SH-RA-MI-KA

*ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ( ರಿ ) ಅಳದಂಗಡಿ*

ಸಂಘಟನೆಯ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಸಂಘಟನೆಯ *ಗೌರವ ಅಧ್ಯಕ್ಷರರಾದ ಶಿವಪ್ರಸಾದ್ ಅಜಿಲರ* ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆ ನಡೆಯಿತು
ನೂತನ ಅಧ್ಯಕ್ಷರಾಗಿ : *ಸುರೇಂದ್ರ ಆಚಾರ್ಯ*
ಕಾರ್ಯದರ್ಶಿಯಾಗಿ : *ಸುಕೇಶ್ ಮಿತ್ತಕೊಡಿ*
ಉಪಾಧ್ಯಕ್ಷರಾಗಿ : *ಪೂರ್ಣೇಶ್ ಕಾಪಿನಡ್ಕ*
ಜೊತೆ ಕಾರ್ಯದರ್ಶಿಯಾಗಿ: *ಉಮೇಶ್ ಶೆಟ್ಟಿ*
ಸಂಚಾಲಕರಾಗಿ : *ಸಂತೋಷ್ ಕಟ್ಟೆ*
ಸಹ ಸಂಚಾಲಕರಾಗಿ : *ಸುರೇಂದ್ರ ಕೋಟ್ಯಾನ್*
ಸಾಮಾಜಿಕ ಜಾಲತಾನದ ಸಂಚಾಲಕರಾಗಿ : *ಲೋಕೇಶ್ ಕುತ್ಲೂರು*
ಮತ್ತು 15 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು

ನೂತನ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು 🌹🌹🌹

3 months ago | [YT] | 5

SH-RA-MI-KA

*ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ (ರಿ ) ಅಳದಂಗಡಿ*

*ನಮ್ಮಸಂಘಟನೆಯು ನಿಮ್ಮೆಲ್ಲ ಸಹಕಾರದಿಂದ ಹಲವಾರು ಸಮಾಜಮುಖಿ ಕೆಲಸಕಾರ್ಯವನ್ನು ಮಾಡುತಿದ್ದು*
*9 ವರ್ಷಗಳನ್ನು* *ಯಶಸ್ವಿಯಾಗಿ ಪೂರೈಸುತ್ತಿದ್ದು ಸಂಘಟನೆಯ ಸಮಾಜಮುಖಿ ಕೆಲಸಕಾರ್ಯ ಗಳಿಗೆ ಸಹಕರಿಸುತ್ತಿರುವ ನಿಮ್ಮೆಲ್ಲರಿಗೂ ಅಭಿನಂದನೆಗಳು*

*ಹಲವಾರು ಸಮಾಜಮುಖಿ ಕೆಲಸಕಾರ್ಯವನ್ನು ಮಾಡಲು ಹಲವರು ಸಹಕಾರವನ್ನು ನೀಡುತ್ತಿದ್ದು ಇನ್ನಷ್ಟು ನಮ್ಮಿಂದ ಸಹಕಾರವನ್ನು ಮಾಡುತ್ತ.ಇನ್ನಷ್ಟು ಸಂಘಟನೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುವ.....*
🙏🙏🙏🙏🙏🙏🙏🙏🙏

3 months ago | [YT] | 3

SH-RA-MI-KA

*🙏ಸಹಾಯಕ್ಕಾಗಿ ನಿಮ್ಮ ಮುಂದೆ🙏*

*ಅಧಿಕಾರವಿದ್ದು ಮಾಡುವ ಸಹಾಯ ಕರ್ತವ್ಯ.*
*ಅಧಿಕಾರವಿಲ್ಲದೆ ಮಾಡುವ ಸಹಾಯ ಸೇವೆ..*
*ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೀವನ ಸುಧಾರಣೆಯ ಧ್ಯೇಯದೊಂದಿಗೆ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಸಮಾಜದೊಂದಿಗೆ ಬೆರೆತಿರುವ ನಾವು ನೀವು ಕನಿಷ್ಠ ಧನ ಸಹಾಯ ನೀಡಿದರೆ ಇವರ ಮುಖದಲ್ಲಿ ಹಾಗೂ ಕುಟುಂಬದವರಲ್ಲಿ ನಗು ತರಿಸಬಹುದು...👏🏼 ನಿಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಧನ ನೀಡಿ...👏🏼*

7 months ago | [YT] | 6

SH-RA-MI-KA

*ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ (ರಿ) ಅಳದಂಗಡಿ*
ಸಮಾಜಸೇವಾ ಸಂಘಟನೆ

ಎಸ್ ಎಸ್ ಎಲ್ ಸಿ ನಂತರ ಮುಂದೇನು ಎಂಬುದಕ್ಕೆ
ಇಂದು ಸರಕಾರಿ ಪ್ರೌಢಶಾಲೆ ಅಳದಂಗಡಿಯಲ್ಲಿ
*"ವೃತ್ತಿ ಮಾರ್ಗದರ್ಶನ* ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಕಳ ಜ್ಞಾನಸುಧಾ ಕಾಲೇಜಿನ ಉಪನ್ಯಾಸಕರಾದ *ಸಂದೀಪ್* ಮತ್ತು ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಶಿಕ್ಷಕರಾದ *ಜಗನ್ನಾಥ್* ಇವರು ಮಾರ್ಗದರ್ಶನ ನೀಡಿದರು
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವ ಅಧ್ಯಕ್ಷರಾದ *ಶಿವಪ್ರಸಾದ್ ಅಜಿಲರು ಶಾಲಾ ಮಕ್ಕಳಿಗೆ ಮಾರ್ಗದರ್ಶನಕ್ಕೆ ಪೂರಕವಾಗಿ ಪುಸ್ತಕ ಮತ್ತು ಪೆನ್ನು* ನೀಡಿ ಶುಭ ನುಡಿಯನ್ನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು 🌹🌹🌹

8 months ago | [YT] | 0

SH-RA-MI-KA

ಅಳದಂಗಡಿ: ವಯೋವೃದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

ಅಳದಂಗಡಿ:ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಕೆದ್ದು ಪರಿಸರದಲ್ಲಿ ಬಾಡ ಎಂಬ ವಯೋವೃದ್ದರು ನಿರ್ಗತಿಕರಾಗಿ ಹಲವಾರು ವರ್ಷಗಳಿಂದ ಅಂಗಡಿ ಮುಂಗಟ್ಟುಗಳ ಮುಂಬಾಗ ,ಮರಗಳ ಕೆಳಗೆ ಹೀಗೆ ಅನಾಥವಾಗಿ ಇರುತ್ತಿದ್ದರು. ಯಾರಿಂದಲೂ ಕೈ ಚಾಚದೆ ,ಯಾರಿಗೂ ಕಿರಿಕಿರಿ ಉಂಟು ಮಾಡದೆ ಸ್ವಾಭಿಮಾನಿಯಾಗಿದ್ದು ಬಾಡಜ್ಜ ಎಂದು ಸಾರ್ವಜನಿಕರಿಂದ ಕರೆಯಲ್ಪಡುತ್ತಿದ್ದರು.

ಸ್ಥಳೀಯರು ನೀಡಿದ ಅನ್ನ ಆಹಾರ ಸೇವಿಸುತ್ತಿದ್ದರು. ಇತ್ತೀಚೆಗೆ ಕೆಲವು ದಿನಗಳಿಂದ ವಿಪರೀತವಾಗಿ ಚೈತನ್ಯ ಕಳೆದುಕೊಂಡಿದ್ದು ಇದನ್ನರಿತ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಅಳದಂಗಡಿ ಸಮಾಜ ಸೇವಾ ಸಂಘಟನೆಯು ಅಳದಂಗಡಿ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿ ವೇಣೂರು ಗುಂಡೂರಿಯ ಶ್ರೀ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕುಲಾಲ್ ಕಾಟಿಪಳ್ಳ ಹಾಗೂ ವೇಣೂರಿನ ಪೋಲೀಸ್ ಠಾಣೆಗೂ ಕೂಡ ಮಾಹಿತಿ ನೀಡಿ ವೀರಕೇಸರಿ ಬಳಂಜ ಇವರ ಅಂಬುಲೆನ್ಸ್ ನಲ್ಲಿ ಕರೆದೊಯ್ದು ವೇಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಬಳಿಕ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ಸೇರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ದೇವದಾಸ್ ಸಾಲ್ಯಾನ್,ಅಳದಂಗಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಪೂರ್ಣಿಮ .ಜೆ , ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಆಚಾರ್ಯ ಮಿತ್ತರೋಡಿ, ಅಳದಂಗಡಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೊರಗಪ್ಪ , ಸಾಮಾಜಿಕ ಕಾರ್ಯಕರ್ತೆ ಹರಿಣಿ ಲಕ್ಷ್ಮಣ ಪೂಜಾರಿ ,ಕೀರ್ತನ್ ಇವರುಗಳು ಸಹಕರಿಸಿದರು.

ವಯೋವೃದ್ದರಾದ ಬಾಡಜ್ಜರವರ ಬಂಧುಬಳಗದವರ ಮಾಹಿತಿ ಇದ್ದಲ್ಲಿ ವೇಣೂರು ಪೋಲೀಸ್ ಠಾಣೆಗೆ ನೀಡಿ ಸಹಕರಿಸಬೇಕು ಎಂದು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ರವರು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ

1 year ago | [YT] | 1