We the NEWS 24 Kannada is a news-based organization catering to the entire section of society with a social outlook and public interest. News24 is for a value system that includes truth, unbiased, impartiality, and reliability. News24 seeks to integrate quality resources with the latest technologies to put together and deliver a thought-provoking experience - simple, crisp, and bold.
#news #india #media #breakingnews #music#viral #trending #politics #noticias #fashion #tv #sports #business #currentaffairs #entertainment #info #live #kannada
V News24 Kannada
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🪔| Deepavali Wishes 2026 | Kannada Deepavali Special | V News 24 Kannada
#Deepavali2026 #Diwali2026 #HappyDeepavali #DeepavaliWishes #KannadaDeepavali #ದೀಪಾವಳಿ #ದೀಪಾವಳಿಶುಭಾಶಯಗಳು #KannadaWishes #KannadaFestival #Karnataka #KannadaNews #VNews24Kannada #FestivalGreetings #HappyDiwali #DiwaliSpecial #KannadaStatus #DeepavaliSpecial #ViralPost #TrendingPost #FestivalVibes #highlight #highlightevryone #followers
14 hours ago | [YT] | 0
View 0 replies
V News24 Kannada
ಕನ್ನಡಿಗರ ಹೆಮ್ಮೆಯ ಹಬ್ಬ! ಕನ್ನಡ ರಾಜ್ಯೋತ್ಸವದ ವಿಶೇಷ ಶುಭಾಶಯಗಳು | Karnataka Rajyotsava 2026
ಕನ್ನಡದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ. ಕನ್ನಡಿಗರಾಗಿ ನಮ್ಮ ನಾಡಿನ ಹೆಮ್ಮೆಯನ್ನು ಜಗತ್ತಿಗೆ ಸಾರೋಣ.
ಜೈ ಕರ್ನಾಟಕ ಮಾತೆ! ಜೈ ಕನ್ನಡಾಂಬೆ!
ಈ ವಿಶೇಷ ರಾಜ್ಯೋತ್ಸವದ ಶುಭಾಶಯಗಳನ್ನು ಪ್ರತಿಯೊಬ್ಬ ಕನ್ನಡಿಗರಿಗೂ ಹಂಚಿಕೊಳ್ಳಿ.
Subscribe to V News 24 Kannada for Latest Kannada News and Updates.
Hashtags:
#KannadaRajyotsava #KannadaRajyotsava2026 #ಕನ್ನಡರಾಜ್ಯೋತ್ಸವ #ಕನ್ನಡದಹಬ್ಬ #ಕರ್ನಾಟಕ #ಕನ್ನಡಿಗರು #ಕನ್ನಡಾಂಬೆ #ಜೈಕರ್ನಾಟಕ #KarnatakaRajyotsava #KannadaPride #KannadaCulture #KannadaLanguage #Karnataka #MysorePalace #KannadaNews #Vnews24Kannada #TrendingNews #ViralNews #highlights #followers #followerseveryone #SocialMediaActivism
1 week ago | [YT] | 0
View 0 replies
V News24 Kannada
Mysore Dasara 2026 | ನಾಡಹಬ್ಬ ದಸರಾ ಸಂಭ್ರಮ! ಸಮಸ್ತ ನಾಡಿನ ಜನತೆಗೆ ಶುಭಾಶಯಗಳು
#MysoreDasara #MysuruDasara2026 #HappyDasara #DasaraWishes #ಮೈಸೂರುದಸರಾ #ದಸರಾಶುಭಾಶಯಗಳು #AyudhaPooja #KannadaNews #VNews24Kannada #MysoreDasaraSpecial #KarnatakaFestival #Dasara2026
2 weeks ago | [YT] | 0
View 0 replies
V News24 Kannada
ಚಾಮರಾಜನಗರದಲ್ಲಿ ಹುಲಿ ಉಗುರು, ಹಲ್ಲು ಮಾರಾಟಕ್ಕೆ ಯತ್ನ: ಮೂವರು ಬಂಧನ | #ಚಾಮರಾಜನಗರ #ಹುಲಿಉಗುರು #ಹುಲಿಹಲ್ಲು #TigerClaw #TigerTeeth #WildlifeCrime #WildlifeProtection #Bandipur #BandipurTigerReserve #KarnatakaForestDepartment #ForestDepartment #WildlifeNews #KarnatakaNews #BreakingNews #KannadaNews
2 months ago (edited) | [YT] | 1
View 0 replies
V News24 Kannada
ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸುವ ಘಟನೆಯೊಂದು ನಡೆದಿದೆ. ಕಳೆದ ವಾರ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವ ಪೊಲೀಸ್ ಪೇದೆಯೊಬ್ಬರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಯನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 32 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ. ಕಳೆದ ವಾರ ಪಟ್ಟಣದಲ್ಲಿ ತಮ್ಮ ಕರ್ತವ್ಯವನ್ನು ಮುಗಿಸಿ ವಾಪಸ್ ಠಾಣೆಗೆ ಬರುತ್ತಿದ್ದ ಸಂದರ್ಭದಲ್ಲಿ, ಗಣೇಶ್ ಅವರು ಆಕಸ್ಮಿಕವಾಗಿ ಬೈಕ್ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದರೆ, ಶನಿವಾರದಂದು ಚಿಕಿತ್ಸೆಯ ದಾರಿ ಕಡಿದುಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗಣೇಶ್ ಅವರು ಕೊನೆಯುಸಿರೆಳೆದಿದ್ದಾರೆ. ಕೇವಲ 32ನೇ ವಯಸ್ಸಿಗೆ ಕರ್ತವ್ಯ ನಿರತ ಪೊಲೀಸ್ ಪೇದೆ ಸಾವನ್ನಪ್ಪಿರುವುದು ಅವರ ಕುಟುಂಬಸ್ಥರು ಹಾಗೂ ಗುಂಡ್ಲುಪೇಟೆ ಪೊಲೀಸ್ ಸಿಬ್ಬಂದಿಯಲ್ಲಿ ಮರೆಯಲಾಗದ ಆಘಾತವನ್ನು ಉಂಟುಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಕ್ರೈಂ ಲೋಕದ ಪ್ರತಿಯೊಂದು ನಿಜವಾದ ಅಪ್ಡೇಟ್ಗಳಿಗಾಗಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ.#vnews24kannada
4 months ago | [YT] | 2
View 0 replies
V News24 Kannada
📢 ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ..!
ಭಾರತ ಸರ್ಕಾರದ ಜವಳಿ ಸಚಿವಾಲಯದ ಅಧೀನದಲ್ಲಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) ವ್ಯಾಪ್ತಿಯ ಸೆಂಟ್ರಲ್ ಸಿಲ್ಕ್ ಟೆಕ್ನಾಲಜಿಕಲ್ ರಿಸರ್ಚ್ ಸಂಸ್ಥೆ (CSTRI) ಯಲ್ಲಿ 60 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
✅ ಒಟ್ಟು ಹುದ್ದೆಗಳು: 60
✅ ಹುದ್ದೆಗಳು: ಮಾಸ್ಟರ್ ರೀಲರ್ಸ್, ತಂತ್ರಜ್ಞರು, ನೇಕಾರರು, ಡೈಯರ್ಸ್
✅ ವಿದ್ಯಾರ್ಹತೆ: ಕನಿಷ್ಠ 8ನೇ ತರಗತಿ ಪಾಸ್
✅ ಅನುಭವ: ಸಿಲ್ಕ್ ರೀಲಿಂಗ್/ನೆಯ್ಗೆ ಕ್ಷೇತ್ರದಲ್ಲಿ 2-3 ವರ್ಷ
✅ ವಯಸ್ಸು: 21 ವರ್ಷ ಮೇಲ್ಪಟ್ಟವರು
✅ ಆಯ್ಕೆ ವಿಧಾನ: ನೇರ ಸಂದರ್ಶನ (Walk-in Interview)
✅ ಉದ್ಯೋಗ ಸ್ಥಳ: ಸಿದ್ಲಘಟ್ಟ, ರಾಮನಗರ, ಧಾರವಾಡ ಸೇರಿದಂತೆ ವಿವಿಧ ಕೇಂದ್ರಗಳು
📅 ಸಂದರ್ಶನ ದಿನಾಂಕ: 30-05-2025
🕚 ಸಮಯ: ಬೆಳಿಗ್ಗೆ 11:00 ಗಂಟೆ
ಪರೀಕ್ಷೆ ಇಲ್ಲದೆ ನೇರ ಸಂದರ್ಶನದ ಮೂಲಕ ಸರ್ಕಾರಿ ಯೋಜನೆಯಡಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು
.
.
#JobAlert #CentralSilkBoard #CSTRI #SilkSamagra2 #GovernmentJobs #KarnatakaJobs #WalkInInterview #JobsInKarnataka #EmploymentNews #KannadaNews
5 months ago | [YT] | 3
View 0 replies
V News24 Kannada
ನಂಜೇದೇವನಪುರ ಬಳಿ 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ
ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಸೇರಿದಂತೆ ಸುತ್ತ ಮುತ್ತಲಿನ ಗಾಮಗಳಲ್ಲಿ ಬೀಡು ಬಿಟ್ಟಿದ್ದ ತಾಯಿ ಹುಲಿ ಸೇರಿದಂತೆ ಐದು ಹುಲಿಗಳಲ್ಲಿ ಈಗಾಗಲೇ ಮೂರುಹುಲಿಗಳನ್ನು ಸೆರೆ ಹಿಡಿಯಲಾಗಿದ್ದು, ಮಂಗಳವಾರ ಮತ್ತೊಂದು 10 ತಿಂಗಳ ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ.
ಚಾಮರಾಜನಗರದ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಒಂದು ತಾಯಿ ಹುಲಿ ಹಾಗೂ 04 ಹುಲಿ ಮರಿಗಳನ್ನು ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿಯನ್ನು ನೀಡಿದ್ದರು.
ಅದರಂತೆ, ಜನವರಿ 9 ರಂದು ಒಂದು ತಾಯಿ ಹುಲಿಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯಲಾಗಿದ್ದು, 04 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು. ಜನವರಿ 15 ರ ರಾತ್ರಿ ಸದರಿ 04 ಹುಲಿ ಮರಿಗಳ ಪೈಕಿ ಅಂದಾಜು 10 ತಿಂಗಳ ಒಂದು ಹೆಣ್ಣು ಹುಲಿ ಮರಿಯನ್ನು ಜನವರಿ 17 ರ ರಾತ್ರಿ 10 ತಿಂಗಳ ಗಂಡು ಹುಲಿ ಮರಿಯನ್ನು ಸೆರೆಹಿಡಿಯಲಾಗಿತ್ತು ಉಳಿಕೆ 02 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು.
ಮಂಗಳವಾರ ಉಳಿಕೆ 02 ಹುಲಿ ಮರಿಗಳ ಪೈಕಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆಹಿಡಿಯಲಾಗಿದ್ದು ಹುಲಿಯನ್ನು ಸುರಕ್ಷಿತವಾಗಿ ಇಡಲಾಗಿದೆ ಮತ್ತು ಅದರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಇನ್ನು 01 ಹುಲಿ ಮರಿ ಸೆರೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಇಲಾಖೆಯ ಪಶುವೈದ್ಯಾಧಿಕಾರಿಗಳು, ದುಬಾರೆ ಕ್ಯಾಂಪಿನ 04 ಸಾಕಾನೆ, ಇಲಾಖೆಯ ಡೋಣ್ ತಂಡಗಳು ಮತ್ತು ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.
ನಂಜೇದೇವನಪುರ ಬಳಿ ಹುಲಿ ಮರಿ ಸೆರೆಯಿಂದಾಗಿ ಗ್ರಾಮಸ್ಥರಲ್ಲಿ ಸ್ವಲ್ಪಮಟ್ಟಿಗೆ ನೆಮ್ಮದಿ ಬಂದಂತಾಗಿದೆ. #Chamarajanagar,#TigerCub,#WildlifeRescue,#ForestDepartment,#BRTHills,#BiligiriRanganathaTigerReserve,#TigerConservation,#WildlifeOperation,#HumanWildlifeConflict,#ForestNews,#KarnatakaWildlife,#TigerCapture,#WildlifeSafety,#VillageRelief,#BreakingNews,#NatureProtection,#WildlifeUpdate,#ConservationEfforts,#IndiaWildlife
9 months ago | [YT] | 1
View 0 replies
V News24 Kannada
ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ನಡುವೆ ಅಪಘಾತ ಓರ್ವ ಸಾವು-ಓರ್ವ ಆಸ್ಪತ್ರಗೆ ದಾಖಲು
ಚಾಮರಾಜನಗರ : ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತವಾಗಿದ್ದು, ಬೈಕ್ ಸವಾರ ಶಿವಸ್ವಾಮಿ ಆಲಿಯಾಸ್ ಪುಟ್ಟ (30) ಎಂಬಾತನಿಗೆ ತೆಲೆಗೆ ತೀತ್ರವಾದ ಪೆಟ್ಟಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟನು. ಮತ್ತೊಬ್ಬ ಸವಾರನಿಗೆ ಪೆಟ್ಟಾಗಿದ್ದು, ಆಂಬುಲೆನ್ಸ್ ಮೂಲಕ ಸಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ರಸ್ತೆ ಅಪಘಾತವು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಕಾರ್ಯ ಕೈಗೊಂಡಿದ್ದಾರೆ. #Chamarajanagar,#KSRTC,#RoadAccident,#BikeAccident,#BusAccident,#FatalAccident,#BreakingNews,#LocalNews,#TrafficAccident,#RoadSafety,#OneDead,#Injured,#Hospitalized,#RuralNews,#KarnatakaNews,#PoliceInvestigation,#AccidentNews,#PublicSafety
9 months ago | [YT] | 0
View 0 replies
V News24 Kannada
ಚಾಮರಾಜನಗರ : ರಸ್ತೆ ಅಭಿವೃದ್ದಿ ಕಾರ್ಯದಲ್ಲೂ ಇದೀಗ ರಾಜಕಾರಣ ಆರಂಬವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ರೋಡ್ ವರ್ಕ್ ವಾರ್ ನಡೆಯುತ್ತಿದ್ದು, ಬಿಜೆಪಿ –ಜೆಡಿಎಸ್ ನಡುವೆ ರೋಡ್ ವರ್ಕ್ ವಾರ್ ನಡೆಯುತ್ತಿದೆ.
ವಾ.ಓ: ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾಕ್ಷೇತ್ರದಲ್ಲಿ 2023 ರ ವಿಧಾನ ಸಭಾ ಚುನಾವಣಾ ಪೂರ್ವ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹನೂರು ವಿಧಾನ ಸಭಾ ಕ್ಷೇತ್ರದ ಅಂಡೆ ಕುರುಬನ ದೊಡ್ಡಿ ಗ್ರಾಮದ ಡಾಂಬರು ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಮಂಜೂರಾಗಿತ್ತು. ಆದರೆ ಕಾಮಗಾರಿ ಚಾಲನೆ ನೀಡುವ ಸಮಯದಲ್ಲಿ ಚುನಾವಣೆ ಘೋಷಣೆಯಾಗಿತ್ತು.
ಪ್ರಸ್ತುತ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ನಿಂದ ಎಂ.ಆರ್. ಮಂಜುನಾಥ್ ಶಾಸಕರಾಗಿದ್ದು, ಇತ್ತೀಚೆಗೆ ಅಂಡೆಕುರುಬನ ದೊಡ್ಡಿ ರಸ್ತೆಗೆ ಭೂಮಿ ಪೂಜೆ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ಡಾಂಬರ್ ರೋಡ್ ಮಾಡುವ ಬದಲು ಮೆಟ್ಲಿಂಗ್ ಮಾತ್ರ ಎಂದು ವರದಿಯಾಗಿದ್ದು, ಬಿಜೆಪಿ – ಜೆಡಿಎಸ್ ನಡುವೆ ರೋಡ್ ವರ್ಕ್ ವಾರ್ ಗೆ ಕಾರಣವಾಗಿದೆ.
ಡಾಂಬರು ರಸ್ತೆ ನಿರ್ಮಾಣ ಮಾಡಬೇಕು ಮೆಟ್ಲಿಂಗ್ ರಸ್ತೆ ನಿರ್ಮಾಣ ಬೇಡ ಎಂದು ಮುನಿಶೆಟ್ಟಿಗುಡಿ ದೊಡ್ಡಿ ಹಾಗೂ ಅಂಡೆ ಕುರುಬನ ದೊಡ್ಡಿ ಗ್ರಾಮಸ್ಥರು ಬಿಜೆಪಿ ಯುವ ಮುಖಂಡ ನಿಶಾಂತ್ ರವರ ನೇತೃತ್ವದಲ್ಲಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವ ಮೂಲಕ ಹೈ ಡ್ರಾಮ ನಡೆಯಿತು.
9 months ago | [YT] | 5
View 0 replies
V News24 Kannada
ಆಕಸ್ಮಿಕ ಬೆಂಕಿಗೆ ಸುಟ್ಟ ಹೋದ ಪಶು ಆಸ್ಪತ್ರೆ
ಶಿರಹಟ್ಟಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಪರಿಣಾಮ ಬೆಂಕಿಗೆ ಪಶು ಆಸ್ಪತ್ರೆಯ ಒಳಾಂಗಣದ ಮೇಲ್ಚಾವಣಿ ಹಾಗೂ ಪಶುಗಳಿಗೆ ನೀಡಲು ಸರ್ಕಾರದಿಂದ ಬಂದ ಅಪಾರ ಪ್ರಮಾಣದ ಔಷಧಿಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ.
ಹೌದು... ಪಟ್ಟಣದಲ್ಲಿ ಇರುವ ಪಶು ಆಸ್ಪತ್ರೆಯು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿಕೊಂಡು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.
ವರದಿ: ವೀರೇಶ್ ಗುಗ್ಗರಿ
9 months ago | [YT] | 9
View 0 replies
Load more