yakshagana video's Dheeraj udupa

ಯಕ್ಷಗಾನದ ಅಪರೂಪದ ಸನ್ನಿವೇಶದ ವೀಡಿಯೋ ಚಾನೆಲ್


yakshagana video's Dheeraj udupa

ಎಂಟನೇ ವರ್ಷದ ಸಂಭ್ರಮದಲ್ಲಿ
*ಯಕ್ಷ ಕನಸು - 2026*

*"ರಂಗವೇ ರೋಮಾಂಚನಗೊಳ್ಳುವ ಅದ್ಭುತ ನಾದವೈಭವಕ್ಕೆ ಸಾಕ್ಷಿಯಾಗಲಿದೆ ನಮ್ಮ ಹಿಮ್ಮೇಳ"*

ಯಾವುದೇ ಯಕ್ಷಗಾನ ಯಶಸ್ವಿಯಾಗುವಲ್ಲಿ ಹಿಮ್ಮೇಳವೇ ಪ್ರಧಾನ ಜೀವಾಳ. ಮುಮ್ಮೇಳ ಯಕ್ಷಗಾನವನ್ನು ಕಣ್ಣಿಗೆ ತೋರಿಸಿದರೆ, ಹಿಮ್ಮೇಳ ಕಿವಿಗೆ ಕೇಳುವ ಆಹ್ಲಾದವನ್ನು ನೀಡುತ್ತದೆ.

ಭಾಗವತರಾಗಿ: ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಶ್ರೀ ಹಿಲ್ಲೂರು ರಾಮಕೃಷ್ಣ ಹೆಗಡೆ, ಶ್ರೀ ಪ್ರಸನ್ನ ಭಟ್ ಬಾಳ್ಕಲ್, ಶ್ರೀ ದರ್ಶನ್ ಗೌಡ ಗೋಳಿಮಕ್ಕಿ
ಮದ್ದಳೆಯಲ್ಲಿ : ಶ್ರೀ ಶಶಾಂಕ್ ಆಚಾರ್ಯ, ಶ್ರೀ ಅಕ್ಷಯ್ ಆಚಾರ್ಯ
ಚಂಡೆಯಲ್ಲಿ: ಶ್ರೀ ಶ್ರೀನಿವಾಸ ಪ್ರಭು, ಶ್ರೀ ಸುಜನ್ ಹಾಲಾಡಿ, ಶ್ರೀ ಪ್ರಜ್ವಲ್ ಮುಂಡಾಡಿ

*ಒಂದೇ ರಾತ್ರಿ.. ನಾಲ್ಕು ಪ್ರಸಂಗಗಳ ಭವ್ಯ ರಂಗ ವೈಭವ!!*
▪️ಕರ್ಣಪರ್ವ ▪️ಹಿರಣ್ಯಕಷಿಪು ▪️ಇಂದ್ರಜಿತು ▪️ಭದ್ರಸೇನ

ಇದೇ ಶನಿವಾರ ಆಗಸ್ಟ್ 22
*ರಾತ್ರಿ 8:00 ರಿಂದ*
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

*Online Booking*
easyeventz.app.link/VhbrSotId5b

www.tititai.com/event-details/6a5e6fe8bc3cc8c85987…


ಟಿಕೆಟ್ ಮತ್ತು ಮಾಹಿತಿಗಾಗಿ: 99008 02670

*ಬನ್ನಿ, ಜನ್ಸಾಲೆ ಮತ್ತು ಸುಪ್ರಸಿದ್ಧ ಕಲಾವಿದರ ಹಿಮ್ಮೇಳ-ಮುಮ್ಮೇಳದ ಅದ್ಭುತ ಜುಗಲ್‌ಬಂದಿಗೆ ಸಾಕ್ಷಿಯಾಗಿ!!*

ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು

1 month ago | [YT] | 63

yakshagana video's Dheeraj udupa

ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕಮಲಶಿಲೆ ಮೇಳ ಮತ್ತು ಆತಿಥಿ ಕಲಾವಿದರ ಕೂಡುವಿಕೆಯಲ್ಲಿ "*ಚೆಂಡೆಯ ಗುಂಡಣ್ಣ*" ಅವರ ವಿಶೇಷ ಸಂಯೋಜನೆಯಲ್ಲಿ ಹಲವು ವರ್ಷಗಳ ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷಗಾನ ಪ್ರದರ್ಶನ.😍

ನವರಸ ಭರಿತ ಆಖ್ಯಾನಗಳನ ಪ್ರಸ್ತುತಿ.

*14-11-2025ನೇ ಶುಕ್ರವಾರ ರಾತ್ರಿ 10 ಘಂಟೆಗೆ*.

ಪ್ರಸಂಗಗಳು ಜೋಡಣೆಯಲ್ಲಿದೆ ನಿರೀಕ್ಷೆ ಚಾಲ್ತಿಯಲ್ಲಿರಲಿ.

*ಸರಿಯಾದ ಪ್ರಸಂಗ ಊಹಿಸಿದವರಿಗೆ ಒಂದು ಉಚಿತ ಪಾಸ್ ಕೊಡಲಾಗುತ್ತದೆ*.❤️

ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ.🙏🏻🙏🏻🙏🏻

1 year ago | [YT] | 86

yakshagana video's Dheeraj udupa

ಯಕ್ಷ ಸಂಕ್ರಾಂತಿ ❤️

2 years ago | [YT] | 164

yakshagana video's Dheeraj udupa

All the best ಕಿರಾಡಿಯವರೆ ❤️

2 years ago | [YT] | 213

yakshagana video's Dheeraj udupa

Thank you ❤️❤️

2 years ago | [YT] | 5

yakshagana video's Dheeraj udupa

*ಗಡಿಬಿಡಿಯಲ್ಲೊಂದ್ ಗಡ್ಜ್ ಆಟ*
*ಇದೇ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ*

"ನೀವು ಬರಲೇಬೇಕು ಈ ವಿಶೇಷತೆಗಳನ್ನು ಸವಿಯಲೇ ಬೇಕು"

👉🏻 *ಕಳೆದೆರಡು ವರ್ಷಗಳಲ್ಲಿ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳದ ಕೃಷ್ಣ ಸಂಧಾನ ಪ್ರಸಂಗ ಈ ಬಾರಿ ಅಪರೂಪಕ್ಕೆ ಮೂಡಬೆಳ್ಳೆಯವರ ಸ್ವರ ಸಿರಿಯಲ್ಲಿ*

👉🏻 *ಕಲಾಕ್ಷೇತ್ರದಲ್ಲಿ ಮೊದಲ ಬಾರಿಗೆ ಸಂಧಾನದ ಕೃಷ್ಣ×ಕೌರವರಾಗಿ ನೀಲ್ಕೋಡು ಜಲವಳ್ಳಿ ಮುಖಾಮುಖಿ*

👉🏻 *ಕಲಾಕ್ಷೇತ್ರದಲ್ಲಿ ಅಪರೂಪದಲ್ಲಿ ಅಪರೂಪ ಮಂಕಿಯವರ ವಿಧುರ*

👉🏻 *ಸುಶ್ರಾವ್ಯ ಕಂಠದ ಹಿಲ್ಲೂರು ಹಾಗು ತೆಂಕಿನ ಯುವ ಪ್ರತಿಭೆ ಪ್ರಖ್ಯಾತ್ ಶೆಟ್ಟಿಯವರ ದ್ವಂದ್ವ ಪ್ರಪ್ರಥಮ ಬಾರಿಗೆ ಕಲಾಕ್ಷೇತ್ರದಲ್ಲಿ*

👉🏻 *ಯಾಜಿಯವರು ತಮ್ಮ ಪೇಟೆಂಟ್ ವೇಷ ದಕ್ಷಯಜ್ನದ ಈಶ್ವರನಾಗಿ ಬಹುದಿನಗಳ ನಂತರ ಕಲಾಕ್ಷೇತ್ರದಲ್ಲಿ*

👉🏻 *ತೆಂಕಿನ ಸುಪ್ರಸಿದ್ಧ ಸ್ತ್ರೀ ವೇಷಧಾರಿ ಸಂತೋಷ ಹಿಲಿಯಾಣ ದಾಕ್ಷಯಣಿಯಾಗಿ ಮೊದಲಬಾರಿಗೆ ಕಲಾಕ್ಷೇತ್ರದಲ್ಲಿ*

👉🏻 *ಸಾಲಿಗ್ರಾಮ ಮೇಳದ ಎರಡನೇ ವೇಷಧಾರಿಯಾಗಿ ಮುಂಬಡ್ತಿ ಪಡೆದ ಪ್ರಸನ್ನ ದಕ್ಷನಾಗಿ*

👉🏻 *ಹಾಸ್ಯದಲ್ಲಿ ನಿಮ್ಮನ್ನು ರಂಜಿಸಲು ರಮೇಶ್ ಭಂಡಾರಿ ಹಾಗೂ ಕಾಸರಕೋಡು*

👉🏻 *ಪೆರ್ಡೂರು ಮೇಳದ ಸುಪ್ರಸಿದ್ಧ ಹಳೆಯ ಜೋಡಿ ತೀರ್ಥಹಳ್ಳಿ & ನೀಲ್ಕೋಡು ರುದ್ರಕೋಪ & ಚಿತ್ರಾಕ್ಷಿಯಾಗಿ*

👉🏻 *ಚುರುಕಿನ ಹೆಜ್ಜೆಯ ರಾಜೇಶ್ ಭಂಡಾರಿ ರಕ್ತಜಂಘನಾಗಿ*

ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ, ಅತ್ಯಲ್ಪ ದರದಲ್ಲಿ ಒಂದೊಳ್ಳೆ ಯಕ್ಷಗಾನ ನೋಡೋಣ ಬನ್ನಿ 🙏

📞 *9900802670, 9986821251, 8147142284*

*ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು*

3 years ago | [YT] | 160

yakshagana video's Dheeraj udupa

ಕಲಾಕ್ಷೇತ್ರದಲ್ಲಿ ಪೂರ್ಣರಾತ್ರಿ ತಾಳಮದ್ದಳೆ !!

ಏನಪ್ಪಾ ಇದು ಪೂರ್ಣ ರಾತ್ರಿ ತಾಳ ಮದ್ದಳೆಯಾ? ಯಾರು ನೋಡ್ತಾರೆ ? ಜನ ಆಗ್ತಾರಾ?


ಖಂಡಿತಾ ಜನ ಬಂದೇ ಬರುತ್ತಾರೆ . ತಾಳಮದ್ದಳೆಗೆ ಪ್ರೇಕ್ಷಕರೇ ಬೇರೆ.. ಇದೊಂದು NEXT LEVEL THINKING ...

ನೈಕಂಬ್ಳಿಯವ ಸಂಘಟನೆಯನ್ನು ಸುಮಾರು 10 ವರ್ಷದಿಂದ ನೋಡುತ್ತಿದ್ದೇನೆ . ಪ್ರತೀ ವರ್ಷವೂ ಒಂದೊಂದು ಹೊಸತನ ಅದೂ ಯಕ್ಷಗಾನ ಚೌಕಟ್ಟಿನೊಳಗೆ ... ಹೊಸತನ ಕೊಡಬೇಕಂತ ಹುಚ್ಚಾಪಟ್ಟೆ ಎಲ್ಲ ಮಾಡಿದವರಲ್ಲ .


ಉದಾಹರಣೆಗೆ ಹೊದವರ್ಷ ಇರಬೇಕು ಜಡಿ ಮಳೆಯಲ್ಲೂ ಹೌಸ್ಫುಲ್ ಮಾಡುವ ಶಕ್ತಿ ಇದ್ದರೆ ಅದು ನೈಕಂಬ್ಳಿಯವರ ಸಂಯೋಜನೆ ಹೇಗಿರಬಹುದು ಅಂತ ಊಹಿಸಿ


ಈ ವರ್ಷ ಪೂರ್ಣರಾತ್ರಿ ತಾಳಮದ್ದಳೆ ಇಟ್ಟುಕೊಂಡಿದ್ದಾರೆ ...
ನನಗೂ ಇದು ಹೊಸತೆ ನಾನೂ ಪೂರ್ಣರಾತ್ರಿ ತಾಳಮದ್ದಳೆ ನೋಡಿದವನಲ್ಲ ನೋಡುವ ಕಾತುರದಲ್ಲಿದ್ದೇನೆ ...


ಒಂದು ರುಪಾಯಿ ಟಿಕೇಟು ದರ ...

ಬರೀ ಒಂದ್ ರುಪಾಯ್ ಕೊಟ್ ಹೋಯ್ಬೇಡಿ ನಿಮ್ ಹತ್ರ ಎಷ್ಟ್ ಕೊಡುಕ್ ಆತ್ತೋ ಅಷ್ಟ್ ಕೊಟ್ಟಿಕಿ ಹೋಯ್ನಿ ಎಂತಕ್ ಅಂದ್ರೆ ಸಂಘಟಕ ಗೆಲ್ಲ್ಕ್ .


ಶುಭವಾಗಲಿ ನೈಕಂಬ್ಳಿಯವರೇ ಗಲ್ಲಾಪೆಟ್ಟಿಗೆ ತುಂಬಲಿ ❤

3 years ago | [YT] | 49

yakshagana video's Dheeraj udupa

ಧನ್ಯವಾದಗಳು ಎಲ್ಲರಿಗೂ 🙏🏻🙏🏻🙏🏻

3 years ago | [YT] | 12