ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
YouTube Channel: @ShivamoggaMedia24x7
Welcome to Shivamogga Media 24x7 News, your trusted source for the latest updates, breaking news, and authentic stories. Bringing you truthful, live, and impactful journalism that resonates with the voice of the people. 🌍📰
Stay informed about current affairs, political insights, cultural stories, and much more with our engaging and factual reporting. We are dedicated to keeping you connected with the pulse of reality.
Subscribe to our channel and join us in exploring the world of news as it unfolds. Don’t forget to like, share, and comment to let your voice be heard!
📌 Slogan: ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
Stay updated. Stay aware. Stay with Shivamogga Media 24x7 News. 🎥✅
Shivamogga Media 24x7
ರಾಜ್ಯಮಟ್ಟದ ದಸರಾ ಕಾವ್ಯ ಸಂಭ್ರಮ ಉದ್ಘಾಟನೆ
ಇರುವೆಯ ಹೆಜ್ಜೆಯ ಸಪ್ಪಳವನ್ನೂ ಆಲಿಸುವವನೇ ನಿಜವಾದ ಕವಿ
ಶಿವಮೊಗ್ಗ: ಕವಿಯೆಂದರೆ ಜಂಬ ಪಡಲು ಕೊಂಬಿಲ್ಲದವನು, ಇತರರಿಗಿಂತ ತುಸು ಹೆಚ್ಚಾಗಿ ನೋವಿಗೆ ಕರಗುವವನು, ಕಲ್ಲು ಕರಗುವ ಕ್ಷಣವನ್ನು ಕಾಣಬಲ್ಲವನು, ಇರುವೆಯ ಹೆಜ್ಜೆಯ ಸಪ್ಪಳವನ್ನೂ ಆಲಿಸಬಲ್ಲವನು. ಇಂತಹ ಸೂಕ್ಷ್ಮ ಸಂವೇದನೆಯೇ ನಿಜವಾದ ಕವಿಯ ಅಂತರಂಗದ ಶಕ್ತಿ ಎಂದು ಹಿರಿಯ ಸಾಹಿತಿ ಸವಿತಾ ನಾಗಭೂಷಣ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ‘ದಸರಾ ಕಾವ್ಯ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಕವಿತೆ ಎಂದರೆ ಕೇವಲ ಪದಗಳ ಜೋಡಣೆಯಲ್ಲ. ಅದು ಮನುಷ್ಯನ ಅಂತರಂಗದಲ್ಲಿ ಜೀವ ಸಂಚಾರ ಮಾಡುವ, ಸಮಾಜದ ನೋವಿಗೆ ಮಿಡಿಯುವ ಹಾಗೂ ಮಾನವೀಯತೆಯ ಬೆಳಕನ್ನು ಹರಿಸುವ ಅಭಿವ್ಯಕ್ತಿ. ಕವಿಯ ಮಾತುಗಳಲ್ಲಿ ಜೀವಂತಿಕೆ ಮೂಡಿದಾಗ, ಆ ಕವಿತೆ ಓದುಗನ ವ್ಯಕ್ತಿತ್ವ ಮತ್ತು ಜ್ಞಾನದ ಭಾಗವಾದಾಗ ಮಾತ್ರ ಅದು ನಿಜವಾದ ಕವಿತೆಯಾಗುತ್ತದೆ. ಇಲ್ಲವಾದರೆ ಅದು ಕೇವಲ ಶಬ್ದಗಳ ರಚನೆಯಾಗಿ ಉಳಿಯುತ್ತದೆ.
ದೇವರ ಎದುರು ನಿಂತ ಭಕ್ತನಿಗೆ ದೇವರು ಹೇಗೆ ಆತ್ಮೀಯನೋ, ಹಾಗೆಯೇ ಸಹೃದಯನಿಗೆ ಕವಿಯೂ ಅಷ್ಟೇ ಆತ್ಮೀಯನಾಗಿರುತ್ತಾನೆ. ಯಾವುದೇ ಭಾಷೆಯ ಕವಿಯಾದರೂ ಮನುಷ್ಯತ್ವದ ಪರವಾಗಿ ನಿಂತು, ಇತರರ ಸಂಕಷ್ಟಗಳಿಗೆ ಹೆಗಲು ನೀಡುವ ಮನೋಭಾವ ಹೊಂದಿರಬೇಕು. ಆದರೆ ಇಂದು ಪರಸ್ಪರ ಮಾತನಾಡುವ ಸಂಯಮವನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಗೌರವ ಮರೆಯಾಗುತ್ತಿದ್ದು, ಸಮಾಜ ಪೈಪೋಟಿಯ ಹಿಂದೆ ಓಡುತ್ತಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಯುದ್ಧವೂ ಇಡೀ ವಿಶ್ವದ ಜನಜೀವನದ ಮೇಲೆ ಪರಿಣಾಮ ಬೀರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಅಸಮಾನತೆ ತುಂಬಿ ತುಳುಕುತ್ತಿರುವ ಇಂದಿನ ಸಂದರ್ಭದಲ್ಲಿ ಸಮಾಜದ ಸ್ಥಿತಿಗತಿಗಳನ್ನು ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಅನಾರೋಗ್ಯದ ಬದುಕು ವೈದ್ಯಕೀಯ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದರೆ, ನೆಮ್ಮದಿಯ ಹುಡುಕಾಟ ಮನುಷ್ಯನನ್ನು ಆಧ್ಯಾತ್ಮಿಕ ನೆಲೆಗಳತ್ತ ಕರೆದೊಯ್ಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬಳಸುವ ವಸ್ತುಗಳಿಂದ ಹಿಡಿದು ನಮ್ಮ ಜೀವನಶೈಲಿಯವರೆಗೆ ಎಲ್ಲದರ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಸಾಮಾಜಿಕ ಸ್ಥಿತ್ಯಂತರಗಳ ಸಂದರ್ಭದಲ್ಲಿ ಲೇಖಕರ ಜವಾಬ್ದಾರಿಯ ಕುರಿತು ಗಂಭೀರ ವಿಮರ್ಶೆ ನಡೆಯಬೇಕಿದೆ. ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆಗಳು, ಜೆನ್ ಜಿ ಹೋರಾಟಗಳು ಸೇರಿದಂತೆ ಸಮಕಾಲೀನ ಸಾಮಾಜಿಕ ವಿದ್ಯಮಾನಗಳಿಗೆ ಕವಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದೇ ಇಂದಿನ ಕವಿಗೋಷ್ಠಿಯ ಆಶಯವಾಗಿದೆ. ಸಾಮಾಜಿಕ ಕಳಕಳಿಯನ್ನು ಅಭಿವ್ಯಕ್ತಿಸುವಾಗ ಬರಹಗಾರರಲ್ಲಿ ಬದ್ಧತೆ ಅತ್ಯಂತ ಮುಖ್ಯ ಎಂದು ಹೇಳಿದರು.
********
ಸಾಮಾಜಿಕ ಸ್ಥಿತ್ಯಂತರಕ್ಕೆ ಸ್ಪಂದಿಸಿದ ಕವಿ ಮನಸ್ಸು
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ಕವಿಗಳ ಕಾವ್ಯಧ್ವನಿಯಲ್ಲಿ ಸಮಕಾಲೀನ ಸಮಾಜದ ತಲ್ಲಣಗಳು, ಮನುಷ್ಯ ಸಂಬಂಧಗಳ ಸೂಕ್ಷ್ಮತೆಗಳು ಹಾಗೂ ಪ್ರಕೃತಿಯ ಸಂಕಟಗಳು ಅನಾವರಣಗೊಂಡವು. ಮನುಷ್ಯತ್ವದ ಹುಡುಕಾಟ, ಹಸಿರಿನ ಉಳಿವಿನ ಕಾಳಜಿ, ಒಡಲಾಳದ ಅಪನಂಬಿಕೆಯ ಗೋಡೆಗಳು, ಕೃಷಿಯಿಂದ ವಿಮುಖರಾಗಿ ಪಟ್ಟಣದತ್ತ ಮುಖ ಮಾಡುತ್ತಿರುವ ಯುವ ಸಮೂಹದ ಬದುಕಿನ ಆಯ್ಕೆಗಳು ಕವಿತೆಗಳ ವಸ್ತುವಾದವು.
ಬಿರುಕು ಬಿಟ್ಟ ಮಣ್ಣಿನ ಮೌನವೇ ವೇದನೆಯ ಕತೆಯಾದಾಗ, ಬರದ ಬೇಗುದಿ ಕವಿತೆಯ ಸಾಲುಗಳಲ್ಲಿ ಕಣ್ಣೀರಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಹೇರಲಾಗುತ್ತಿರುವ ಮಾರಕ ಯೋಜನೆಗಳು, ಪರಿಸರದ ನಾಶ ಮತ್ತು ಮನುಷ್ಯನ ಸ್ವಾರ್ಥದ ವಿರುದ್ಧ ಕವಿಗಳ ಅಕ್ಷರಗಳು ಪ್ರತಿಭಟನೆಯ ಧ್ವನಿಯಾದವು.
**********
ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ದೇವೇಂದ್ರಯ್ಯ ಮಾತನಾಡಿದರು. ಪದಾಧಿಕಾರಿಗಳಾದ ಎಂ. ನವೀನ್ ಕುಮಾರ್, ಕೃಷ್ಣಮೂರ್ತಿ ಹಿಳ್ಳೋಡಿ, ಭಾರತಿ ರಾಮಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುಶೀಲಾ ಷಣ್ಮುಗಂ ಪ್ರಾರ್ಥಿಸಿ, ಡಿ. ಗಣೇಶ್ ಸ್ವಾಗತಿಸಿ, ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.
2 hours ago | [YT] | 0
View 0 replies
Shivamogga Media 24x7
*ನವರಾತ್ರಿ ಅಂಗವಾಗಿ ಶಿವಮೊಗ್ಗದಲ್ಲಿ ಎರಡು ದಿನಗಳ ‘ದಿವ್ಯ ಸತ್ಸಂಗ’ ಕಾರ್ಯಕ್ರಮ*
ಗಾನ, ಧ್ಯಾನ, ಜ್ಞಾನದ ಮೂಲಕ ಮನಸ್ಸಿಗೆ ಶಾಂತಿ, ಬದುಕಿಗೆ ಹೊಸ ಚೈತನ್ಯ — ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆ*
ಶಿವಮೊಗ್ಗ: ನವರಾತ್ರಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಭಕ್ತಿ, ಧ್ಯಾನ ಹಾಗೂ ಜ್ಞಾನದ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಶಿವಮೊಗ್ಗದ ಸಹಯೋಗದಲ್ಲಿ ಎರಡು ದಿನಗಳ ವಿಶೇಷ ‘ದಿವ್ಯ ಸತ್ಸಂಗ — ಗಾನ, ಧ್ಯಾನ, ಜ್ಞಾನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 16ರ ಶುಕ್ರವಾರ ಸಂಜೆ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದ ಆವರಣದಲ್ಲಿ ಹಾಗೂ ಅಕ್ಟೋಬರ್ 17ರ ಶನಿವಾರ ಸಂಜೆ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಆಯಾ ದೇವಸ್ಥಾನಗಳ ಅರ್ಚಕ ವೃಂದದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರ ಶಿಷ್ಯ ವೃಂದದವರು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳ ಗಾಯನ, ಸಾಮೂಹಿಕ ಧ್ಯಾನ ಹಾಗೂ ಜೀವನಕ್ಕೆ ದಾರಿದೀಪವಾಗುವ ಜ್ಞಾನ ಸಂದೇಶಗಳು ಪ್ರಮುಖ ಆಕರ್ಷಣೆಯಾಗಿರಲಿವೆ. ಅನುಭವಿ ಹಾಗೂ ನುರಿತ ಸಂಗೀತ ವಾದ್ಯವೃಂದದವರು ಸತ್ಸಂಗ ಗಾಯನಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ.
ಇಂದಿನ ವೇಗದ ಬದುಕಿನಲ್ಲಿ ಒತ್ತಡ, ಆತಂಕ, ಸ್ಪರ್ಧೆ ಹಾಗೂ ಮಾನಸಿಕ ಗೊಂದಲಗಳು ಮನುಷ್ಯನ ನೆಮ್ಮದಿಯನ್ನು ಕಸಿದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಭಜನೆ, ಧ್ಯಾನ ಮತ್ತು ಜ್ಞಾನವು ವ್ಯಕ್ತಿಯ ಬದುಕಿನಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲವು. ಭಗವಂತನ ನಾಮಸ್ಮರಣೆಯು ಮನಸ್ಸಿನಲ್ಲಿ ಭಕ್ತಿಭಾವವನ್ನು ಮೂಡಿಸಿದರೆ, ಧ್ಯಾನವು ಮನಸ್ಸನ್ನು ಶಾಂತಗೊಳಿಸಿ ಆಂತರಿಕ ನೆಮ್ಮದಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಜ್ಞಾನವು ಜೀವನದ ಸವಾಲುಗಳನ್ನು ಸಮಚಿತ್ತದಿಂದ ಎದುರಿಸಲು ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಮಾನವೀಯ ಮೌಲ್ಯಗಳ ಮೂಲಕ ವ್ಯಕ್ತಿಯ ಆಂತರಿಕ ಬೆಳವಣಿಗೆಯೊಂದಿಗೆ ಸಮಾಜದ ಸಾಮರಸ್ಯಕ್ಕೂ ಮಹತ್ವ ನೀಡುತ್ತಿದೆ. ವ್ಯಕ್ತಿಯ ಮನಸ್ಸಿನಲ್ಲಿ ಶಾಂತಿ ಮೂಡಿದಾಗ ಕುಟುಂಬದಲ್ಲಿ ನೆಮ್ಮದಿ ಹೆಚ್ಚುತ್ತದೆ; ಕುಟುಂಬಗಳಲ್ಲಿ ಪ್ರೀತಿ ಮತ್ತು ಸಾಮರಸ್ಯ ಬೆಳೆದಾಗ ಸಮಾಜದಲ್ಲಿ ಸಹಬಾಳ್ವೆ ಬಲಗೊಳ್ಳುತ್ತದೆ. ಸೇವೆ, ಕರುಣೆ, ಸಹನೆ ಹಾಗೂ ಪರಸ್ಪರ ಗೌರವದಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಸುಂದರ ಸಮಾಜ ನಿರ್ಮಾಣದ ಪ್ರಮುಖ ಹೆಜ್ಜೆಯಾಗಿದೆ ಎಂಬ ಸಂದೇಶವನ್ನು ಈ ದಿವ್ಯ ಸತ್ಸಂಗ ಸಾರಲಿದೆ.
ಸತ್ಸಂಗವೆಂದರೆ ಕೇವಲ ಭಜನೆ ಹಾಡುವುದು ಅಥವಾ ಆಧ್ಯಾತ್ಮಿಕ ವಿಚಾರಗಳನ್ನು ಆಲಿಸುವುದಷ್ಟೇ ಅಲ್ಲ. ಕೇಳಿದ ಜ್ಞಾನವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು, ನಮ್ಮ ಆಲೋಚನೆಗಳಲ್ಲಿ ಸಕಾರಾತ್ಮಕತೆ ಬೆಳೆಸಿಕೊಂಡು, ಕುಟುಂಬ ಹಾಗೂ ಸಮಾಜಕ್ಕೆ ಉಪಯುಕ್ತವಾದ ಜೀವನವನ್ನು ನಡೆಸುವುದಾಗಿದೆ. ಕೋಪದ ಸಂದರ್ಭದಲ್ಲಿ ತಾಳ್ಮೆ, ಸಂಕಷ್ಟದ ಸಂದರ್ಭದಲ್ಲಿ ಧೈರ್ಯ, ಸಂಬಂಧಗಳಲ್ಲಿ ಪ್ರೀತಿ ಹಾಗೂ ಸಮಾಜದೊಂದಿಗೆ ಸೇವಾ ಮನೋಭಾವ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ.
ನವರಾತ್ರಿಯು ಶಕ್ತಿ ಆರಾಧನೆಯ ಪರ್ವವಾಗಿದ್ದು, ನಮ್ಮೊಳಗಿನ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವ ಪವಿತ್ರ ಸಂದರ್ಭವೂ ಆಗಿದೆ. ಈ ಸಂದರ್ಭದಲ್ಲಿ ನಡೆಯುವ ದಿವ್ಯ ಸತ್ಸಂಗವು ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುವುದರ ಜೊತೆಗೆ, ಮನಸ್ಸಿನ ನೆಮ್ಮದಿ, ಜೀವನದ ಮೌಲ್ಯಗಳು ಹಾಗೂ ಮಾನವೀಯ ಸಂಬಂಧಗಳ ಮಹತ್ವವನ್ನು ಅರಿಯಲು ಉತ್ತಮ ವೇದಿಕೆಯಾಗಲಿದೆ.
‘ಗಾನದಿಂದ ಭಕ್ತಿ, ಧ್ಯಾನದಿಂದ ಶಾಂತಿ, ಜ್ಞಾನದಿಂದ ಜೀವನದ ಉನ್ನತಿ’ ಎಂಬ ಆಶಯದೊಂದಿಗೆ ಆಯೋಜಿಸಿರುವ ಈ ಅಪೂರ್ವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಮಸ್ತ ಭಕ್ತಾದಿಗಳು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಕ್ತಿಯ ಆನಂದವನ್ನು ಅನುಭವಿಸಿ, ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
4 days ago | [YT] | 3
View 0 replies
Shivamogga Media 24x7
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪ್ರಕಟಣೆ...
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ.
ಈ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರಿನ ಉಲ್ಲೇಖ ಇರುವ ಈ ಸ್ಟ್ರಿಂಗ್ ಆಪರೇಷನ್ ವಿಡಿಯೋ ಅನ್ನು ಯಾವುದೇ ಪತ್ರಿಕೆ, ಚಾನೆಲ್ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರಿ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ.
ಈ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ತಿಳಿದಿದೆ. ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ರಾಜಕೀಯ ಜೀವನದ ಅರಿವು ಇರುವ ರಾಜ್ಯದ ಜನತೆಗೂ ಇದು ಗೊತ್ತಿದೆ ಎನ್ನುವ ವಿಶ್ವಾಸ ನನಗಿದೆ. ಆದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆಯೇ ಹೊರತು ಉಳಿದಂತೆ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ನನಗಿದೆ.
ನಾನು ಸಂಪೂರ್ಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು. ಇಲ್ಲಿಯ ವರೆಗಿನ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದವನಲ್ಲ. ಆದರೆ ಕೆಲವು ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೂಲಕ ಪ್ರಕಟಣೆ-ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ.
ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ. ಅಲ್ಲಿಯ ವರೆಗೆ ಮಾಧ್ಯಮಗಳು ಮಾತ್ರವಲ್ಲ ಸಾರ್ವಜನಿಕರು ಕೂಡಾ ಅನಗತ್ಯವಾಗಿ ಇಂತಹ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕೆಂದು ಕೋರುತ್ತೇನೆ.
4 days ago | [YT] | 3
View 0 replies
Shivamogga Media 24x7
ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕ ಮಂದಣ್ಣ ದಂಪತಿಗಳು..
5 days ago | [YT] | 0
View 0 replies
Shivamogga Media 24x7
: 13/ 10/2026 ಮಂಗಳವಾರ ಸಂಜೆ 5:30ಕ್ಕೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ನಲ್ಲಿ
ಮದಕರಿ ನಾಯಕರ ಜಯಂತಿ,
ಶಿವಮೊಗ್ಗ ನಗರದಲ್ಲಿ ಮದಕರಿ ನಾಯಕರ ಜಯಂತಿ,
ದಿನಾಂಕ 13/ 10/2026 ಮಂಗಳವಾರ ಸಂಜೆ 5:30ಕ್ಕೆ ಸರಿಯಾಗಿ ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಯುವಪಡೆ ( ರಿ) ಇವರ ಸಂಯೋಗದಲ್ಲಿ ನಾಡ ದೊರೆ ರಾಜ ವೀರ ಮದಕರಿ ನಾಯಕರ 284ನೇ ಜಯಂತೋತ್ಸವ ಆಚರಣೆ,
ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ನವರು ನೆರವೇರಿಸಲಿದ್ದು ವಾಲ್ಮೀಕಿ ಗುರುಪೀಠದ ಟ್ರಸ್ಟಿಗಳು, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರು,
ಜಿಲ್ಲೆಯ ಎಲ್ಲಾ ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷರುಗಳು ಮಹರ್ಷಿ ವಾಲ್ಮೀಕಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು, ಸರ್ಕಾರಿ ನಿವೃತ್ತ ನೌಕರ ಸಂಘದ ಅಧ್ಯಕ್ಷರು, ಮಹಿಳಾ ಸಂಘದ ಅಧ್ಯಕ್ಷರು, ಮಹರ್ಷಿ ವಾಲ್ಮೀಕಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು, ಸಮಾಜದ ಜನಪ್ರತಿನಿಧಿಗಳು ವಿವಿಧ ಸಹಕಾರಿ ಸಂಘಗಳ ನಿರ್ದೇಶಕರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಈ* *ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರುವರು *ಆರ್. ಹರೀಶ್*,
*ಜಿಲ್ಲಾಧ್ಯಕ್ಷರು*
*ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ* *(ರಿ)ಶಿವಮೊಗ್ಗ ಜಿಲ್ಲಾ ಘಟಕ*
5 days ago | [YT] | 2
View 0 replies
Shivamogga Media 24x7
ಮಧುಸೂದನ್: ವಿದ್ಯಾರ್ಥಿ ನಾಯಕನಿಂದ 'ಭಾರತ್ ಜೋಡೋ' ರಾಜ್ಯ ಸಂಯೋಜಕನವರೆಗಿನ ಪಯಣ
ಸಿ.ಜಿ.ಮಧುಸೂದನ್ ಅಂತಾ ಕೇಳಿದರೆ, ಶಿವಮೊಗ್ಗದಲ್ಲಿ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಬದಲಾಗಿ ಎನ್.ಎಸ್.ಯು.ಐ ಮಧು ಅಂತಾ ಕೇಳಿದರೆ, ಓಹ್ ಅವರಾ, ನಮ್ಮವರು ಅಂಥಾ ಹೇಳುವಷ್ಟು ಆಪ್ತರು.2002 ರಲ್ಲಿ ವಿದ್ಯಾರ್ಥಿ ಸಂಘಟನೆಯ ಹಾದಿ ತುಳಿದ ಇವರು, ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನಲ್ಲಿ ಪ್ರಮುಖ ಮುಂಚೂಣಿ ಕಾರ್ಯಕರ್ತ. SSLC ಹಂತದಲ್ಲಿಯೇ ಎನ್.ಎಸ್.ಯು.ಐ ಸೇರಿದ ಮಧು ಕಲವೇ ವರ್ಷಗಳಲ್ಲಿ ಸಂಘಟನೆಯನ್ನೆ ಮುನ್ನೆಡೆಸುವ ನಾಯಕರಾಗುತ್ತಾರೆ. ವಿಶೇಷ ಅಂದರೆ, ಆ ಹೊತ್ತಿಗಾಗಲೇ ಶಿವಮೊಗ್ಗದಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿದ್ದವು. ಹೋರಾಟದ ಕುದಿನೆಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದ ಅಂದಿನ ವಿದ್ಯಾರ್ಥಿ ಹೋರಾಟಗಳಲ್ಲಿ ಎನ್.ಎಸ್.ಯು.ಐ ಸಂಘಟನೆಯನ್ನ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಿ.ಜಿ.ಮಧುಸೂದನ್.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾಕ್ಕೆ ದೇವೇಂದ್ರಪ್ಪ ಅವರ ಪ್ರೇರಣೆಯಿಂದ ಸೇರಿಕೊಂಡ ಇವರು, ಇವತ್ತಿನ ಎನ್ಎಸ್ಯುಐ ಮಧು ಅಂತಲೇ ಫೇಮಸ್, 2002 ರಿಂದ 2026 ರವರೆಗೂ ಎನ್ಎಸ್ಯುಐನ ಪ್ರತಿ ಹೋರಾಟ, ಸಂಘಟನೆಯಲ್ಲಿಯು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿಯುತ್ತಲೇ ಇದ್ದಾರೆ ಸಿ.ಜಿ.ಮಧುಸೂದನ್. ಸಂಘಟನೆಯಲ್ಲಿನ ನಿರಂತರ ಒಡನಾಟ ಹಾಗೂ ಕ್ರಿಯಾಶೀಲತೆಯಿಂದಾಗಿ, 2010ರಲ್ಲಿ ಮಧುಸೂದನ್ , ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎನ್.ಎಸ್.ಯು.ಐ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.
ರಾಹುಲ್ ಗಾಂಧಿ ತಂದ ಚುನಾವಣೆ: 2009-10ರಲ್ಲಿ ರಾಹುಲ್ ಗಾಂಧಿಯವರು ಯುವ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ಗೆ ಚುನಾವಣೆ ತಂದರು, ಪ್ರತಿಯೊಬ್ಬ ಸಕ್ರಿಯ ಹೊರಾಟಗಾರ, ಸಂಘಟಕನಿಗೆ ಆಧ್ಯತೆ ನೀಡುವುದು ಅವರ ಉದ್ದೇಶವಾಗಿತ್ತು. ಹಾಗೆ ನಡೆದ ಚುನಾವಣೆಯಲ್ಲಿ, ಕುವೆಂಪು ವಿವಿ ವ್ಯಾಪ್ತಿಗೆ (ಶಿವಮೊಗ್ಗ-ಚಿಕ್ಕಮಗಳೂರು) ಸಿ.ಜಿ. ಮಧುಸೂದನ್ ಮೊದಲ ಚುನಾಯಿತ ಅಧ್ಯಕ್ಷರಾಗಿದ್ದರು.
ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅವರು, 2011-12ನೇ ಸಾಲಿನಲ್ಲಿ ಎನ್.ಎಸ್.ಯು.ಐನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು ಹಾಗೂ ಹಲವು ಜಿಲ್ಲೆಗಳ ಉಸ್ತುವಾರಿಯನ್ನು ನಿರ್ವಹಿಸಿದರು. ಈ ಅವಧಿಯಲ್ಲಿ ಅವರು ಹಲವಾರು ಹೊಸ ಯುವಕರಿಗೆ ಮಾರ್ಗದರ್ಶನ ನೀಡಿ, ಅವರಲ್ಲಿ ನಾಯಕತ್ವದ ಗುಣಗಳನ್ನು ತುಂಬಿ ಅಧ್ಯಕ್ಷರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಹಾಗೂ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರಗಳಿದ್ದ ಆ ಕಾಲಘಟ್ಟದಲ್ಲಿ, ಎಬಿವಿಪಿಗೆ ಅತ್ಯಂತ ಪ್ರಬಲ ಪೈಪೋಟಿ ನೀಡಿ ಎನ್.ಎಸ್.ಯು.ಐ ಅನ್ನು ಮಧುಸೂದನ್ ಅವರು ಬಲಿಷ್ಠವಾಗಿ ಕಟ್ಟಿದರು. ಇವರ ಸಂಘಟನಾ ಶಕ್ತಿಯಿಂದಾಗಿ ಇಡೀ ದಕ್ಷಿಣ ಭಾರತದಲ್ಲಿಯೇ ಶಿವಮೊಗ್ಗ ಜಿಲ್ಲೆ ಎನ್.ಎಸ್.ಯು.ಐ ನ ಅತಿ ಬಲಿಷ್ಠ ಜಿಲ್ಲೆಯಾಗಿ ಹೊರಹೊಮ್ಮಿತು. ಈ ಅತ್ಯುತ್ತಮ ಸಂಘಟನಾ ಸಾಧನೆಯನ್ನು ಗುರುತಿಸಿ, 2012-13ರಲ್ಲಿ ದೆಹಲಿಯಲ್ಲಿ ರಾಹುಲ್ ಗಾಂಧಿಯವರ ಕೈಯಾರೇ ಶಿವಮೊಗ್ಗ ಜಿಲ್ಲಾ ಘಟಕಕ್ಕೆ 'ಅತ್ಯುತ್ತಮ ಜಿಲ್ಲಾಧ್ಯಕ್ಷ (ಬೆಸ್ಟ್ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಆಫ್ ಇಂಡಿಯಾ)' ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಮಧುಸೂದನ್ರ ಆಪ್ತ ಚೇತನ್ ಅವರು ಸ್ವೀಕರಿಸಿದರೂ, ಆ ಭಾರಿ ಯಶಸ್ಸಿನ ಹಿಂದಿನ ರೂವಾರಿ ಸಿ.ಜಿ. ಮಧುಸೂದನ್ ಅವರಾಗಿದ್ದರು.
ಮಧುಸೂದನ್ ಅವರ ಮತ್ತೊಂದು ಬಹುದೊಡ್ಡ ಸಾಧನೆಯೆಂದರೆ ಯುವ ನಾಯಕತ್ವವನ್ನು ಹಂಚಿದ್ದು. ತಾವು ಮಾತ್ರ ಬೆಳೆಯದೆ, ತಮ್ಮ ಜೊತೆಗಿದ್ದ ಚೇತನ್, ಶ್ರೀಜಿತ್, ಬಾಲಾಜಿ, ವಿಜಿ ಹಾಗೂ ಅರ್ಷಿತ್ ಗೌಡ, ಚರಣ್ ಜೆ.ಶೆಟ್ಟಿ, ಅರಮಗಟ್ಟ ಪ್ರವೀಣ ಸೇರಿದಂತೆ ಸುಮಾರು ಸಾಕಷ್ಟು ಯುವಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ನಲ್ಲಿ ನಾಯಕರನ್ನಾಗಿ ಬೆಳೆಸಿದರು. ಇಂದಿಗೂ ಆ ಯುವಕರು ಸಂಘಟನೆಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಪರ ಹೋರಾಟಗಳು ಮತ್ತು ಯಶಸ್ಸು
ವಿದ್ಯಾರ್ಥಿ ನಾಯಕರಾಗಿ ಮಧುಸೂದನ್ ಅವರು ಶೈಕ್ಷಣಿಕ ವ್ಯವಸ್ಥೆಯ ಲೋಪಗಳ ವಿರುದ್ಧ ಅನೇಕ ಬೃಹತ್ ಹೋರಾಟಗಳನ್ನು ರೂಪಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿಗಳಲ್ಲಿನ ದೋಷ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಅವರು ಬೃಹತ್ ಪ್ರತಿಭಟನೆ ನಡೆಸಿದ್ದರು. ಕುವೆಂಪು ವಿವಿಯಲ್ಲಿ ಪರೀಕ್ಷಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಇದನ್ನು ವಿರೋಧಿಸಿ ಮಧುಸೂದನ್ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಹೋರಾಟ ನಡೆಸಿ, ಆ ಶುಲ್ಕವನ್ನು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ದೂರ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಶಾಲಾ-ಕಾಲೇಜುಗಳಲ್ಲಿನ ಡೊನೇಷನ್ ಹಾವಳಿಯನ್ನು ವಿರೋಧಿಸಿ ಬೀದಿಗಿಳಿದಿದ್ದರು. ಬಿ.ಸಿ.ಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ಮಾಡಿದ್ದರು. ಅತ್ಯಂತ ಗಮನಾರ್ಹ ಸಂಗತಿಯೆಂದರೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿದಾಗಲೆಲ್ಲ, ಅದರಲ್ಲಿ ಶೇ. 80 ರಿಂದ 90 ರಷ್ಟು ಸಮಸ್ಯೆಗಳಿಗೆ ಅವರು ಸ್ಪಷ್ಟವಾದ ಪರಿಹಾರ ಒದಗಿಸಿಕೊಟ್ಟಿದ್ದರು
ಯುವ ಕಾಂಗ್ರೆಸ್ ಪಯಣ ಹಾಗೂ 'ಭಾರತ್ ಜೋಡೋ' ಜವಾಬ್ದಾರಿ
ಎನ್.ಎಸ್.ಯು.ಐ ನಲ್ಲಿ ಯಶಸ್ವಿ ಹೆಜ್ಜೆಗಳನ್ನಿಟ್ಟ ನಂತರ, 2017ರಲ್ಲಿ ಮಧುಸೂದನ್ ಅವರು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಸುಮಾರು 5-6 ವರ್ಷಗಳ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು, ಅಂದಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿಕೊಂಡು ಬಂದರು.
ಅವರ ಈ ಸುದೀರ್ಘ ಸಂಘಟನಾ ಚಾತುರ್ಯವನ್ನು ಗುರುತಿಸಿದ ಪಕ್ಷವು ಇತ್ತೀಚೆಗೆ ಮಹತ್ವದ ಹುದ್ದೆ ನೀಡಿದೆ. 2026ರಲ್ಲಿ ಸಿಎಂ ಡಿಕೆ ಶಿವಕುಮಾರ್ ರವರು ಯುವಕರನ್ನ ಪ್ರೋತ್ಸಾಹಿಸುವ ಸಲುವಾಗಿ ಭಾರತ್ ಜೋಡೋ ಯೋಜಚನೆಯನ್ನ ಜಾರಿಗೆ ತಂದರು. ಈ ಯೋಜನೆಗೆ ಯುವ ಕಾಂಗ್ರೆಸ್ನಿಂದ ರಾಜ್ಯ ಸಂಯೋಜಕರನ್ನಾಗಿ ಮಧು ಅವರನ್ನು ನೇಮಿಸಿಲಾಗಿದೆ. ಪ್ರಸ್ತುತ ಅವರು ಒಟ್ಟು 11 ಜಿಲ್ಲೆಗಳ ಉಸ್ತುವಾರಿಯನ್ನು ಹೊತ್ತುಕೊಂಡು ಸಂಘಟನಾ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 2002 ರಿಂದ ಇಂದಿನವರೆಗೂ ಸತತವಾಗಿ ವಿದ್ಯಾರ್ಥಿ ಮತ್ತು ಯುವಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಮಧುಸೂದನ್ ಅವರನ್ನು, ಅವರ ಒಡನಾಡಿಗಳು ಹಾಗೂ ಜನರು ಪ್ರೀತಿಯಿಂದ ಇಂದಿಗೂ 'ಎನ್.ಎಸ್.ಯು.ಐ ಮಧು ಎಂದೇ ಗುರುತಿಸುತ್ತಾರೆ.
2 weeks ago | [YT] | 1
View 0 replies
Shivamogga Media 24x7
ಶಿವಮೊಗ್ಗದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ನಿರ್ಮಾಣಗೊಳ್ಳಲಿರುವ KSCA ಒಳಾಂಗಣ ಕ್ರೀಡಾಂಗಣದ ಶಂಕುಸ್ಥಾಪನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ KSCA ನವುಲೆ ಕ್ರೀಡಾಂಗಣದಲ್ಲಿ ನೆರವೇರಿತು.
*KSCA ಶಿವಮೊಗ್ಗ ವಲಯದ ಸಂಚಾಲಕರು, ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ.ಎಸ್. ಅರುಣ್* ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ KSCA ಅಧ್ಯಕ್ಷರಾದ ಶ್ರೀ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ, ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ನಿಖಿಲ್ ಬಿ., ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಿಷಿ ಆನಂದ್ ಅವರು ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಮೆನನ್, ಖಜಾಂಚಿಗಳಾದ ಶ್ರೀ ಬಿ.ಎನ್. ಮಧುಕರ, ಜಂಟಿ ಕಾರ್ಯದರ್ಶಿ ಶ್ರೀ ಬಿ.ಕೆ. ರವಿ, KSCA ಬೆಂಗಳೂರು ವಲಯ ಸಮಿತಿಯ ಸದಸ್ಯರಾದ ಶ್ರೀ ಅವಿನಾಶ್ ವೈದ್ಯ, ಅಧಿಕೃತ ವಕ್ತಾರರಾದ ಶ್ರೀ ವಿನಯ್ ಮೃತ್ಯುಂಜಯ, ಶ್ರೀ ಆರ್.ಪಿ. ನಾಗರಾಜ್, ಶ್ರೀ ಎ.ವಿ. ವಶಿಧರ್, KSCA ಶಿವಮೊಗ್ಗ ವಲಯದ ಅಧ್ಯಕ್ಷರಾದ ಶ್ರೀ ನಾಗೇಂದ್ರ ಕೆ. ಪಂಡಿತ್, ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
2 weeks ago | [YT] | 4
View 0 replies
Shivamogga Media 24x7
ಭದ್ರಾವತಿ ಪತ್ರಿಕಾ ವಿತರಕರ ಒಕ್ಕೂಟ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ ಭದ್ರಾವತಿ ತಾಲೂಕು ಪತ್ರಿಕಾ ವಿತರಕ ದಿನಾಚರಣೆ ಹಾಗೂ ಹಿರಿಯ ಪತ್ರಿಕಾ ವಿತರಕರಿಗೆ ಗೌರವಿಸಿ ಸನ್ಮಾನಿಸಲಾಯಿತು ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ ಭದ್ರಾವತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್. ಉಪಾಧ್ಯಕ್ಷರಾದ ಸೋಮಶೇಖರ್. ಖಜಾಂಚಿಯಾಗಿ ಮಧು. ಸಹ ಕಾರ್ಯದರ್ಶಿ ಶಿವಮೂರ್ತಿ. ಪದಾಧಿಕಾರಿಗಳಾದ ಸತ್ಯ ಮಂಜುನಾಥ್. ಕೃಷ್ಣಮೂರ್ತಿ. ಲೋಕೇಶ್. ದೇವೀಸ್. ಇನ್ನು ಮುಂತಾದವರು ಭಾಗವಹಿಸಿದ್ದರು.
2 weeks ago | [YT] | 2
View 0 replies
Shivamogga Media 24x7
ಅಬ್ಬಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಶಿವಮೊಗ್ಗ: - ತಾಲ್ಲೂಕಿನ ಅಬ್ಬಲಗೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು. ಗ್ರಾಮೀಣ ಭಾಗದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾವಲಂಬಿಗಳಾಗಲು ಹಾಗೂ ಸಹಕಾರ ಕ್ಷೇತ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಂತಹ ಪ್ರೋತ್ಸಾಹ ಅತ್ಯಗತ್ಯ ಎಂದು ಸಭೆಯಲ್ಲಿ ಹರ್ಷ ವ್ಯಕ್ತಪಡಿಸಲಾಯಿತು.
ಮಹಾಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಆರ್ಥಿಕ ತಃಖ್ತೆಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೆ.ಎಲ್. ಜಗದೀಶ್ವರ, ಉಪಾಧ್ಯಕ್ಷರಾದ ಅಶೋಕ ಕೆ.ಎಸ್. ಹಾಗೂ, ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
3 weeks ago | [YT] | 2
View 0 replies
Shivamogga Media 24x7
*ಅನಂತ್ ನಾಗ್ ಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಪ್ರದಾನ*
ಏಕ್ತಾ ನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಕನ್ನಡದ ಖ್ಯಾತ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ಗೌರವವಾದ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದರು. ಇದಕ್ಕು ಮುನ್ನ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಅನಂತ್ ನಾಗ್ ಅವರಿಗೆ ಸ್ಟ್ಯಾಂಡಿಂಗ್ ಒವೇಶನ್ ನೀಡಲಾಯಿತು.
ಇಂದು ಗುಜರಾತ್ನ ನರ್ಮದಾ ಜಿಲ್ಲೆಯ ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳು, ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಏಕ್ತಾ ನಗರದಲ್ಲಿರುವ 'ಸ್ಟ್ಯಾಚ್ಯೂ ಆಫ್ ಯೂನಿಟಿ'ಯಲ್ಲಿ ನಡೆಯುತ್ತಿರುವ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 2024ನೇ ಸಾಲಿನ ಸಿನಿಮಾ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ವಿವಿಧ ವಿಭಾಗಗಳಲ್ಲಿ ಒಟ್ಟು 92 ಮಂದಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
3 weeks ago | [YT] | 0
View 0 replies
Load more