ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್‌ಸ್ಟೈಬ್ ಮಾಡಿ..
====
Thank You For Watching! Do Not Forget To Like |
Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..
Kannada9News
ನಾಳೆ ಬೆಳಗ್ಗೆ 11ಕ್ಕೆ ಕಬ್ಬಿನ ಅಂತಿಮ ಬೆಲೆ ಘೋಷಣೆ ಸಾಧ್ಯತೆ!
ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಮಹತ್ವದ ಸಭೆ – ರೈತರಲ್ಲಿ ಹೆಚ್ಚಿದ ನಿರೀಕ್ಷೆ
ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಹಾಗೂ ಕಬ್ಬು ಬೆಳೆಗಾರರ ಕುತೂಹಲ ಹೆಚ್ಚಾಗಿದೆ. ನವೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಕಬ್ಬಿನ ಅಂತಿಮ ಬೆಲೆ ಘೋಷಣೆಯಾಗುವ ಸಾಧ್ಯತೆ ಇದೆ.
ಕಬ್ಬಿನ ಬೆಲೆ ನಿಗದಿ ಕುರಿತು ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ರೈತರೊಂದಿಗೆ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ರೈತರ ಬೇಡಿಕೆಗಳು ಹಾಗೂ ಕಬ್ಬಿನ ಬೆಲೆ ನಿಗದಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ರೈತರ ಬೇಡಿಕೆಗಳು ಮತ್ತು ಕಬ್ಬಿನ ಬೆಲೆ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ. ಕಬ್ಬಿನ ಅಂತಿಮ ಬೆಲೆ ಎಷ್ಟು ನಿಗದಿಯಾಗಲಿದೆ? ರೈತರ ಬೇಡಿಕೆಗಳಿಗೆ ಸಮ್ಮತಿ ದೊರೆಯಲಿದೆಯೇ? ಎಂಬ ಪ್ರಶ್ನೆಗಳು ರೈತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವಿನ ಮಾತುಕತೆಯ ಬಳಿಕ ಹೊರಬೀಳಲಿರುವ ನಿರ್ಧಾರದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
Satish Jarkiholi @topfans #Kannada9news
1 week ago | [YT] | 116
View 0 replies
Kannada9News
ಗೋಕಾಕ್‌ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ: ಲಖನ್ ಜಾರಕಿಹೊಳಿ ಗೃಹ ಕಚೇರಿಯಲ್ಲಿ ಪುಷ್ಪ ಪೂಜೆ
ಗೋಕಾಕ್: ನಗರದ ವಿಧಾನಪರಿಷತ್ ಸದಸ್ಯರಾದ ಶ್ರೀ ಲಖನ್ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ವಾಲ್ಮೀಕಿ ಜಯಂತಿಯ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಲಖನ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಸದಾ ಕಲಾಲ್ ಸೇರಿದಂತೆ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದು, ಮಹರ್ಷಿ ವಾಲ್ಮೀಕಿ ಅವರಿಗೆ ಗೌರವ ಸಲ್ಲಿಸಿದರು.
ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು, ಮೌಲ್ಯಗಳು ಹಾಗೂ ಸಂದೇಶಗಳನ್ನು ಸ್ಮರಿಸುವ ಮೂಲಕ ವಾಲ್ಮೀಕಿ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ವರದಿ: ಕನ್ನಡ 9 ನ್ಯೂಸ್, ಗೋಕಾಕ್
2 weeks ago | [YT] | 27
View 1 reply
Kannada9News
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಜೊತೆ ದೇವದುರ್ಗ ಮೂಲದ ಸಿಎ ಗೌತಮ್ ಪಾಟೀಲ್ ನಿಶ್ಚಿತಾರ್ಥ ಸರಳವಾಗಿ ಗೋಕಾಕ್ ಹಿಲ್ ಗಾರ್ಡನ್‌ನಲ್ಲಿ ನಡೆಯಿತು, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ಎಂಎಲ್‌ಸಿ ಲಖನ್ ಜಾರಕಿಹೊಳಿ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗಿಯಾಗಿದ್ದರು: Chikkodi MP Priyanka Jarkiholi Gets Engaged to CA Gautam Patil
#PriyankaJarkiholi #GautamPatil #EngagementCeremony #kannada9news
2 weeks ago | [YT] | 421
View 4 replies
Kannada9News
🎉❤️ 10K SUBSCRIBERS – ಹೃತ್ಪೂರ್ವಕ ಧನ್ಯವಾದಗಳು! ❤️🎉
ನಮ್ಮ Kannada 9 News ಚಾನೆಲ್‌ಗೆ 10,000 Subscribers ನೀಡಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು! 🙏❤️
ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲವೇ ನಮ್ಮ ಶಕ್ತಿ. 💪
ಇದೇ ರೀತಿ ನಮ್ಮನ್ನು ಬೆಂಬಲಿಸುತ್ತಿರಿ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲಿರಲಿ.
❤️ 10K Subscribers – ನಿಮ್ಮ ಪ್ರೀತಿ, ನಮ್ಮ ಹೆಮ್ಮೆ!
🙏 ಧನ್ಯವಾದಗಳು… ಧನ್ಯವಾದಗಳು… ಧನ್ಯವಾದಗಳು!
📺 ನಿಮ್ಮದೇ ಸುದ್ದಿ ವಾಹಿನಿ – Kannada 9 News 🔴
3 weeks ago | [YT] | 4
View 1 reply
Kannada9News
*ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಖನ್ ಜಾರಕಿಹೊಳಿ ಅವರು ಭೇಟಿ ನೀಡಿ ಆಶೀರ್ವಾದ ಪಡೆದರು*ಮೂಡಲಗಿ ತಾಲೂಕಿನ ಉದಗಟ್ಟಿ ಗ್ರಾಮದ ಶ್ರೀ ಉದಗಟ್ಟಿಉದ್ದಮ್ಮಾ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಖನ್ ಜಾರಕಿಹೊಳಿ ಅವರು ಭೇಟಿ ನೀಡಿ ಆಶೀರ್ವಾದ ಪಡೆದರು
4 weeks ago | [YT] | 27
View 1 reply
Kannada9News
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ರಮೇಶ್ ಜಾರಕಿಹೊಳಿ ಹಾಗೂ ಲಖನ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸುಧೀರ್ಘ ಸಮಾಲೋಚನೆ ಮಾಡಿದರು.
#Gokaknews #Kannada9news
1 month ago | [YT] | 34
View 0 replies
Kannada9News
ಮಹಿಳೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ತಿಂಗಳ ಬಳಿಕ ಕಬ್ಬಿನ ಗದ್ದೆಯಲ್ಲಿ ಕೊಳೆತ ಶವ ಪತ್ತೆ!
ಪ್ರೇಯಸಿಯನ್ನು ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವ ಎಸೆದಿದ್ದ ಆರೋಪ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಕುಲಗೋಡ ಪೊಲೀಸರ ತನಿಖೆಯಲ್ಲಿ ಭೀಕರ ಕೃತ್ಯ ಬಯಲು: ಚಿನ್ನಾಭರಣಗಳಿಗಾಗಿ ಕೊಲೆ ಮಾಡಿರುವ ಶಂಕೆ
ಮೂಡಲಗಿ: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಶವ ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಡಲಗಿ ತಾಲ್ಲೂಕಿನ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಕೌಜಲಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅನ್ನಪೂರ್ಣಾ ಸಿದ್ದಪ್ಪ ಒಡಚನ್ನವರ(34) ಮೂಲತ ಮಹಿಳೆ ತಿಗಡಿ ಗ್ರಾಮದವಳಾಗಿದ್ದು ಕೌಜಲಗಿ ಗ್ರಾಮದಲ್ಲಿ ಉಳುಮೆ ಮಾಡಿಕೊಡಿದ್ದರು ಎನ್ನಲಾಗಿದೆ. ನಾಪತ್ತೆಯಾಗಿರುವ ಕುರಿತು ಸುಮಾರು ಒಂದು ತಿಂಗಳ ಹಿಂದೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು.
ತನಿಖೆ ವೇಳೆ ಮಹಿಳೆ ಹಾಗೂ ಗೋಕಾಕ ತಾಲೂಕಿನ ಸಿಂಗ್ಲಾಪೂರದ ದಿಲೀಪ್ ಗಡ್ಕರಿ(37) ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಪೊಲೀಸ್ ತನಿಖೆಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆರೋಪಿ ತನ್ನ ಗ್ರಾಮದಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ನಂತರ ತನಿಖೆ ಮುಂದುವರಿಸಿದ ಪೊಲೀಸರು ತಲೆಮರೆಸಿಕೊಂಡದ್ದ ಆರೋಪಯನ್ನ ಪತ್ತೆಹಚ್ಚಿ, ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯೂ ಅನ್ನಪೂರ್ಣನಳನ್ನ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವವನ್ನು ಎಸೆದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳು ತೆಗೆದುಕೊಂಡು, ಅವುಗಳನ್ನು ತನ್ನ ಬೈಕದಲ್ಲಿ ಇಟ್ಟಿರುವುದಾಗಿ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಆರೋಪಿಯ ಮಾಹಿತಿ ಆಧರಿಸಿ ಪೊಲೀಸರು ಕಬ್ಬಿನ ಗದ್ದೆಯಲ್ಲಿ ಶೋಧ ನಡೆಸಿದಾಗ ಮಹಿಳೆಯ ಶವ ಕೊಳೆತು ತೆಲೆ ಬುರುಡೆ, ಮೂಳೆಗಳು ಹಾಗೂ ಸೀರೆ, ಚಪಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆಯ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಕೊಲೆಗೆ ನಿಖರ ಕಾರಣವೇನು, ಚಿನ್ನಾಭರಣಗಳ ವಿಚಾರಕ್ಕೆ ಕೊಲೆ ನಡೆದಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
#Kannada9News #KannadaNews
#Mudalagi #Koujalagi
#MudalagiNews #CrimeNews
#BelagaviNews #BelagaviCrime
#KannadaCrimeNews #BreakingNews #KarnatakaNews
#PoliceNews #CrimeUpdate
#KoujalagiNews #kannada9
ಕುಲಗೋಡ ಪೊಲೀಸರ ಚುರುಕಿನ ತನಿಖೆಯಿಂದ ಒಂದು ತಿಂಗಳಿನಿಂದ ನಿಗೂಢವಾಗಿದ್ದ ಮಹಿಳೆ ನಾಪತ್ತೆ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಬಯಲಾಗಿದೆ.
2 months ago | [YT] | 5
View 0 replies
Kannada9News
ಮೂಡಲಗಿ: ಕೌಜಲಗಿ ಗ್ರಾಮದಲ್ಲಿ ಬೆಚ್ಚಿಬೀಳಿಸಿದ ಘಟನೆ! ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆ | ಆರೋಪಿ ಬಂಧನ..
#Kannada9News
#KannadaNews
#Mudalagi
#Koujalagi
#MudalagiNews
#CrimeNews
#BelagaviNews
#BelagaviCrime
#KannadaCrimeNews
#BreakingNews
#KarnatakaNews
#PoliceNews
#CrimeUpdate
#KoujalagiNews
#Kannada9
2 months ago | [YT] | 3
View 0 replies
Kannada9News
ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀ ಕೃಷ್ಣ ಪರಮಾತ್ಮನ ಆಶೀರ್ವಾದ ಎಲ್ಲರ ಮೇಲಿರಲಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಸಾರಿದ ಆದರ್ಶಗಳನ್ನು ಪಾಲಿಸುವ ಮೂಲಕ ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ಸಾಗೋಣ.
#KrishnaJanmashtami #Kannada9news
2 months ago | [YT] | 38
View 1 reply
Kannada9News
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು: ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಈ ವೇಳೆ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿ, ಕೆಲಕಾಲ ಮಾತುಕತೆ ನಡೆಸಿದರು. ಭೇಟಿಯ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿರುವ ಸಾಧ್ಯತೆ ಇದೆ. #Rameshjarakiholi #cm #Kannada9news
2 months ago | [YT] | 156
View 2 replies
Load more