Shivamogga Media 24x7

ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
YouTube Channel: @ShivamoggaMedia24x7

Welcome to Shivamogga Media 24x7 News, your trusted source for the latest updates, breaking news, and authentic stories. Bringing you truthful, live, and impactful journalism that resonates with the voice of the people. 🌍📰

Stay informed about current affairs, political insights, cultural stories, and much more with our engaging and factual reporting. We are dedicated to keeping you connected with the pulse of reality.

Subscribe to our channel and join us in exploring the world of news as it unfolds. Don’t forget to like, share, and comment to let your voice be heard!

📌 Slogan: ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...

Stay updated. Stay aware. Stay with Shivamogga Media 24x7 News. 🎥✅


Shivamogga Media 24x7

ಅಬ್ಬಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
​ಶಿವಮೊಗ್ಗ: - ತಾಲ್ಲೂಕಿನ ಅಬ್ಬಲಗೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
​ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು. ಗ್ರಾಮೀಣ ಭಾಗದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾವಲಂಬಿಗಳಾಗಲು ಹಾಗೂ ಸಹಕಾರ ಕ್ಷೇತ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಂತಹ ಪ್ರೋತ್ಸಾಹ ಅತ್ಯಗತ್ಯ ಎಂದು ಸಭೆಯಲ್ಲಿ ಹರ್ಷ ವ್ಯಕ್ತಪಡಿಸಲಾಯಿತು.
​ಮಹಾಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಆರ್ಥಿಕ ತಃಖ್ತೆಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕೆ.ಎಲ್. ಜಗದೀಶ್ವರ, ಉಪಾಧ್ಯಕ್ಷರಾದ ಅಶೋಕ ಕೆ.ಎಸ್. ಹಾಗೂ, ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

1 day ago | [YT] | 2

Shivamogga Media 24x7

*ಅನಂತ್ ನಾಗ್ ಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಪ್ರದಾನ*

ಏಕ್ತಾ ನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಕನ್ನಡದ ಖ್ಯಾತ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಲನಚಿತ್ರ ರಂಗದ ಅತ್ಯುನ್ನತ ಗೌರವವಾದ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದರು. ಇದಕ್ಕು ಮುನ್ನ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಅನಂತ್ ನಾಗ್ ಅವರಿಗೆ ಸ್ಟ್ಯಾಂಡಿಂಗ್ ಒವೇಶನ್ ನೀಡಲಾಯಿತು.
ಇಂದು ಗುಜರಾತ್‌ನ ನರ್ಮದಾ ಜಿಲ್ಲೆಯ ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳು, ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಏಕ್ತಾ ನಗರದಲ್ಲಿರುವ 'ಸ್ಟ್ಯಾಚ್ಯೂ ಆಫ್ ಯೂನಿಟಿ'ಯಲ್ಲಿ ನಡೆಯುತ್ತಿರುವ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 2024ನೇ ಸಾಲಿನ ಸಿನಿಮಾ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ವಿವಿಧ ವಿಭಾಗಗಳಲ್ಲಿ ಒಟ್ಟು 92 ಮಂದಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

2 days ago | [YT] | 0

Shivamogga Media 24x7

ಹಿಂದೂ–ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಕುರುವಳ್ಳಿ ಯುವಕ ಸಂಘದ ಗಣೇಶೋತ್ಸವ
ಮುಸ್ಲಿಂ ಕುಟುಂಬದ ಪ್ರಾಯೋಜಕತ್ವದಲ್ಲಿ ‘ಶಿವದೂತ ಗುಳಿಗ’ ವೈಭವ
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಗಣೇಶೋತ್ಸವ ಸಂಘಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಯುವಕ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ 13 ದಿನಗಳ ಗಣೇಶೋತ್ಸವದಲ್ಲಿ ನಿನ್ನೆ ನಡೆದ ‘ಶಿವದೂತ ಗುಳಿಗ’ ಕಾರ್ಯಕ್ರಮ ಹಿಂದೂ–ಮುಸ್ಲಿಂ ಸೌಹಾರ್ದತೆ ಹಾಗೂ ಸಹಬಾಳ್ವೆಯ ವಿಶೇಷ ಸಂದೇಶಕ್ಕೆ ಸಾಕ್ಷಿಯಾಯಿತು.
ಮಂಗಳೂರಿನ ಕಲಾ ಸಂಘಮದ ವಿಜಯ್ ಕೊಡ್ಯಾಲ್‌ಬೈಲ್ ಅವರ ನೇತೃತ್ವದಲ್ಲಿ ನಡೆದ ‘ಶಿವದೂತ ಗುಳಿಗ’ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಯ ಉದ್ಯಮಿಗಳು ಹಾಗೂ ಮುಸ್ಲಿಂ ಮುಖಂಡರಾದ ದಸ್ತಗಿರಿ ಮತ್ತು ಸಹೋದರರು ಪ್ರಾಯೋಜಕತ್ವ ನೀಡಿರುವುದು ವಿಶೇಷವಾಗಿತ್ತು.
ಕುರುವಳ್ಳಿ ಯುವಕ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಚ್. ಪಿ. ಅನಿಲ್, ಗೌರವಾಧ್ಯಕ್ಷ ಬಿ. ಎನ್. ಗುರುರಾಜ್, ಪ್ರಧಾನ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್, ಉಪಾಧ್ಯಕ್ಷರಾದ ಪ್ರಮೋದ್ ಪೂಜಾರಿ, ನಾಗೇಂದ್ರ ವೈ, ಸತೀಶ್ ಶೆಟ್ಟಿ ಹಾಗೂ ಮಹೇಶ್ ಶೆಟ್ಟಿ, ಖಜಾಂಚಿಗಳಾದ ನಾಗೇಂದ್ರ ಗೌಡ ಹಾಗೂ ವಿನಾಯ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ ದಸ್ತಗಿರಿ ಹಾಗೂ ಸಹೋದರರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಧಾರ್ಮಿಕ ಕಾರ್ಯಕ್ರಮಕ್ಕೆ ಮುಸ್ಲಿಂ ಕುಟುಂಬವೊಂದು ಪ್ರಾಯೋಜಕತ್ವ ನೀಡಿರುವುದು ಧಾರ್ಮಿಕ ಸಾಮರಸ್ಯ, ಸಹೋದರತ್ವ ಹಾಗೂ ‘ನಾವೆಲ್ಲರೂ ಒಂದೇ’ ಎಂಬ ಮಾನವೀಯ ಸಂದೇಶಕ್ಕೆ ಸಾಕ್ಷಿಯಾಯಿತು.
ಸಾಮಾಜಿಕ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿರುವ ಕುರುವಳ್ಳಿ ಯುವಕ ಸಂಘದ ಈ ಕಾರ್ಯಕ್ರಮವು ಹಿಂದೂ–ಮುಸ್ಲಿಂ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಮಾದರಿಯಾಯಿತು.
ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮವನ್ನು ವೀಕ್ಷಿಸಿದ್ದು, ಮಂಗಳೂರಿನ ‘ಶಿವದೂತ ಗುಳಿಗ’ ತಂಡದ ಕಲಾವಿದರು ಹಾಗೂ ಸಂಘಟಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ಧರ್ಮ ಬೇರೆ ಇರಬಹುದು, ಆದರೆ ಮಾನವೀಯತೆ ಒಂದೇ — ಹಬ್ಬಗಳು ಎಲ್ಲರನ್ನೂ ಒಗ್ಗೂಡಿಸಲಿ ಎಂಬ ಸಂದೇಶವನ್ನು ಕುರುವಳ್ಳಿ ಯುವಕ ಸಂಘದ ಸುವರ್ಣ ಮಹೋತ್ಸವದ ಈ ಕಾರ್ಯಕ್ರಮ ಸಾರಿತು.

2 days ago | [YT] | 2

Shivamogga Media 24x7

ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸರ್ವ ಸದಸ್ಯರ ಮಹಾಸಭೆ, ಹಿರಿಯ ನಾಗರಿಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


*ಹಿರಿಯ ನಾಗರಿಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಜ್ಯೋತಿ ಪ್ರಕಾಶ್*


ಶಿವಮೊಗ್ಗ: ಹಿರಿಯ ನಾಗರಿಕರು ಸಾಧಕರು ಹಾಗೂ ಸಮಾಜದ ಆಸ್ತಿ. ಅವರ ಮಾರ್ಗದರ್ಶನ, ಸಲಹೆ ಮತ್ತು ಸಹಕಾರವು ಕುಟುಂಬವನ್ನು ಸರಿದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗುತ್ತದೆ ಎಂದು ಮಾಜಿ ಸೋಡಾ ಅಧ್ಯಕ್ಷರು ಹಾಗೂ ವೀರಶೈವ ಬಸವೇಶ್ವರ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿ ಪ್ರಕಾಶ್ ಹೇಳಿದರು.

ನಗರದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಮಹಾಸಭೆ, ಹಿರಿಯ ನಾಗರಿಕರ ಸನ್ಮಾನ, ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಸಂಘಟನೆ ಅತ್ಯಂತ ಮುಖ್ಯವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷರಾದ ಬಿ.ಕೆ. ಶಿವಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಗಾಣಿಗ ಸಮಾಜವು ಅಲ್ಪಸಂಖ್ಯಾತವಾಗಿದ್ದರೂ ಒಗ್ಗಟ್ಟಿನಿಂದ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಂಘದ ಹಿರಿಯ ಉಪಾಧ್ಯಕ್ಷರಾದ ಬಿ.ಕೆ. ಜಗನ್ನಾಥ್ ಮಾತನಾಡಿ, ಸಮಾಜದ ಸದಸ್ಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಜಿ. ವಿಜಯ್ ಕುಮಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಘ ನಡೆದು ಬಂದ ದಾರಿ ಹಾಗೂ ಮುಂದಿನ ದಿನಗಳಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವಿವರಿಸಿದರು. ಈ ಕಾರ್ಯಕ್ಕೆ ಎಲ್ಲರೂ ಪ್ರಾಮಾಣಿಕ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಾಣಿ ಕೋಟಿ ಪ್ರಾರ್ಥಿಸಿದರು. ನಿರ್ದೇಶಕರಾದ ಎಂ.ಆರ್. ಕಿರಣ್ ಕುಮಾರ್ ಸ್ವಾಗತಿಸಿದರು. ಈ ಹಿಂದೆ ನಿಧನರಾದ ಸಮಾಜ ಬಾಂಧವರ ಹೆಸರುಗಳನ್ನು ಪರಮೇಶ್ವರಪ್ಪ ಅವರು ವಾಚಿಸಿದರು. ಬಳಿಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.

ಮಂಜಪ್ಪ ಸಜ್ಜನಶೆಟ್ಟರ್ ಹಿಂದಿನ ವರ್ಷದ ಸಭೆಯ ನಡಾವಳಿಯನ್ನು ಓದಿದರು. ಪ್ರಧಾನ ಕಾರ್ಯದರ್ಶಿ ವಾಗೀಶ್ ಕೋಟಿ ವಾರ್ಷಿಕ ವರದಿ ಹಾಗೂ ಮುಂದಿನ ವರ್ಷದ ಕಾರ್ಯಯೋಜನೆಯನ್ನು ಮಂಡಿಸಿದರು. ಖಜಾಂಚಿ ರವಿ ಅಜ್ಮನಿ ಲೆಕ್ಕಪತ್ರವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ. ಶಿವಕುಮಾರ್ ಹಾಗೂ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಶಶಾಂಕ್ ಸಜ್ಜನ್ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ದಯಾನಂದ್ ವಂದನಾರ್ಪಣೆ ಸಲ್ಲಿಸಿದರು. ನಿರ್ದೇಶಕರಾದ ಸುಮನ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾದ ಸುರೇಶ್ ಬಾಬು, ಮಾಸೂರು ಘಟಕದ ಅಧ್ಯಕ್ಷರಾದ ಆರ್.ಸಿ. ರೇಣುಕಪ್ಪ, ಭದ್ರಾವತಿ ಘಟಕದ ಅಧ್ಯಕ್ಷರಾದ ಟಿ.ಎಸ್. ಆನಂದ್ ಕುಮಾರ್, ಸಂಘದ ಉಪಾಧ್ಯಕ್ಷರಾದ ಎನ್.ಜಿ. ಲೋಕೇಶ್ವರಪ್ಪ, ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

4 days ago | [YT] | 3

Shivamogga Media 24x7

*ಕೇರಳ, ಮಹಾರಾಷ್ಟ್ರ, ಗೋವಾ ಮುಂದಿದ್ದರೆ ಕರ್ನಾಟಕ ಯಾಕೆ ಹಿಂದೆ ? – ವಿ.ಪ ಶಾಸಕ ಡಾ. ಧನಂಜಯ ಸರ್ಜಿ*

ಬೆಂಗಳೂರು, ಸೆ. 21: ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ಬದುಕು ಮತ್ತು ಭಾವನೆಗಳೊಂದಿಗೆ ರಾಜಕೀಯ ಮಾಡದೆ, ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ಹಾಗೂ ಮಲೆನಾಡಿನ ರೈತರ ಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಒತ್ತಾಯಿಸಿದರು.

ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಕಸ್ತೂರಿರಂಗನ್ ವರದಿಯಡಿ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ ಇದರಲ್ಲಿ ಸುಮಾರು 16,114 ಚದರ ಕಿಲೋಮೀಟರ್ ಪ್ರದೇಶ ಈಗಾಗಲೇ ವಿವಿಧ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ವರ್ಗಗಳಡಿ ರಕ್ಷಿತವಾಗಿದೆ. ಹೀಗಾಗಿ ಉಳಿಯುವ ಸುಮಾರು 4,500 ಚದರ ಕಿಲೋಮೀಟರ್ ಪ್ರದೇಶದಲ್ಲಿ ಯಾವುದು ನೈಸರ್ಗಿಕ ಅರಣ್ಯ, ಯಾವುದು ಕೃಷಿಭೂಮಿ, ತೋಟ ಮತ್ತು ಜನವಸತಿ ಎಂಬುದನ್ನು ಸರ್ವೆ ನಂಬರ್ ಮಟ್ಟದಲ್ಲಿ ಭೌತಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಪರಿಸರದ ಹೆಸರಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತೊಂದು ರೀತಿಯ ಪರಿಸರ ಹಾನಿಗೆ ಕಾರಣವಾಗಬಾರದು ಎಂದ ಅವರು, ಶಿವಮೊಗ್ಗದಲ್ಲಿ ಸ್ಥಳೀಯ ಕಲ್ಲು ಲಭ್ಯತೆಯ ಸಮಸ್ಯೆಯಿಂದ ದಿನಕ್ಕೆ ಸುಮಾರು 100 ಲಾರಿಗಳಲ್ಲಿ ದೂರದ ಜಿಲ್ಲೆಗಳಿಂದ ಕಲ್ಲು ಸಾಗಿಸಲಾಗುತ್ತಿದೆ. 200–250 ಕಿ.ಮೀ. ಸಂಚಾರದಿಂದ ವರ್ಷಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಬಳಕೆಯಾಗುತ್ತದೆ. ಪರಿಸರ ಸಂರಕ್ಷಣೆಯ ನಿರ್ಧಾರವೇ ಇಂಧನ ಬಳಕೆ ಮತ್ತು ಮಾಲಿನ್ಯ ಹೆಚ್ಚಿಸುವಂತಾಗಬಾರದು ಎಂದು ಉದಾಹರಿಸಿದರು.

ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರನ್ನು ಎತ್ತುವ ವ್ಯವಸ್ಥೆಯ ಅನುಷ್ಠಾನ ವಿಳಂಬವಾಗಿರುವುದನ್ನೂ ಡಾ. ಸರ್ಜಿ ಪ್ರಸ್ತಾಪಿಸಿದರು. ಯೋಜನೆಯ ಮೊದಲ ಹಂತದಲ್ಲಿ ತುಂಗಾದಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತುವ ವ್ಯವಸ್ಥೆ ಇದೆ. ಇದನ್ನು ಸಕಾಲದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಭದ್ರಾ ಜಲಾಶಯಕ್ಕೆ ಹೆಚ್ಚುವರಿ ನೀರು ಲಭ್ಯವಾಗಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಭಾಗಗಳ ನೀರಿನ ಸಮಸ್ಯೆಗೆ ನೆರವಾಗಬಹುದಿತ್ತು ಎಂದು ಹೇಳಿದರು. ತುಂಗಾದಲ್ಲಿ ಲಭ್ಯವಾಗುವ ಹೆಚ್ಚುವರಿ ನೀರು ಕೆಳಹರಿವಿಗೆ ಹರಿದುಹೋಗುತ್ತಿರುವ ಸಂದರ್ಭದಲ್ಲಿ, ಅದನ್ನು ವೈಜ್ಞಾನಿಕವಾಗಿ ಭದ್ರಾಕ್ಕೆ ಎತ್ತುವ ವ್ಯವಸ್ಥೆ ಶೀಘ್ರ ಪೂರ್ಣಗೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಈ ಯೋಜನೆಗೆ ಸಂಬಂಧಿಸಿದ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಅರಣ್ಯ ಭೂಮಿಯ ಅನುಮತಿ ಪ್ರಕ್ರಿಯೆ 2019ರಿಂದ ಮುಂದುವರಿದು, 2026ರ ಜುಲೈ 10ರಂದು ಮೊದಲ ಹಂತದ ಅನುಮೋದನೆ ದೊರೆತಿರುವುದು ಕೂಡ ವಿಳಂಬದ ಗಂಭೀರತೆಯನ್ನು ತೋರಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಆರು ರಾಜ್ಯಗಳ ಪ್ರಸ್ತುತ ಸ್ಥಿತಿಯನ್ನೂ ಕರ್ನಾಟಕ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಡಾ. ಸರ್ಜಿ ಹೇಳಿದರು. ಕೇರಳವು ತನ್ನ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶವನ್ನು 13,108 ಚ.ಕಿ.ಮೀ.ಯಿಂದ 9,993.7 ಚ.ಕಿ.ಮೀ.ಗೆ ಪರಿಷ್ಕರಿಸಿ, ನಂತರ ಇನ್ನಷ್ಟು ಪರಿಷ್ಕರಣೆಯ ಪ್ರಸ್ತಾವನೆ ನೀಡಿದೆ. 2026ರ ಜುಲೈ ವೇಳೆಗೆ ಗೋವಾ ಮತ್ತು ಗುಜರಾತ್ ಪ್ರದೇಶ ನಿಗದಿಯ ವಿಷಯದಲ್ಲಿ ಬಹುತೇಕ ಒಪ್ಪಂದ ಹಂತ ತಲುಪಿದ್ದು, ಮಹಾರಾಷ್ಟ್ರದ ಪರಿಷ್ಕೃತ ಪ್ರಸ್ತಾವನೆ ಕೇಂದ್ರದ ತಜ್ಞ ಸಮಿತಿಯ ಪರಿಶೀಲನೆಯಲ್ಲಿದೆ. ಕರ್ನಾಟಕದ ವಿಷಯದಲ್ಲಿ ಮಾತ್ರ ಕೇಂದ್ರ–ರಾಜ್ಯಗಳ ಅಂತಿಮ ಒಮ್ಮತ ಇನ್ನೂ ಮೂಡಿಲ್ಲ. ಈ ಹಿನ್ನಲೆಯಲ್ಲಿ “ಇತರ ರಾಜ್ಯಗಳು ತಮ್ಮ ಆಕ್ಷೇಪಣೆ, ಪರ್ಯಾಯ ನಕ್ಷೆ ಮತ್ತು ಭೌತಿಕ ಪರಿಶೀಲನೆಯೊಂದಿಗೆ ಪ್ರಕ್ರಿಯೆಯನ್ನು ಮುಂದುವರಿಸಿದರೆ, ಕರ್ನಾಟಕದಲ್ಲಿ ಅಂತಿಮ ವೈಜ್ಞಾನಿಕ ಪ್ರಸ್ತಾವನೆ ಇನ್ನೂ ಏಕೆ ನಿರ್ಧಾರವಾಗಿಲ್ಲ?” ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು

ಕೇಂದ್ರ ಸರ್ಕಾರವು ಮಾಜಿ ಅರಣ್ಯ ಮಹಾನಿರ್ದೇಶಕ ಸಂಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಪಶ್ಚಿಮಘಟ್ಟದ ಆರು ರಾಜ್ಯಗಳ ಆಕ್ಷೇಪಣೆ ಮತ್ತು ಪರ್ಯಾಯ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವೂ ಕೇರಳದ ಮಾದರಿಯಲ್ಲಿ ನೆಲಮಟ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಿ ಸ್ಪಷ್ಟವಾದ ಅಂತಿಮ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಡಾ. ಸರ್ಜಿ ಒತ್ತಾಯಿಸಿದರು.

“ನಾವು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಪಶ್ಚಿಮಘಟ್ಟ ಉಳಿಯಬೇಕು, ಕಾಡು ಬೆಳೆಯಬೇಕು,
ನದಿಗಳು ಉಳಿಯಬೇಕು, ವನ್ಯಜೀವಿಗಳು ರಕ್ಷಿಸಲ್ಪಡಬೇಕು. ಆದರೆ ಕಾಡನ್ನು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ರೈತರ ಬದುಕನ್ನೂ ಉಳಿಸಬೇಕು. ಜನರ ಬದುಕು ಮತ್ತು ಭಾವನೆಗಳ ಜೊತೆ ರಾಜಕೀಯ ಮಾಡದೆ, ಕಾಡನ್ನೂ ಉಳಿಸೋಣ–ರೈತರನ್ನೂ ಉಳಿಸೋಣ” ಎಂದು ಡಾ. ಧನಂಜಯ ಸರ್ಜಿ ಹೇಳಿದರು.

ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

4 days ago | [YT] | 0

Shivamogga Media 24x7

*ಯುವ ಪೀಳಿಗೆಯಲ್ಲಿ ಸೇವಾ ಮನೋಭಾವ ಮೂಡಿಸುವುದು ಭಾರತ ಸೇವಾದಳ* ಚಂದ್ರಪ್ಪ ಎಸ್. ಗುಂಡಪಲ್ಲಿ
ಶಿವಮೊಗ್ಗ: ಭಾರತ ಸೇವಾದಳದ ಉದ್ದೇಶ ಇಂದಿನ ಯುವ ಪೀಳಿಗೆಯಲ್ಲಿ ಶಾಲಾ-ಕಾಲೇಜು ಹಂತದಲ್ಲಿ ದೇಶಾಭಿಮಾನ ಮೂಡಿಸಿ, ಸೇವಾ ಮನೋಭಾವದಿಂದ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂದು ಚಂದ್ರಪ್ಪ ಎಸ್ ಗುಂಡಪ್ಪಲ್ಲಿ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ, ಶಿವಮೊಗ್ಗ. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶಿವಮೊಗ್ಗ ಇವರ ಸಹಯೋಗದಲ್ಲಿ ಉಪನ್ಯಾಸಕರ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಉಪನ್ಯಾಸಕರಿಗೆ ಭಾರತ ಸೇವಾದಳ ಮಾಹಿತಿ ಶಿಬಿರ ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ ಉದ್ಘಾಟನಾ ನುಡಿಗಳನ್ನಾಡಿದರು.
ಇಂದಿನ ವಿದ್ಯಾರ್ಥಿ ಯುವ ಜನತೆ ಮೊಬೈಲಿಗೆ ಅಡಿಕ್ಟ್ ಆಗಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಗುರು- ಹಿರಿಯರು ಹೇಳುವ ವಿಚಾರಗಳನ್ನು ಆಲಿಸುವ ಕೌಶಲ್ಯವನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯ ಮತ್ತು ದೇಶವನ್ನು ಕಟ್ಟುವ ಕೆಲಸವಾಗಬೇಕೆಂದರು.
ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಜಿ.ಎಫ್. ಕುಟ್ರಿ ಮಾತನಾಡಿ ಇಲಾಖೆಯು ನಿಗದಿಪಡಿಸಿದ ಹೆಚ್ಚಿನ ಕೆಲಸಗಳೊಂದಿಗೆ ಭಾರತ ಸೇವಾದಳದ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದರು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮಾತನಾಡಿ ಭಾರತ ಸೇವಾದಳದ ಸೇವೆ,ಸಾಮಾಜಿಕ ಕಳಕಳಿ, ರಾಷ್ಟ್ರೀಯತೆ, ದೇಶಪ್ರೇಮ ಆದರ್ಶ ಮತ್ತು ಮೌಲ್ಯಗಳು ವಿದ್ಯಾರ್ಥಿಗಳ ಮೇಲೆ ಉತ್ತಮ ಸೇವಾ ಮನೋಭಾವನೆಯನ್ನು ಉಂಟುಮಾಡುತ್ತದೆ. ಅವರಲ್ಲಿ ವೈಯಕ್ತಿಕ ಶಿಸ್ತು ಮೂಡಿಸಿ ಸಮಾಜ ಸೇವೆ ಮಾಡಲು ಪ್ರೇರಣೆಯಾಗುತ್ತದೆ. ಸೇವೆ ಎಂಬುದು ಈ ಹೊತ್ತಿನ ತುರ್ತುಲ್ಲ. ಮುಂದಿನ ಜನಾಂಗದ ಭವಿಷ್ಯಕ್ಕೆ ಬೇಕೆಂದರು.
ಭಾರತ ಸೇವಾದಳದ ತಾಲೂಕು ಅಧ್ಯಕ್ಷ ರಮೇಶ್ ಬಾಬು ಪ್ರಸ್ತಾವಿಕವಾಗಿ ಸಮಯಪಾಲನೆ, ಪ್ರಜ್ಞೆ, ವ್ಯಕ್ತಿತ್ವ ನಿರ್ಮಾಣದಲ್ಲಿ ಭಾರತ ಸೇವಾದಳದ ಪಾತ್ರ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಾಸೇದ ಜಿಲ್ಲಾಧ್ಯಕ್ಷ ವೈ‌.ಎಸ್‌. ನಾಗರಾಜ್ ಭಾರತ ಸೇವಾದಳವು ಪಕ್ಷಾತೀತವಾಗಿ ಮಕ್ಕಳಲ್ಲಿ ಶಿಸ್ತು, ಭಾವೈಕ್ಯತೆ, ರಾಷ್ಟ್ರೀಯತೆ ಮೂಡಿಸಿ ವಿದ್ಯಾರ್ಥಿಗಳಲ್ಲಿ ಉತ್ತಮವಾದ ಸಂಸ್ಕಾರ ಮತ್ತು ಮಾರ್ಗದರ್ಶನವನ್ನು ಬೆಳೆಸಿಕೊಳ್ಳಲು ನಾವು ನೀವು ಸೇರಿ ಪೂರಕವಾಗಿ ಕೆಲಸ ಮಾಡಬೇಕೆಂಬ ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಸಂಘಟಕ ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಭಾಸೇದ ಮುತ್ತುನಾಯ್ಕ್, ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

1 week ago | [YT] | 2

Shivamogga Media 24x7

*11ನೇ ಆಯುರ್ವೇದ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ*


*ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಹಾಗೂ ಕ್ರಮಬದ್ಧ ಜೀವನಶೈಲಿ ಅಗತ್ಯ: ಡಾ. ಭಾಸ್ಕರ್*


ಶಿವಮೊಗ್ಗ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಸದಾ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿದ್ದು, ಕ್ರಮಬದ್ಧವಾಗಿರಬೇಕು. ಇದರ ಜೊತೆಗೆ ಉತ್ತಮ ಜೀವನಶೈಲಿ ಹಾಗೂ ಸಕಾರಾತ್ಮಕ ಭಾವನೆಗಳು ಅಷ್ಟೇ ಮುಖ್ಯ ಎಂದು ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯ ಡಾ. ಭಾಸ್ಕರ್ ತಿಳಿಸಿದರು.

ನಗರದ ನವುಲೆ ಬ್ರಹ್ಮಕುಮಾರಿ ರಾಜಯೋಗ ಮೆಡಿಟೇಶನ್ ಸೆಂಟರ್‌ನಲ್ಲಿ 11ನೇ ಆಯುರ್ವೇದ ದಿನಾಚರಣೆ ಅಂಗವಾಗಿ ಬಾಪೂಜಿ ಆಯುರ್ವೇದಿಕ್ ಕಾಲೇಜು ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಸಾರ್ವಜನಿಕರು, ಬಡಾವಣೆ ನಿವಾಸಿಗಳು ಹಾಗೂ ಈಶ್ವರೀಯ ಪರಿವಾರದವರಿಗಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಆಶಯದೊಂದಿಗೆ ಆರೋಗ್ಯ ಕಾಪಾಡಿಕೊಳ್ಳುವ ವಿಧಾನ, ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಡಾ. ಭಾಸ್ಕರ್ ಸವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸುಜಿತ್ ಕುಮಾರ್ ಶೆಟ್ಟಿ, ಅಧಿಕ ರಕ್ತದೊತ್ತಡದಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕಾಯಿಲೆಗಳನ್ನು ನಿಯಂತ್ರಿಸುವ ವಿಧಾನಗಳ ಕುರಿತು ಅರಿವು ಮೂಡಿಸಿದರು.

40 ವರ್ಷಗಳ ನಂತರ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಉಪ್ಪು, ಸಕ್ಕರೆ, ಮೈದಾ, ಕರಿದ ಪದಾರ್ಥಗಳು, ಬೇಕರಿ ಉತ್ಪನ್ನಗಳು ಹಾಗೂ ಜಂಕ್ ಫುಡ್‌ಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಪ್ರತಿನಿತ್ಯ ಯೋಗ, ಪ್ರಾಣಾಯಾಮ ಹಾಗೂ ಧ್ಯಾನವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ಆಟ, ಸಂಗೀತ, ಕ್ರೀಡೆ, ಉತ್ತಮ ಹಾಡುಗಳನ್ನು ಆಲಿಸುವುದು ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಬ್ರಹ್ಮಕುಮಾರಿ ಕೇಂದ್ರಗಳಂತಹ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ರಾಜಯೋಗಿನಿ ಬಿ.ಕೆ. ಸ್ವಾತಿ ಅಕ್ಕನವರು ಮಾತನಾಡಿ, ಬಾಪೂಜಿ ಆಯುರ್ವೇದಿಕ್ ಕಾಲೇಜಿನ ವೈದ್ಯರು ಆಯುರ್ವೇದ ದಿನಾಚರಣೆ ಅಂಗವಾಗಿ ಆಗಮಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ, ಉತ್ತಮ ಆರೋಗ್ಯ ಮಾಹಿತಿಯನ್ನು ನೀಡಿದ್ದಾರೆ. ಇದೇ ರೀತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.

ಧ್ಯಾನವು ಮಾನಸಿಕ ನೆಮ್ಮದಿಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಜನರು ಆರೋಗ್ಯದಿಂದ ಹಾಗೂ ಸಂತೋಷದಿಂದ ಬದುಕಲು ಬ್ರಹ್ಮಕುಮಾರಿ ಸಂಸ್ಥೆಗಳು ವಿಶ್ವದಾದ್ಯಂತ ನಿರಂತರ ಸೇವೆ ಸಲ್ಲಿಸುತ್ತಿವೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಭೂಮಿಕಾ, ಡಾ. ಪಲ್ಲವಿ, ಕಾವ್ಯ ಅಕ್ಕನವರು, ಈಶ್ವರೀಯ ಪರಿವಾರದವರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

1 week ago | [YT] | 0

Shivamogga Media 24x7

*ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಡಿ.ಎಸ್. ಅರುಣ್*


ಶಿವಮೊಗ್ಗ : ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಬೆಳೆಸಿ, ಉಳಿಸುವುದರ ಜೊತೆಗೆ ಪರಸ್ಪರ ಬಾಂಧವ್ಯವನ್ನು ವೃದ್ಧಿಸುತ್ತವೆ. ಅಲ್ಲದೆ, ಜೀವನದಲ್ಲಿ ಹೊಸ ಉತ್ಸಾಹ ಮತ್ತು ಸಂತಸವನ್ನು ಮೂಡಿಸುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು.

ಅವರು ತಮ್ಮ ನಿವಾಸದಲ್ಲಿ ಸಂಪ್ರದಾಯಬದ್ಧವಾಗಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಾತನಾಡಿದ ಅವರು, ಗೌರಿ-ಗಣೇಶ ಹಬ್ಬಗಳು ಒಟ್ಟಿಗೆ ಬಂದಿರುವುದು ಎಲ್ಲರಿಗೂ ಸಂತಸ ತಂದಿದೆ. ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷವಾದ ಗಣೇಶ ಹಬ್ಬವನ್ನು ಇಂದು ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಇತರರ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಬ್ಬಗಳ ಆಚರಣೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಭಾ ಅರುಣ್ ಮಾತನಾಡಿ, ಪ್ರತಿ ವರ್ಷ ನೈಸರ್ಗಿಕವಾಗಿ ತಯಾರಿಸಲಾದ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದೇವೆ. ಇದೇ ರೀತಿ ಎಲ್ಲರೂ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಬೆಗಾಲು ತಂಡದ ಸದಸ್ಯರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಖಜಾಂಚಿ ಆರ್. ಮನೋಹರ್, ಡಿ.ಎಸ್. ಅರುಣ್ ಅವರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

1 week ago | [YT] | 6

Shivamogga Media 24x7

ಬೌದ್ಧಿಕ ಸಾಮರ್ಥ್ಯ ವೃದ್ಧಿಸುವ ರಸಪ್ರಶ್ನೆ ಸ್ಪರ್ಧೆ*

ಶಿವಮೊಗ್ಗ: ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಸರ್ ಎಂ.ವಿಶ್ವೇಶ್ವರಯ್ಯ ದಿನಾಚರಣೇ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ರಸಪ್ರಶ್ನೆ ಹಾಗೂ ಭಾಷಣ ಕಲೆ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸಪ್ರಶ್ನೆ ಹಾಗೂ ಭಾಷಣದ ಕಲೆ ವಿದ್ಯಾರ್ಥಿಗಳ ಭೌತಿಕ ಸಾಮರ್ಥ್ಯ ಹೆಚ್ಚಿಸುತ್ತವೆ. ವಿದ್ಯಾಭ್ಯಾಸದ ಜೊತೆಗೆ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನದ ಜೊತೆಗೆ ಮಸ್ತಕದ ಜ್ಞಾನವೂ ಬೇಕು. ಈ ರೀತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಅಪಾರವಾದ ಜ್ಞಾನ ವೃದ್ಧಿಯಾಗುತ್ತದೆ. ಮುಂಬರುವ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದ 40 ಪ್ರೌಢಶಾಲೆಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಅಂತಿಮವಾಗಿ ಎಂಟು ಜನ ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕ ಗಣೇಶ್ ಎಂ.ಅಂಗಡಿ, ಡಿವಿಎಸ್ ಪ್ರಾಧ್ಯಾಪಕ ರಾಜೇಶ್, ಸರ್ ಎಂ ವಿ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಮಲಾಕ್ಷರಪ್ಪ, ಕಚೇರಿ ಸಿಬ್ಬಂದಿ ಚನ್ನವೀರಪ್ಪ, ಎಲ್ಲ ಪ್ರೌಢಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

1 week ago | [YT] | 1

Shivamogga Media 24x7

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹೆಚ್. ಸಿ.ಯೋಗೀಶ್ ರವರಿಗೆ ಹಾಗೂ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಮಾಡಿದ ನಿಕಟ ಪೂರ್ವ ಅಧ್ಯಕ್ಷ ರಾದ ಆರ್ ಪ್ರಸನ್ನ ಕುಮಾರ್ ರವರಿಗೆ ಇಂದು ಕಾಂಗ್ರೆಸ್ ರಾಜ್ಯ ಮುಖಂಡರಾದ ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಆದ ಎಂ.ಶ್ರೀಕಾಂತ್ ರವರು ಅಭಿನಂದನೆ ಸಲ್ಲಿಸಿದರು*

*ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಕುಮಾರ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೆ.ರಂಗನಾಥ್, ಮಾಜಿ ಕಾರ್ಪೊರೇಟರ್ ವಿಶ್ವನಾಥ್ ಕಾಶಿ, ಯುವ ಕಾಂಗ್ರೆಸ್ ಮುಖಂಡರು ವಿನಯ್ ತಾಂದಲೆ, ಬಾಲ್ ಮಂಚ್ ಜಿಲ್ಲಾ ಅಧ್ಯಕ್ಷರಾದ ಪುರಲೆ ಮಂಜು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಜೋತಿ ಹರಳಪ್ಪ, ಬಾಸ್ಕರ್, ಸಮೀರ್, ಮಂಜುನಾಥ್ ನವುಲೆ, ಕುಮಾರ್ ಪ್ಲವರ್, ಶಿವಕುಮಾರ್, ಗ್ಯಾರಂಟಿ ಯೋಜನೆ ಸದ್ಯಸ ಬಸವರಾಜ್, ಅಲೆಮಾರಿ ನಿಗಮದ ಸದ್ಯಸ ಸಂದೀಪ್, ಭಾರತ್, ಶಮಂತ್, ಲೋಕೇಶ್, ವಿಜಯ್ ಹಾಗೂ ಇನ್ನು ಹಲವಾರು ಮುಖಂಡರು ಇದ್ದರು*

1 week ago | [YT] | 2