಾಯಿಗೆ ಬಿಸ್ಕೆಟ್ ತಿನ್ನುಸುತ್ತಿರುವ ವಿಜಿ ಪರಿಚಯ ಮಾಡಿಸುತ್ತಾರೆ. ಫೋನ್ ಕರೆ ಸ್ವೀಕರಿಸುವ ವಿಜಿಗೆ ಅತ್ತ ಕಡೆಯಿಂದ ಬಹುಪರಾಕ್ ಶುರುವಾಗುತ್ತದೆ. ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ ಎಂದು ಅತ್ತ ಕಡೆಯಿಂದ ಧ್ವನಿ ಕೇಳುತ್ತದೆ. ಇದನ್ನೆಲ್ಲಾ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ ಎಂದಾಗ "ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ" ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ ಶಿವಣ್ಣ.
ಪವನ್ ಒಡೆಯರ್ ಸತ್ಯಘಟನೆಗಳನ್ನು ಆಧರಿಸಿ ಬೇಲ್ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಇನ್ನು, ಚಿತ್ರದಲ್ಲಿ ಅನುಭವಿ ತಾಂತ್ರಿಕ ವರ್ಗ ಕೆಲಸ ಮಾಡ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವೈದ್ಯ ಛಾಯಾಗ್ರಹಣ ಹಾಗೂ ಗುಣ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಬೇಲ್ ಗಿದೆ.
ಸ್ಟಾರ್ ಹೀರೋಗಳಿಗೆ ವಿಭಿನ್ನ ಬಗೆಯ ಸಿನಿಮಾ ಮಾಡಿರುವ ಪವನ್ ಒಡೆಯರ್ ಈಗ ಶಿವಣ್ಣನಿಗೆ ಒಂದೊಳ್ಳೆ ಕಥೆ ಹೆಣೆದಿದ್ದಾರೆ. ಅದಕ್ಕೆ ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಬಂಡವಾಳ ಹಾಕ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಲ್ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ.
*ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹೊಸಬರ 'ಸುಮ್ನೆ ತಮಾಷೆಗೆ' ಸಿನಿಮಾದ ಸ್ಕ್ರಿಪ್ಟ್ ಪೂಜೆ*
*ಕಡಲ ತೀರ ಭಾರ್ಗವ ಹಾಗೂ ಯಾವ ಮೋಹನ ಮುರಳಿ ಕರೆಯಿತು ನಿರ್ದೇಶಕರ ಹೊಸ ಸಿನಿಮಾ 'ಸುಮ್ನೆ ತಮಾಷೆಗೆ'*
ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಹೊಸಬರು ವಿಭಿನ್ನ ಟೈಟಲ್ ಹಾಗೂ ಕಥೆ ಮೂಲಕ ಗಮನಸೆಳೆಯುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಸುಮ್ನೆ ತಮಾಷೆಗೆ.
ಈ ಹಿಂದೆ ಕಡಲ ತೀರದ ಭಾರ್ಗವ ನಿರ್ದೇಶಿಸಿದ್ದ ಪನ್ನಗ ಹಾಗೂ ಅವರ ಸ್ನೇಹಿತರು, ಯಾವ ಮೋಹನ ಮುರಳಿ ಕರೆಯಿತು ನಿರ್ದೇಶಕ ವಿಶ್ವಾಸ್ ಕೃಷ್ಣ ಈ ಸಿನಿಮಾಗೆ ಹಣ ಹಾಕುತ್ತಿದ್ದಾರೆ.
ಘಟಕಲ ಸುರೇಶ್ ಬಾಬು ಸುಮ್ನೆ ತಮಾಷೆಗೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆರವೇರಿದೆ.
ಕಡಲ ತೀರದ ಭಾರ್ಗವ, ಯಾವ ಮೋಹನ ಮುರಳಿ ಕರೆಯಿತು ಹಾಗೂ ಪೀಟರ್ ಸಿನಿಮಾಗಳಲ್ಲಿ ನಟಿಸಿರುವ ಪಟೇಲ್ ವರುಣ್ ರಾಜು ಸುಮ್ನೆ ತಮಾಷೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುವ ಪ್ರತಿಭೆಗಳಾದ ಹರೀಶ್, ದರ್ಶನ್ ಹಾಗೂ ಮಾಧವ ತಾರಾಬಳಗದಲ್ಲಿದ್ದಾರೆ. ಸಾಮ್ರಾಟ್ ಮ್ಯೂಸಿಕ್, ಪುನೀತ್ ಓಂಕಾರ್ ಸ್ಟಂಟ್ ಕೊರಿಯೋಗ್ರಫಿ ಚಿತ್ರಕ್ಕಿದೆ.
Navya Digital News
ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ!
1 month ago (edited) | [YT] | 0
View 0 replies
Navya Digital News
ಬೆಂಗಳೂರು ವಕೀಲರ ಸಂಘದ ಚುನಾಯಿತ ಪದಾಧಿಕಾರಿಗಳನ್ನೊಳಗೊಂಡ ನಿಯೋಗ ಸಿಎಂ ಡಿಕೆಶಿ ಅವರನ್ನು ಭೇಟಿ ಮಾಡಿತು.
2 months ago | [YT] | 1
View 0 replies
Navya Digital News
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ಶಾಸಕರ!
2 months ago (edited) | [YT] | 2
View 0 replies
Navya Digital News
*ಮಿಸ್ಟರ್ ಅಂಡ್ ಮಿಸಸ್*
*ರಾಜಾಹುಲಿ ಆಡಿಯೋ*
*ಸಚಿವ ರಾಮಲಿಂಗಾ ರೆಡ್ಡಿ* *ಬಿಡುಗಡೆ*
ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಹೊನ್ನರಾಜ್ ನಾಯಕ ಕಮ್ ನಿರ್ದೇಶಕನಾಗಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕಲಾವಿದರ ಸಂಘದಲ್ಲಿ ನೆರವೇರಿತು. ಸಚಿವ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಲವ್ಲಿಸ್ಟಾರ್ ಪ್ರೇಮ್ ಸಾಂಗ್ ರಿಲೀಸ್ ಮಾಡಿದರು. ನಿರ್ಮಾಪಕರ ಸಂಘದ ಎಂ.ಜಿ.ರಾಮಮೂರ್ತಿ, ನಿರ್ಮಾಪಕ ಸಾರಾ.ಗೋವಿಂದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಹೊನ್ನರಾಜ್ ಈ ಚಿತ್ರದಲ್ಲಿ ನಟನೆ, ನಿರ್ದೇಶನದ ಜತೆ, ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಪ್ರದರ್ಶನಗೊಂಡು ಹಾಕಿದ ಹಣದ 4ರಷ್ಟು ವಾಪಸ್ ಬರಲಿ ಎಂದು ಶುಭ ಹಾರೈಸಿದರು.
ನಟ ಪ್ರೇಮ್ ಮಾತನಾಡಿ ಹೊನ್ನರಾಜ್ ನನಗೆ ಜೂನಿಯರ್, ಆಗ ಚಾಮರಾಜ್ ಮಾಸ್ಟರ್ ನಮಗೆಲ್ಲ ಗುರುಗಳು, ಸಿನಿಮಾ ನಿರ್ಮಸಣ ಮಾಡಿದ್ದಾರೆ. ಅವರಿಗೆ ಒಳ್ಳೆ ಫಲ ಸಿಗಲಿ ಎಂದು
ಶುಭ ಹಾರೈಸಿದರು.
ಸಾರಾ ಗೋವಿಂದು ಮಾತನಾಡಿ ಸಿರಿವಂತ ರಾಜಕಾರಣಿ ಕೈಲಿ ಸಾಂಗ್ ಲಾಂಚ್ ಮಾಡಿಸಿದ್ದೀರಿ, ಸಚಿವರ ಕೈಗುಣ ಚೆನ್ನಾಗಿದೆ. ನಾವೆಲ್ಲ ನಿಮ್ಮ ಬೆನ್ನೆಲುಬಾಗಿರುತ್ತೇವೆ, ರಿಲೀಸ್ ಸಮಯದಲ್ಲಿ ನಿಮ್ಮ ಜತೆ ಇರುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಾಯಕ, ನಿರ್ದೇಶಕ ಹೊನ್ನರಾಜ್ ಮಾತನಾಡುತ್ತ ಇದೊಂದು ಹಳ್ಳಿ ಸೊಗಡಿನ ಚಿತ್ರ. ಯಶ್ ಅಭಿಮಾನಿಯಾದ ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸಮಾಜಸೇವೆ ಅಂತ ಹಳ್ಳಿಗೆ ಒಳ್ಳೆಯದನ್ನು ಮಾಡಲು ಹೋಗಿ ಆತ ಏನೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಫ್ಯಾಮಿಲಿ ಎಂಟರ್ ಟೈನರ್ ಕಥೆಯೊಂದಿಗೆ ಹೇಳಲು ಪ್ರಯತ್ನಿಸಿದ್ದೇನೆ. ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಂಗಿ ಪಾತ್ರವನ್ನು ರೂಪ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸಿಕ್ಕಿದ್ದು ಸೆಪ್ಟೆಂಬರ್ ನಲ್ಲಿ ರಿಲೀಸ್ ಮಾಡೋ ಯೋಜನೆಯಿದೆ. ಈ ಚಿತ್ರ ನಿರ್ಮಾಣದಲ್ಲಿ ಅಂಧರಾದ ನನ್ನ ತಮ್ಮ, ತಂಗಿ ಹಾಗೂ ಚಿಕ್ಕಮ್ಮ, ಸ್ನೇಹಿತರು ಸೇರಿದಂತೆ ಹಲವಾರು ಜನ ಕೈಜೋಡಿಸಿದ್ದಾರೆ ಎಂದು ಹೇಳಿ ಅವರಿಗೆ ವೇದಿಕೆಯಲ್ಲಿ ಗೌರವಿಸಿದರು.
ಈ ಚಿತ್ರವನ್ನು ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಮೂಲಕ ಹೊನ್ನುರಾಜ್ ಅವರೇ ನಿರ್ಮಾಣ ಸಹ ಮಾಡಿದ್ದಾರೆ. ಈ ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ ನೃತ್ಯ ನಿರ್ದೇಶನವಿದೆ. ಮೈಸೂರು ಮಂಜುಳ , ರೇಖಾದಾಸ್, ಮಂಜಣ್ಣ, ಗಿರೀಶ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.#chigoramesh #Sandalwood #Actress #MrandMrsRamachari
3 months ago | [YT] | 1
View 0 replies
Navya Digital News
ದಕ್ಷಿಣ ಭಾರತದ ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ!
3 months ago | [YT] | 1
View 0 replies
Navya Digital News
*ಇವರೇ ನಮ್ಮ ಮಹಾನ್ ಕಿಲಾಡಿಗಳು*
ಟ್ಯಾಲೆಂಟ್ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಈ ಹಿಂದೆ ’ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದರು. ಆ ಸಾಲಿನಲ್ಲಿ ಮಿಂಚು, ಪ್ರವೀಣ್ ಗಸ್ತಿ ಗೋಕಾಕ್ ಮತ್ತು ಚಿದಂಬರ ಪೂಜಾರಿ ಕಣ್ಣ ಮುಂದೆ ಕಾಣುತ್ತಾರೆ. ಇವರುಗಳ ಬತ್ತಳಿಕೆಯಿಂದ *’ಮಹಾನ್ ಕಿಲಾಡಿ’* ಎಂಬ ರಿಯಾಲಿಟಿ ಷೋ ಶುರುವಾಗಿದೆ. ’ಟ್ಯಾಲೆಂಟ್ ನಿಮ್ಮದು ವೇದಿಕೆ ನಮ್ಮದು’ ಎಂಬ ಅಡಿಬರಹ ಇರಲಿದೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್, ಟೈಟಲ್ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ವಿಧಾನ ಪರಿಷತ್ ಸದಸ್ಯರಾದ ಟಿ.ಶರವಣ, ಉದ್ಯಮಿಗಳಾದ ಡಾ.ಎನ್.ನರಸಿಂಹಮೂರ್ತಿ, ಶ್ರೀಕಾಂತ್, ಡಾ.ಮೋಕ್ಷಗೊಂಡ ಗುರೂಜಿ ಮತ್ತು ಶ್ರೀ ಭಾರ್ಗವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರವಣ, ಕಲಾವಿದರುಗಳಿಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ. ಇವರುಗಳ ಶ್ರಮ ನೋಡಿದಾಗ, ಇಂತಹವರು ಲೈಮ್‌ಲೈಟ್‌ಗೆ ಬರಬೇಕು. ನಿಮಗೆ ಸರ್ಕಾರದಿಂದಲೂ ಅನುದಾನ ಬರಲು ಶಿಪಾರಸ್ಸು ಮಾಡುತ್ತೇನೆಂದು ಭರವಸೆ ನೀಡಿದರು.
*’ಮಹಾನ್ ಕಿಲಾಡಿ’ ಸಾರಥಿ ಮಿಂಚು* ಹೇಳುವಂತೆ, ಒಂದಷ್ಟು ವಿಷಯಗಳಿಂದ ಅವಕಾಶಗಳು ಇಲ್ಲದೆ ಇರುವಾಗ, ಹೊಸತನದೊಂದಿಗೆ ನನ್ನ ಅವಕಾಶವನ್ನು ನಾನೇ ರೂಪಿಸಿಕೊಳ್ಳಬೇಕು. ನಾನು ಕಲಿತುದನ್ನು ಬೇರೆಯವರಿಗೆ ಹೇಳಿಕೊಡಬೇಕು ಎಂಬ ಕಲ್ಪನೆಯನ್ನು ಗೆಳಯ ಪ್ರವೀಣ್ ಗಸ್ತಿಗೆ ಹೇಳಿದಾಗ, ಆತ ಬೆನ್ನಲುಬಾಗಿ ನಿಂತುಕೊಂಡಿದ್ದೇ ಇಲ್ಲಿಯವರೆಗೂ ಬಂದಿದೆ. ಮಿತವ್ಯಯ ಬಜೆಟ್‌ನೊಂದಿಗೆ ಶುರುಮಾಡಿ, ಮುಂದೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಅಕ್ಷರ ಸ್ಟುಡಿಯೋದ ಗೌರಿಪ್ರಸಾದ್ ಚಿತ್ರೀಕರಿಸಲು ಅನುವು ಮಾಡಿಕೊಟ್ಟರು. ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಕೊಟ್ಟಾಗ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದರು. ಇದರಲ್ಲಿ ಮೂರು ಸಲ ಅಡಿಷನ್ ಮಾಡಿ, ಅಂತಿಮವಾಗಿ 22 ಪ್ರತಿಭೆಗಳು ಆಯ್ಕೆಯಾಗಿದ್ದರೆ. ಇವರುಗಳಿಗೆ ಮೇಧಾವಿಗಳಿಂದ ಏಳು ವಾರಗಳ ತರಭೇತಿ ನೀಡಲಾಗಿ, ಕ್ಯಾಮಾರ ಮುಂದೆ ನಿಲ್ಲಿಸಲಾಗಿದೆ. ಕಿರಣ್‌ಕುಮಾರ್ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ದಿಲೀಪ್ ಕುಮಾರ್.ಹೆಚ್.ಆರ್ ಕ್ರಿಯಟೀವ್ ಮುಖ್ಯಸ್ಥ, ಪುಟ್ಟರಾಜು ಡಿಜಿಟಲ್ ಪ್ರಮೋಟರ್, ಚಿದಂಬರ ಪೂಜಾರಿ ಮೆಂಟರ್, ಸ್ಕ್ರಿಪ್ಟ್ ರೈಟರ್ ಶ್ರೀ ಪಲ್ಲವಿ ಆಗಿರುತ್ತಾರೆ. ನನ್ನೊಂದಿಗೆ ಮಹೇಶ್ ಕೃಷ್ಣ, ಪ್ರವೀಣ್ ಗಸ್ತಿ ತೀರ್ಪುಗಾರರಾಗಿರುತ್ತಾರೆ. *’ಮಿಂಚು ಎಂಟರ್‌ಟೈನ್ ಮೆಂಟ್ಸ್ ಯುಟ್ಯೂಬ್’* ಚಾನಲ್‌ದಲ್ಲಿ ಪ್ರಸಾರವಾಗಲಿದೆ. ಎಲ್ಲರೂ ನೋಡಿ ಚಂದದಾರರಾಗಿ, ಲೈಕ್ ಬಟನ್ ಒತ್ತುವುದರ ಮೂಲಕ ಬೆಂಬಲವಾಗಿ ನಿಂತರೆ, ನಮ್ಮ ಶ್ರಮ ಸಾರ್ಥಕವಾಗುತ್ತದೆ. ಮಾದ್ಯಮದವರು ಸಹಕಾರ ನೀಡಬೇಕೆಂದು ಕೋರಿಕೊಂಡರು.
ಛಾಯಾಗ್ರಹಣ ಅಕ್ಷಯ್ ಮೊಕಾಶಿ, ಸಂಕಲನ ಸುನಿಲ್-ಸುರೇಶ್ ಅವರದಾಗಿದೆ. ಇದೇ ಜೂನ್ 13 ರಿಂದ ಶೀರ್ಷಿಕೆ ಹಾಡು ಹೊರ ಬರಲಿದ್ದು, ಮುಂದಿನ ದಿನಗಳಲ್ಲಿ ಶುಕ್ರವಾರ ಮತ್ತು ಶನಿವಾರದಂದು ಒಂದೊಂದು ಗಂಟೆಗಳ ಕಾಲ ವೀಕ್ಷಕರನ್ನು ಮನರಂಜನೆ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಈಗಾಗಲೇ ಓಟಿಟಿ ಹಾಗೂ ವಾಹಿನಿದವರು ಆಸಕ್ತಿ ತೋರಿಸಿದ್ದು, ಮಿಕ್ಕಂತೆ ವಿಜೇತರಿಗೆ ನಗದು ಪುರಸ್ಕಾರ ಇತೆರೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡವು ಹೇಳಿಕೊಂಡಿದೆ.
4 months ago | [YT] | 1
View 0 replies
Navya Digital News
5 months ago | [YT] | 7
View 0 replies
Navya Digital News
5 months ago | [YT] | 1
View 0 replies
Navya Digital News
*ಬೇಲ್ ಫಸ್ಟ್ ಲುಕ್ ರಿಲೀಸ್...ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಶಿವಣ್ಣ..ವರಮಹಾಲಕ್ಷ್ಮಿ ಹಬ್ಬ ಸಿನಿಮಾ ರಿಲೀಸ್*
*'ಬೇಲ್'ಗಾಗಿ ಹೊಸ ಅವತಾರ ತಾಳಿದ ಕರುನಾಡ ಚಕ್ರವರ್ತಿ... ಶಿವಣ್ಣ-ಕೆವಿಎನ್-ಪವನ್ ಒಡೆಯರ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ*
ಕೆವಿಎನ್ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಬೇಲ್. ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೀಗ ಬೇಲ್ ಸಿನಿಮಾದ ಫಸ್ಟ್ ಲುಕ್ ನ್ನು ಅನಾವರಣ ಮಾಡಿದೆ.
ಬೇಲ್ ಸಿನಿಮಾದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ದರ್ಶನ ಕೊಟ್ಟಿರುವ ಕರುನಾಡ ಚಕ್ರವರ್ತಿ, ವಿಜಿ ಎಂಬ ಪಾತ್ರವನ್ನು ಪ್ಲೇ ಮಾಡುತ್ತಿದ್ದಾರೆ. ಕೊಡೆ ಹಿಡಿದು ಸಾಕು ನಾಯಿಯ ಜೊತೆ ಶಿವಣ್ಣ ನಡೆದು ಬರುವ ಸ್ಟೈಲ್ ಸಖತ್ ಕಿಕ್ ಕೊಡ್ತಿದೆ. ಶಿವಣ್ಣ ಹಾಗೂ ಸಾಯಿ ಕುಮಾರ್ ಡೈಲಾಗ್ ಜುಗಲ್ ಬಂದಿಯಂತೂ ಸಿನಿಮಾ ಮೇಲಿನ ಥ್ರಿಲ್ ಹೆಚ್ಚು ಮಾಡಿದೆ.
ರಾತ್ರಿ ಜೋರು ಮಳೆಯಲ್ಲಿ ಬೆಂಗಳೂರು ಚಿತ್ರಣ.. ನಿಧಾನವಾಗಿ ನಾಯಿಗೆ ಬಿಸ್ಕೆಟ್ ತಿನ್ನುಸುತ್ತಿರುವ ವಿಜಿ ಪರಿಚಯ ಮಾಡಿಸುತ್ತಾರೆ. ಫೋನ್ ಕರೆ ಸ್ವೀಕರಿಸುವ ವಿಜಿಗೆ ಅತ್ತ ಕಡೆಯಿಂದ ಬಹುಪರಾಕ್ ಶುರುವಾಗುತ್ತದೆ. ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ ಎಂದು ಅತ್ತ ಕಡೆಯಿಂದ ಧ್ವನಿ ಕೇಳುತ್ತದೆ. ಇದನ್ನೆಲ್ಲಾ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ ಎಂದಾಗ "ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ" ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ ಶಿವಣ್ಣ.
ಪವನ್ ಒಡೆಯರ್ ಸತ್ಯಘಟನೆಗಳನ್ನು ಆಧರಿಸಿ ಬೇಲ್ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಇನ್ನು, ಚಿತ್ರದಲ್ಲಿ ಅನುಭವಿ ತಾಂತ್ರಿಕ ವರ್ಗ ಕೆಲಸ ಮಾಡ್ತಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವೈದ್ಯ ಛಾಯಾಗ್ರಹಣ ಹಾಗೂ ಗುಣ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಬೇಲ್ ಗಿದೆ.
ಸ್ಟಾರ್ ಹೀರೋಗಳಿಗೆ ವಿಭಿನ್ನ ಬಗೆಯ ಸಿನಿಮಾ ಮಾಡಿರುವ ಪವನ್ ಒಡೆಯರ್ ಈಗ ಶಿವಣ್ಣನಿಗೆ ಒಂದೊಳ್ಳೆ ಕಥೆ ಹೆಣೆದಿದ್ದಾರೆ. ಅದಕ್ಕೆ ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಬಂಡವಾಳ ಹಾಕ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಲ್ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ.
5 months ago | [YT] | 1
View 0 replies
Navya Digital News
*ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹೊಸಬರ 'ಸುಮ್ನೆ ತಮಾಷೆಗೆ' ಸಿನಿಮಾದ ಸ್ಕ್ರಿಪ್ಟ್ ಪೂಜೆ*
*ಕಡಲ ತೀರ ಭಾರ್ಗವ ಹಾಗೂ ಯಾವ ಮೋಹನ ಮುರಳಿ ಕರೆಯಿತು ನಿರ್ದೇಶಕರ ಹೊಸ ಸಿನಿಮಾ 'ಸುಮ್ನೆ ತಮಾಷೆಗೆ'*
ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಹೊಸಬರು ವಿಭಿನ್ನ ಟೈಟಲ್ ಹಾಗೂ ಕಥೆ ಮೂಲಕ ಗಮನಸೆಳೆಯುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಸುಮ್ನೆ ತಮಾಷೆಗೆ.
ಈ ಹಿಂದೆ ಕಡಲ ತೀರದ ಭಾರ್ಗವ ನಿರ್ದೇಶಿಸಿದ್ದ ಪನ್ನಗ ಹಾಗೂ ಅವರ ಸ್ನೇಹಿತರು, ಯಾವ ಮೋಹನ ಮುರಳಿ ಕರೆಯಿತು ನಿರ್ದೇಶಕ ವಿಶ್ವಾಸ್ ಕೃಷ್ಣ ಈ ಸಿನಿಮಾಗೆ ಹಣ ಹಾಕುತ್ತಿದ್ದಾರೆ.
ಘಟಕಲ ಸುರೇಶ್ ಬಾಬು ಸುಮ್ನೆ ತಮಾಷೆಗೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆರವೇರಿದೆ.
ಕಡಲ ತೀರದ ಭಾರ್ಗವ, ಯಾವ ಮೋಹನ ಮುರಳಿ ಕರೆಯಿತು ಹಾಗೂ ಪೀಟರ್ ಸಿನಿಮಾಗಳಲ್ಲಿ ನಟಿಸಿರುವ ಪಟೇಲ್ ವರುಣ್ ರಾಜು ಸುಮ್ನೆ ತಮಾಷೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುವ ಪ್ರತಿಭೆಗಳಾದ ಹರೀಶ್, ದರ್ಶನ್ ಹಾಗೂ ಮಾಧವ ತಾರಾಬಳಗದಲ್ಲಿದ್ದಾರೆ. ಸಾಮ್ರಾಟ್ ಮ್ಯೂಸಿಕ್, ಪುನೀತ್ ಓಂಕಾರ್ ಸ್ಟಂಟ್ ಕೊರಿಯೋಗ್ರಫಿ ಚಿತ್ರಕ್ಕಿದೆ.
5 months ago | [YT] | 2
View 0 replies
Load more