Suddinota ಸುದ್ದಿ ನೋಟ

'' ಕನ್ನಡ ಚಿತ್ರಗಳ ಸುದ್ದಿಗಳ ಜೊತೆಗೆ ದೈವ ಶಕ್ತಿ ಹಾಗೂ ಇತರ ಸುದ್ದಿಗಳನ್ನು ನೋಡಬಹುದು"
ಈಗಲೇ ಚಾನಲ್ ನ್ನು SUBSCRIBE ಮಾಡಿ
#suddinota #kannadamoviesupdate #kannada #devtional #localnews


Suddinota ಸುದ್ದಿ ನೋಟ

ಲಂಬೋದರ 2.0’ ಸಿನಿಮಾ ಪ್ರಚಾರಕ್ಕೆ ಹಟ್ಟಿ ಕಾಪಿ ಸಾಥ್: ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ಸಂಭ್ರಮ

ಬೆಂಗಳೂರು: ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಹಾಸುಹೊಕ್ಕಾಗಿರುವ ಸಿನಿಮಾ ಪ್ರೀತಿ ಮತ್ತು ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಅಪರೂಪದ ಪ್ರಚಾರಾಂದೋಲನಕ್ಕೆ ಜನಪ್ರಿಯ ಕಾಫಿ ಬ್ರ್ಯಾಂಡ್ 'ಹಟ್ಟಿ ಕಾಪಿ' ಮುಂದಾಗಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಸಿದ್ಧಗೊಂಡಿರುವ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಸೋಷಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರದ ಪ್ರಚಾರಕ್ಕಾಗಿ ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ವಿತರಿಸುವ ವಿನೂತನ ಅಭಿಯಾನವನ್ನು ಸಂಸ್ಥೆ ಘೋಷಿಸಿದೆ. ಕನ್ನಡ ಚಿತ್ರರಂಗದ ಹೊಸ ಆಲೋಚನೆಗಳನ್ನು ಬೆಂಬಲಿಸುವುದರ ಜತೆಗೆ, ಒಂದು ಕಪ್ ಬಿಸಿಬಿಸಿ ಕಾಫಿಯ ಮೂಲಕ ಜನರಲ್ಲಿ ಸಂತಸ ಹಂಚುವುದು ಈ ಸಹಯೋಗದ ಪ್ರಮುಖ ಉದ್ದೇಶವಾಗಿದೆ.

ಈ ವಿಶಿಷ್ಟ ಸಹಯೋಗದ ಬಗ್ಗೆ ಮಾತನಾಡಿದ ಹಟ್ಟಿ ಕಾಪಿಯ ಪ್ರವರ್ತಕ ಮಹೇಂದ್ರ ಅವರು, ಕನ್ನಡ ಚಿತ್ರರಂಗ ಇಂದು ಕಥಾವಸ್ತು ಮತ್ತು ತಂತ್ರಜ್ಞಾನದಲ್ಲಿ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ ಎಂದಿದ್ದಾರೆ. ಬೆಂಗಳೂರು ನಗರಕ್ಕೆ ಸಿನಿಮಾ ಹಾಗೂ ಫಿಲ್ಟರ್ ಕಾಫಿಯೊಂದಿಗೆ ಅವಿನಾಭಾವ ನಂಟು ಇರುವುದನ್ನು ನೆನಪಿಸಿದ ಅವರು, ಸಂತೋಷ, ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್‌ನಂತಹ ಸಮಕಾಲೀನ ವಸ್ತುಗಳನ್ನು ಒಳಗೊಂಡ ‘ಲಂಬೋದರ 2.0’ ಚಿತ್ರದ ಪರಿಕಲ್ಪನೆ ಮೆಚ್ಚುಗೆ ತಂದಿದೆ ಎಂದರು. ಇಂತಹ ಹೊಸ ಪ್ರಯೋಗಕ್ಕೆ ಹೆಗಲು ಕೊಡುವ ನಿಟ್ಟಿನಲ್ಲಿ ಹಾಗೂ ಸಿನಿಪ್ರಿಯರಲ್ಲಿ ಸಂಭ್ರಮ ಹೆಚ್ಚಿಸಲು ಉಚಿತ ಫಿಲ್ಟರ್ ಕಾಫಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ತಾವು ಮೊದಲಿನಿಂದಲೂ ಹಟ್ಟಿ ಕಾಪಿಯ ಅಪ್ಪಟ ಅಭಿಮಾನಿ ಎಂದು ಸಂತಸ ಹಂಚಿಕೊಂಡಿದ್ದಾರೆ. ಇಡೀ ಸಿನಿಮಾದ ಚಿತ್ರೀಕರಣದ ವೇಳೆ ತಂಡದ ಸದಸ್ಯರೆಲ್ಲರೂ ಫಿಲ್ಟರ್ ಕಾಫಿ ಸವಿಯುತ್ತಲೇ ಉತ್ಸಾಹದಿಂದ ಕೆಲಸ ಮಾಡಿದ್ದನ್ನು ಸ್ಮರಿಸಿದ ಅವರು, ಬೆಂಗಳೂರಿನಲ್ಲೇ ನಿರ್ಮಾಣವಾಗಿರುವ ಕನ್ನಡ ಚಿತ್ರಕ್ಕೆ ನಮ್ಮದೇ ನೆಲದ ಪ್ರಸಿದ್ಧ ಬ್ರ್ಯಾಂಡ್ ಕೈಜೋಡಿಸಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ. ಸ್ಥಳೀಯ ಕಥೆಗಳು ಹಾಗೂ ಹೊಸತನದ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತ ಹಟ್ಟಿ ಕಾಪಿ ಸಂಸ್ಥೆಗೆ ಅವರು ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೂಲಕ ಅನಿಲ್ ಶೆಟ್ಟಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದು, ಚಿತ್ರಕಥೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಚಿತ್ರದಲ್ಲಿ ಸಾಚಿ ಬಿಂದ್ರಾ, ಬಾಲಿವುಡ್‌ನ ಖ್ಯಾತ ನಟ ಕುನಾಲ್ ಕಪೂರ್, ನಟಿ ಮೇಘನಾ ಗಾಂವ್ಕರ್ ಮತ್ತು ಮ್ಯಾಕ್ ಮಚ್ಚಾ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಸಿನಿಮಾದ ಪ್ರಮುಖ ಆಕರ್ಷಣೆಯೆಂದರೆ, ಬೆಂಗಳೂರಿನ ಮಚಾನಿ ರೊಬೊಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಜಿಯಾ’ (JIA) ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಮಹತ್ವದ ಪಾತ್ರವೊಂದರಲ್ಲಿ ನಟಿಸಿರುವುದು. ಸಾಮಾನ್ಯ ಗ್ರಾಫಿಕ್ಸ್ (CGI) ಬಳಸುವ ಬದಲು, ವಾಸ್ತವಿಕ ಹ್ಯೂಮನಾಯ್ಡ್ ರೋಬೋಟ್‌ ಅನ್ನೇ ಬಳಸಿಕೊಂಡಿರುವುದು ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಹೆಜ್ಜೆಯಾಗಿದೆ.

ದಿನೇದಿನೆ ಬೆಳೆಯುತ್ತಿರುವ ಡಿಜಿಟಲ್ ವ್ಯಸನ, ಮಾನವ ಭಾವನೆಗಳು, ಕೃತಕ ಬುದ್ಧಿಮತ್ತೆ ಹಾಗೂ ಮನುಷ್ಯನ ನೈಜ ಸಂತೋಷದ ಅನ್ವೇಷಣೆಯ ಸುತ್ತ ಹೆಣೆದಿರುವ ‘ಲಂಬೋದರ 2.0’, ಪ್ರೇಕ್ಷಕರಿಗೆ ಹೊಸ ಬಗೆಯ ಸಿನಿಮಾ ಅನುಭವವನ್ನು ನೀಡಲು ಸಜ್ಜಾಗಿದೆ. ಕೇವಲ ಪೋಸ್ಟರ್ ಅಥವಾ ಟ್ರೇಲರ್‌ಗಳಿಗೆ ಸೀಮಿತವಾಗದೆ, ಕಾಫಿ ಸಂಸ್ಕೃತಿ ಮತ್ತು ತಂತ್ರಜ್ಞಾನದ ಸಮ್ಮಿಲನದ ಮೂಲಕ ಜನರನ್ನು ತಲುಪಲು ಹೊರಟಿರುವ ಈ ವಿನೂತನ ಪ್ರಚಾರ ವಿಧಾನ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

#suddinota #simplesuni #kannadamovie #lambodhara2.0

1 week ago | [YT] | 0

Suddinota ಸುದ್ದಿ ನೋಟ

ಮತ್ತೆ ಚಂದನವನಕ್ಕೆ ಬಂದ ರವೀನಾ ಟಂಡನ್: ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆ ಬಾಲಿವುಡ್ ‘ಮಸ್ತ್ ಮಸ್ತ್’ ಬೆಡಗಿಯ ಹೊಸ ಜುಗಲ್‌ಬಂದಿ...

ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟಿ, ಬಾಲಿವುಡ್‌ನ ‘ಮಸ್ತ್ ಮಸ್ತ್’ ಬೆಡಗಿ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆ ಮೇಲೆ ಮಿಂಚಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ಪ್ರಧಾನಿ ‘ರಮಿಕಾ ಸೇನ್’ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ನಿಬ್ಬೆರಗಾಗುವಂತೆ ಅಬ್ಬರಿಸಿದ್ದ ರವೀನಾ, ಇದೀಗ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ ಚಿತ್ರತಂಡವನ್ನು ಪ್ರಮುಖ ಪಾತ್ರದ ಮೂಲಕ ಅಧಿಕೃತವಾಗಿ ಸೇರಿಕೊಂಡಿದ್ದಾರೆ. ಚಂದನವನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರವೀನಾ ಟಂಡನ್ ಪರದೆ ಹಂಚಿಕೊಳ್ಳುತ್ತಿದ್ದು, ಈ ಇಬ್ಬರು ದಿಗ್ಗಜ ಕಲಾವಿದರ ಹೊಸ ಕಾಂಬಿನೇಷನ್ ಸಿನಿಪ್ರಿಯರಲ್ಲಿ ತೀವ್ರ ರೋಮಾಂಚನ ಮೂಡಿಸಿದೆ.

ಕರುನಾಡು ಮತ್ತು ಕನ್ನಡ ಚಿತ್ರರಂಗದೊಂದಿಗೆ ರವೀನಾ ಟಂಡನ್ ಅವರಿಗೆ ದಶಕಗಳ ಅವಿನಾಭಾವ ಹಾಗೂ ಭಾವನಾತ್ಮಕ ನಂಟಿದೆ. 1999ರಲ್ಲಿ ಬಿಡುಗಡೆಯಾಗಿದ್ದ ‘ಉಪೇಂದ್ರ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ರವೀನಾ, ಕನ್ನಡಿಗರ ಮನಗೆದ್ದಿದ್ದರು. ಆ ಬಳಿಕ ಸುದೀರ್ಘ ಗ್ಯಾಪ್ ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ಇದೀಗ ಮತ್ತೊಮ್ಮೆ ಕನ್ನಡಕ್ಕೆ ಮರಳಿರುವ ಈ ಗ್ಲಾಮರಸ್ ಹಾಗೂ ಪ್ರತಿಭಾವಂತ ತಾರೆ, ಶಿವಣ್ಣನಂತಹ ದಿಗ್ಗಜ ನಟನಿಗೆ ಜೋಡಿಯಾಗಿ ತೆರೆ ಹಂಚಿಕೊಳ್ಳುವ ಮೂಲಕ ‘ಎ ಫಾರ್ ಆನಂದ್’ ಚಿತ್ರದ ತೂಕ ಹಾಗೂ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.

ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು, ರವೀನಾ ಟಂಡನ್ ಭರ್ಜರಿಯಾಗಿ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾದ ರವೀನಾ ಅವರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿತು. ಈ ವೇಳೆ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ನಿಸಾರ್ ಅಹ್ಮದ್ ಅವರ ಸಮ್ಮುಖದಲ್ಲಿ ರವೀನಾ ಟಂಡನ್ ಅವರಿಗೆ ಸನ್ಮಾನ ಮಾಡಲಾಯಿತು. ಕ್ಯಾಂಪಸ್ ಪರಿಸರದಲ್ಲಿ ರವೀನಾ ಅವರನ್ನೊಳಗೊಂಡ ಮಹತ್ವದ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅವರ ಪಾತ್ರ ಸಿನಿಮಾದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಈ ಹಿಂದೆ ‘ಘೋಸ್ಟ್’ ಎಂಬ ಥ್ರಿಲ್ಲರ್ ಸಿನಿಮಾ ನೀಡಿದ್ದ ನಿರ್ದೇಶಕ ಎಂ.ಜಿ. ಶ್ರೀನಿವಾಸ್, ಈಗ ‘ಎ ಫಾರ್ ಆನಂದ್’ ಮೂಲಕ ಮತ್ತೊಂದು ವಿಶಿಷ್ಟ ಕಥೆಯೊಂದಿಗೆ ರವೀನಾ ಮತ್ತು ಶಿವಣ್ಣ ಅವರ ಜುಗಲ್‌ಬಂದಿ ಹೆಣೆಯುತ್ತಿದ್ದಾರೆ. ʻವೇದʼ, ʻಭೈರತಿ ರಣಗಲ್‌ʼ, ʻಪಬ್ಬಾರ್‌ʼ ನಂತರ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನವಿರಲಿದೆ.

#suddinota #kannadamovie #ravinatandan #aforanand

1 week ago | [YT] | 0

Suddinota ಸುದ್ದಿ ನೋಟ

ಸ್ಯಾಂಡಲ್‌ವುಡ್ ನಾಯಕಿಯಾಗಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್: ‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ..


ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ 'ರಾಧೇಶ್ಯಾಮ' ಧಾರಾವಾಹಿ ಸೇರಿದಂತೆ ಬಾಲಿವುಡ್‌ನ 'ಗುಲಾಬ್ ಗ್ಯಾಂಗ್', 'ಗುಲ್‌ಮೊಹರ್' ಹಾಗೂ 'ಗನ್ಸ್ ಆಫ್ ಬನಾರಸ್' ಸಿನಿಮಾಗಳಲ್ಲಿ ಈಗಾಗಲೇ ತಮ್ಮ ನಟನಾ ಛಾಪು ಮೂಡಿಸಿರುವ ಇವರು, ನೃತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಬಹುತೇಕ ಕಲಾವಿದರು ಪ್ರಾದೇಶಿಕ ಚಿತ್ರರಂಗದಿಂದ ಬಾಲಿವುಡ್‌ಗೆ ಕಾಲಿಟ್ಟರೆ, ತನ್ವಿ ರಾವ್ ಶಾಲಾ ದಿನಗಳಲ್ಲೇ ಬಾಲಿವುಡ್‌ ಪ್ರವೇಶಿಸಿ, ಬಳಿಕ ಕನ್ನಡ ಕಿರುತೆರೆಯಲ್ಲಿ ಮಿಂಚಿ ಈಗ ನಾಯಕಿಯಾಗಿ ಹಿರಿತೆರೆಗೆ ಬಡ್ತಿ ಪಡೆದಿರುವುದು ವಿಶೇಷ.

ಪ್ರತಿಭಾವಂತ ನಟ ಹಾಗೂ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಚೊಚ್ಚಲ ಬಾರಿಗೆ ನಿರ್ದೇಶಕರ ಕ್ಯಾಪ್ ಧರಿಸಿರುವ 'ಭಾವಾಂತರ' ಚಿತ್ರದ ಮೂಲಕ ತನ್ವಿ ರಾವ್ ನಾಯಕಿಯಾಗಿ ಸ್ಯಾಂಡಲ್‌ವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದ ಆಯ್ಕೆ ಕುರಿತು ಮಾತನಾಡಿರುವ ನಟಿ, "ಕಾರ್ತಿಕ್ ಶರ್ಮಾ ಅವರು 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ನನ್ನ ನಟನೆ ನೋಡಿ ಗುರುತಿಸಿದ್ದರು. ನಂತರ ನನ್ನನ್ನು ಸಂಪರ್ಕಿಸಿ ಕಥೆ ವಿವರಿಸಿದರು. ಇಂತಹ ವಿಶಿಷ್ಟ ಹಾಗೂ ಆಳವಾದ ಕಥೆಯನ್ನು ನಾನು ಈ ಹಿಂದೆ ಎಂದೂ ಕೇಳಿರಲಿಲ್ಲ. ಹಾಗಾಗಿ ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ. ಸ್ವಲ್ಪ ಸಮಯ ತೆಗೆದುಕೊಂಡು ಕಥೆ ಮತ್ತು ಪಾತ್ರದ ಸ್ವರೂಪದ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಿದೆವು. ಮೊದಲ ಹೆಜ್ಜೆಯಲ್ಲೇ ನನಗೆ ಹೇಳಿಮಾಡಿಸಿದಂತಹ ಅದ್ಭುತ ಕಥೆ ಮತ್ತು ಮಹತ್ವಾಕಾಂಕ್ಷೆಯ ಪಾತ್ರ ಸಿಕ್ಕಿರುವುದು ಅಪಾರ ಖುಷಿ ತಂದಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ತನ್ವಿ ರಾವ್ 'ರಾಧಾ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ಬೆಳಕು ಚೆಲ್ಲಿದ ಅವರು, "ಚಿತ್ರದಲ್ಲಿ ನನ್ನ ಪಾತ್ರ ರಾಧಾ ಒಬ್ಬ ಮಹತ್ವಾಕಾಂಕ್ಷೆಯ, ಎಲ್ಲದರಲ್ಲೂ ಪರಿಪೂರ್ಣತೆ ಬಯಸುವ ಅಪ್ಪಟ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ವೃತ್ತಿ ಬದುಕಿನ ಬಗ್ಗೆ ಅಪಾರ ಬದ್ಧತೆ, ಪ್ರೀತಿ ಹೊಂದಿರುವ ಆಕೆ, ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ಇಡಲು ಬಯಸುವ ಸ್ವಭಾವದವಳು. ಹೊಸ ಕಥೆಗಳನ್ನು ಹುಡುಕುವುದು, ಕಟ್ಟುವುದು ಆಕೆಗೆ ಅಚ್ಚುಮೆಚ್ಚು. ಅಂತಹ ಆಕೆಯ ಬದುಕಿನಲ್ಲಿ ಏನೋ ಒಂದು ಅನಿರೀಕ್ಷಿತ ಘಟನೆ ನಡೆದುಹೋಗುತ್ತದೆ; ಅದರ ಹಿಂದಿನ ಮತ್ತು ಮುಂದಿನ ಮಹತ್ವದ ವಿದ್ಯಮಾನಗಳ ಸುತ್ತವೇ ‘ಭಾವಾಂತರ’ ಚಿತ್ರದ ಕಥಾಹಂದರ ಸಾಗುತ್ತದೆ" ಎಂದು ಪಾತ್ರದ ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರೀಕರಣಕ್ಕೂ ಮುನ್ನ ನಡೆದ ಸಿದ್ಧತೆಗಳ ಕುರಿತು ಮಾತನಾಡಿದ ತನ್ವಿ, "ಚಿತ್ರೀಕರಣ ಆರಂಭಕ್ಕೂ ಮುನ್ನ ಹಲವು ದಿನಗಳ ಕಾಲ ನಟನೆ ಮತ್ತು ಪಾತ್ರದ ವರ್ಕ್‌ಶಾಪ್ ನಡೆಸಿದೆವು. ನಿರ್ದೇಶಕ ಕಾರ್ತಿಕ್ ಶರ್ಮಾ ಅವರು ನಮ್ಮಿಂದ ಅತ್ಯುತ್ತಮ ಅಭಿನಯವನ್ನು ಹೊರತೆಗೆಯಲು ಅಗತ್ಯ ತರಬೇತಿ ನೀಡಿದರು. ಪಾತ್ರದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಆಳವಾದ ಅಧ್ಯಯನ ನಡೆಸಲಾಯಿತು. ಪ್ರತಿಯೊಂದು ದೃಶ್ಯ ಹಾಗೂ ಸಂಭಾಷಣೆಯ ಬಗ್ಗೆ ಸಾಕಷ್ಟು ಚರ್ಚಿಸಿ ಕೆಲಸ ಮಾಡಿದ್ದೇವೆ. ಕಾರ್ತಿಕ್ ಕೆಲಸದಲ್ಲಿ ಎಷ್ಟೇ ಶಿಸ್ತಿನಿಂದ ತೊಡಗಿಸಿಕೊಂಡಿದ್ದರೂ, ಸೆಟ್‌ನಲ್ಲಿ ಸದಾ ಕೂಲ್ ಆಗಿರುತ್ತಾರೆ. ನಿರ್ದಿಷ್ಟ ಚೌಕಟ್ಟಿಗೆ ಕಲಾವಿದರನ್ನು ಕಟ್ಟಿಹಾಕದೆ, ಅವರೊಳಗಿನ ಪ್ರತಿಭೆ ಸಹಜವಾಗಿ ಹೊರಬರಲು ಸ್ವಾತಂತ್ರ್ಯ ನೀಡುತ್ತಾರೆ. ಅವರೊಂದಿಗೆ ಕೆಲಸ ಮಾಡಿದ್ದು ಅತ್ಯಂತ ಸಂತಸದ ಅನುಭವ. ನಾವು ತುಂಬಾ ರಿಯಲ್‌ ಲೊಕೇಷನ್‌ಗಳಲ್ಲಿ ನಮ್ಮ ಸಿನಿಮಾವನ್ನು ಶೂಟ್‌ ಮಾಡಿದ್ದೇವೆ" ಎಂದು ಶ್ಲಾಘಿಸಿದ್ದಾರೆ. ʻಭಾವಾಂತರʼ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆ.
#suddinota #thanvirao #kannadaactress

1 week ago | [YT] | 0

Suddinota ಸುದ್ದಿ ನೋಟ

*ಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರ; ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್‌ & ಫ್ಯಾಮಿಲಿ ಎಮೋಷನ್ಸ್‌ ಇರುವ ‘ಕೆಮಿಸ್ಟ್ರಿ’ ಚಿತ್ರ ಘೋಷಣೆ, ನಾಯಕಿಯಾಗಿ ನಭಾ ನಟೇಶ್‌*

ಬೆಂಗಳೂರು: ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’ ಎಂಬ ಆಕರ್ಷಕ ಶೀರ್ಷಿಕೆ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ (PMF) ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾಸ್ ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟ ಧ್ರುವ
ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್‌ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಚಿತ್ರದಲ್ಲಿ ಧ್ರುವ ಅವರ ರೊಮ್ಯಾನ್ಸ್, ಮಮತೆ ಹಾಗೂ ಭಾವನಾತ್ಮಕ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆಮಾಡಿದೆ. ಮಾಸ್‌ ಆಕ್ಷನ್‌ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಹೀರೋ ಆಗಿರುವ ಧ್ರುವ, ಈಗ ಕೌಟುಂಬಿಕ ಪ್ರೇಕ್ಷಕರು, ಮಹಿಳೆಯರು ಹಾಗೂ ಯುವ ಜೋಡಿಗಳ ಹೃದಯ ಗೆಲ್ಲಲು ಹೊರಟಿದ್ದಾರೆ.

ಕುಟುಂಬ ಸಮೇತ ಸಂಭ್ರಮಿಸುವ ಅದ್ಧೂರಿ ಸಿನಿಮಾ
ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಕನೆಕ್ಟ್ ಮಾಡಿಕೊಳ್ಳುವಂತಹ ಕೌಟುಂಬಿಕ ಬಾಂಧವ್ಯ ಮತ್ತು ಲವ್‌ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ. ಅಭಿಮಾನಿಗಳು ತಮ್ಮ ಇಡೀ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬಂದು ಆನಂದಿಸುವಂತಹ ಸಂಪೂರ್ಣ ಮನರಂಜನೆಯನ್ನು ಚಿತ್ರತಂಡ ಕಟ್ಟಿಕೊಡಲಿದೆ. ಧ್ರುವ ಸರ್ಜಾ ಅವರ ಭರ್ಜರಿ ಸ್ಟಾರ್‌ಡಮ್ ಜೊತೆಗೆ ಭಾವನೆಗಳು ಮೇಳೈಸಿದ ಈ ಸಿನಿಮಾ, ಅದ್ಧೂರಿ ಮೇಕಿಂಗ್ ಮೂಲಕ ತೆರೆಯ ಮೇಲೆ ಅರಳಲಿದೆ.

ಅನಿರೀಕ್ಷಿತ ಕಾಂಬಿನೇಷನ್; ಹೊಚ್ಚ ಹೊಸ ದೃಷ್ಟಿಕೋನ
ಸ್ಟಾರ್ ನಟ ಧ್ರುವ ಸರ್ಜಾ ಹಾಗೂ ಯುವ ಪ್ರತಿಭೆ ವಿಶಾಲ್ ಆತ್ರೇಯ ಅವರ ಜೋಡಿ ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ. ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್‌ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ಕನ್ನಡದ ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರೊಂದಿಗೆ ಕೈಜೋಡಿಸಿದೆ. ಈಗ ಧ್ರುವ ಸರ್ಜಾ ಜೊತೆ ದೊಡ್ಡ ಪ್ರಾಜೆಕ್ಟ್‌ಗೆ ಕೈಹಾಕಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರುವ ಹಾಗೂ ವಿಭಿನ್ನ ಕಥೆಗಳನ್ನು ಕನ್ನಡಿಗರಿಗೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಧ್ರುವ ಸರ್ಜಾ ಅವರ ವೃತ್ತಿಜೀವನದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಈ ಸಿನಿಮಾದ ಮೂಲಕ ಗೋಚರಿಸುತ್ತಿದೆ.


#suddinota #druvasarja #chemistry #kannadamovie #newkannadamovie

2 weeks ago | [YT] | 24

Suddinota ಸುದ್ದಿ ನೋಟ

“ಸ್ಪಾರ್ಕ್” ಚಿತ್ರದ ಮೂರನೇ ಹಾಡು “ಮಧುರ ಮುಗುಳುನಗೆ “ RELEASING ON SEPT 2ND 6PM @laharimusic


@NiranjanSudhi @Rachana_Inder @StylishstarPrem @garimaavinash @mahantesh_handral @itsclapboard_pro

#SparkMovie #FirstSingle #ramithpro #itsclapboardpro#KannadaCinema #Spark #SachinBasrur #suddinota

1 month ago | [YT] | 0

Suddinota ಸುದ್ದಿ ನೋಟ

🎬Every Don has an inspiration. For our Don, it's none other than "Dailogue King"
Team #HalkaDon wishes #SaiKumar sir a very Happy Birthday! 🎉

@pramodactor1 @amrutha_iyengar @sreekanthkp @venusentertainers @vharikrishnaofficial @satyahegde @chala_na_chitra @dbeatsmusicworld @harisharasu_pro @pradeepnagendra
#suddinota #saikumar #actor #happybirthday

2 months ago | [YT] | 5

Suddinota ಸುದ್ದಿ ನೋಟ

The force behind the vision. The strength behind the madness. ❤️‍🔥

Team #BillaRangaBaasha wishes its producer @niran_reddy a very Happy Birthday 💥

#BRBFirstBlood #BRB

#suddinota #ಸುದ್ದಿನೋಟ #kannadamovie

2 months ago | [YT] | 0

Suddinota ಸುದ್ದಿ ನೋಟ

ಐವತ್ತರ ಸಂಭ್ರಮದಲ್ಲಿ "ಮಗ್ಗಿಪುಸ್ತಕ"

ಹರಿವರಾಸನಂ ತಾವೇ ಬರೆದ ಅವನಿ ಎಂಬ ಕಾದಂಬರಿಯನ್ನಾಧರಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಚಿತ್ರ ಮಗ್ಗಿ ಪುಸ್ತಕ ಇದೀಗ ಯಶಸ್ವಿಯಾಗಿ
೫೦ ದಿನಗಳನ್ನು ಪೂರೈಸಿ ಮುನ್ನಡೆದಿದೆ, ಬಡ ಕುಟುಂಬದ ಅವನಿ ಎಂಬ ಹೆಣ್ಣು ಮಗಳ ಸುತ್ತ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಹರಿವರಾಸನಂ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮಗ್ಗಿಪುಸ್ತಕ ಚಿತ್ರದ
ಐವತ್ತರ ಸಂಭ್ರಮದ ಸಮಾರಂಭ ಮಂಗಳವಾರ ನಡೆಯಿತು, ಈ ಸಂದರ್ಭದಲ್ಲಿ ಚಿತ್ರದಲ್ಲಿ ಕೆಲಸ ಮಾಡಿ ಗೆಲುವಿಗೆ
ಕಾರಣರಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಫಲಕ ನೀಡಿ ಗೌರವಿಸಲಾಯಿತು,
೪ ಆಯಾಮಗಳಲ್ಲಿ ನಡೆಯುವ ಕಥೆ ಒಳಗೊಂಡ ಈ ಚಿತ್ರದಲ್ಲಿ ಮಕ್ಕಳ ಜತೆಗೆ ಪೋಷಕರಿಗೂ ಉತ್ತಮ ಸಂದೇಶವಿದೆ.
ನಿರ್ದೇಶಕ ಹರಿವರಾಸನಂ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ನಾಡಿ ಮಿಡಿತವನ್ನರಿತು ಚಿತ್ರ
ನಿರೂಪಿಸಿದ್ದಾರೆ. ಅವರ ಪ್ರಥಮ ಚಿತ್ರವೇ ೫೦ ದಿನಗಳನ್ನು ಪೂರೈಸಿದೆ. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯ
ವಿದ್ಯಾರ್ಥಿಗಳು, ಪೋಷಕರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಚಿತ್ರ ಉತ್ತರ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ
ಕಾಣುತ್ತಿದೆ. ಚಿನ್ನಸ್ವಾಮಿ ಫಿಲಂಸ್ ಅಡಿ ಎತಿರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಗ್ಗಿ ಪುಸ್ತಕವೆಂಬುದು ಬದುಕಿನ ಲೆಕ್ಕಾಚಾರವಾಗಿದ್ದು, ಜೀವನವೇ ಒಂದು ಮಗ್ಗಿ ಪುಸ್ತಕವಿದ್ದಂತೆ, ಇದರಲ್ಲಿ ಒಳ್ಳೆಯದನ್ನು ಕೂಡಬೇಕು,
ಕೆಟ್ಟದ್ದನ್ನು ಕಳೆಯಬೇಕು, ಅಜ್ಞಾನವನ್ನು ಗುಣಿಸಬೇಕು, ಜ್ಞಾನವನ್ನು ಭಾಗಿಸಬೇಕು ಎಂಬ ಸಂದೇಶವಿದೆ, ನಾಲ್ಕು
ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಕಥೆಯಿದು.
ವೇದಿಕೆಯಲ್ಲಿ ಮಾತನಾಡಿದ ಹರಿವರಾಸನಂ ಇಡೀ ಚಿತ್ರತಂಡದ ಪರಿಶ್ರಮವೇ ಈ ಯಶಸ್ಸಿಗೆ ಕಾರಣ. ನಮ್ಮ ಚಿತ್ರ ೧೦೦
ದಿನಗಳನ್ನೂ ಪೂರೈಸಬೇಕೆಂಬ ಆಸೆಯಿದೆ, ಚಿತ್ರವೀಗ ೧೩ ಥೇಟರ್‌ಗಳಲ್ಲಿ ರನ್ ಆಗುತ್ತಿದೆ. ಮುಂದಿನ ವಾರದಿಂದ
ರಜೆ ಪ್ರಾರಂಭವಾಗುತ್ತಿದ್ದು, ಮತ್ತಷ್ಟು ಥೇಟರ್‌ಗಳು ಸೇರ್ಪಡೆಯಾಗುತ್ತಿವೆ ಎಂದು ಹೇಳಿದರು.
ನಿರ್ಮಾಪಕ ಎತಿರಾಜ್ ಮಾತನಾಡುತ್ತ ನಮ್ಮ ಚಿತ್ರ ೫೦ ದಿನ ಓಡಿದ್ದೇ ಖುಷಿಯ ವಿಚಾರ, ಈ ಯಶಸ್ಸಿಗೆ ಸಹಕರಿಸಿದ ಎಲ್ಲ
ತಂತ್ರಜ್ಞರು, ಕಲಾವಿದರಿಗೆ ನನ್ನ ಕೃತಜ್ಞತೆಗಳು ಎಂದು ಹೇಳಿದರು,
ಸಂಗೀತ ನಿರ್ದೇಶಕ ಯಶಸ್ ನಾಚಪ್ಪ ಮಾತನಾಡುತ್ತ ೫೦ ದಿನ ಅನ್ನೋದೇ ವಿಶೇಷ. ನನ್ನ ಮೊದಲ ಚಿತ್ರವೇ ೫೦ ದಿನ ಕಂಡಿದೆ. ೭ ಹಾಡುಗಳನ್ನು ೧೭ ಜನ ಸಿಂಗರ್ಸ್ ಹಾಡಿದ್ದಾರೆ ಎಂದು ಹೇಳಿದರೆ, ಛಾಯಾಗ್ರಾಹಕ ನಂದಕುಮಾರ್ ಮಾತನಾಡುತ್ತ ಈ ಸಕ್ಸಸ್ಸಿಗೆ ಕಾರಣ ನಮ್ಮ ನಿರ್ದೇಶಕರು. ಅವರು ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಈಗಿನ ದಿನಗಳಲ್ಲಿ ೫೦ ದಿನ
ಓಡೋದು ತುಂಬಾ ಕಮ್ಮಿ, ನನ್ನ ಇಷ್ಟು ದಿನಗಳ ಜರ್ನಿಯಲ್ಲಿ ೫೦ ದಿನ ಕಂಡ ಮೊದಲ ಚಿತ್ರವಿದು ಎಂದು ಸಂತಸ
ವ್ಯಕ್ತಪಡಿಸಿದರು, ಸದ್ಯ ಪರೀಕ್ಷೆಗಳು ಮುಗಿಯುತ್ತಿದ್ದು, ಈವಾರ ಭೂಮಿಕಾ ಸೇರಿದಂತೆ ಮತ್ತಷ್ಟು ಸೆಂಟರ್‌ಗಳಲ್ಲಿ
ಚಿತ್ರ ರಿಲೀಸಾಗುತ್ತಿದೆ, ಚಿತ್ರದ ಕಲೆಕ್ಷನ್ ಕೂಡ ಜಾಸ್ತಿಯಾಗುವ ನಿರೀಕ್ಷೆಯಿದೆ, ಅಲ್ಲದೆ ನಮ್ಮ ಚಿತ್ರದ ಓಟಿಟಿ ಹಕ್ಕನ್ನು
ಅಮೆಜಾನ್ ಸಂಸ್ಥೆ ಪಡೆದಿದೆ ಎಂದೂ ನಿರ್ದೇಶಕರು ಹೇಳಿಕೊಂಡರು,
ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ
ಪ್ರದೇಶಗಳಲ್ಲಿ ಸುಮಾರು ೮೦ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಗ್ಗಿಪುಸ್ತಕ
ಚಿತ್ರದಲ್ಲಿ ಒಟ್ಟು ೭ ಹಾಡುಗಳಿದ್ದು ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯಿದೆ. ಎಂ.ಎಂ.ಕೀರವಾಣಿ ಅವರು ಚಿತ್ರದ ಹಾಡೊಂದಕ್ಕೆ ದನಿಯಾಗಿರುವುದು ವಿಶೇಷ. ಉಳಿದಂತೆ ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್,
ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ
ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ ೧೭ ಜನ ಹಾಡಿದ್ದಾರೆ.
ಈ ಚಿತ್ರವನ್ನು ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ರಿಲೀಸ್ ಮಾಡಿದ್ದರು. ಅವರ ಸಂಸ್ಥೆಯಿಂದ
ಬಿಡುಗಡೆಯಾದ ಮೊದಲ ೨ ಚಿತ್ರಗಳೂ ೫೦ ದಿನ ಪೂರೈಸಿರುವುದು ಸಂತಸದ ವಿಷಯ, ಈ ಕುರಿತು ಮಾತನಾಡಿದ ಮುನೀಂದ್ರ ಈ ಹಿಂದೆ ನಾವೇ ರಿಲೀಸ್ ಮಾಡಿದ ಕಂಗ್ರಾಚುಲೇಶನ್ಸ್ ಬ್ರದರ್ ಕೂಡ ೫೦ ದಿನ ಪ್ರದರ್ಶನ ಕಂಡಿತ್ತು, ಇದು ಎರಡನೇ ಚಿತ್ರ ಎಂದರು,
ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರಂಜನ್ ಕಾಸರಗೋಡು, ರಾನ್ವಿ ಶೇಖರ್, ಮಹೇಶ್, ಮೋಹಿತ್, ಮೈಸೂರು ರಮಾನಂದ್, ಮೂಗು ಸುರೇಶ್, ಪಂಕಜ, ಅಗಸ್ತ್ಯ ಅಲ್ಲದೆ ಸಂಗೀತ ನಿರ್ದೇಶಕರು, ಸಂಕಲನಕಾರರು ಹಾಗೂ
ಛಾಯಾಗ್ರಾಹಕರಿಗೂ ಸಹ ಈ ವೇದಿಕೆಯಲ್ಲಿ ಸ್ಮರಣಫಲಕ ವಿತರಿಸಿ ಗೌರವಿಸಲಾಯಿತು, ಮೇಘಶ್ರೀ, ರಕ್ಷಾ ಗೌಡ,
ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಘು ರಾಮನಕೊಪ್ಪ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

#suddinota #kannadamovie #sandalwood

6 months ago | [YT] | 4

Suddinota ಸುದ್ದಿ ನೋಟ

ಅರವಿಂದ್ ಕೌಶಿಕ್ ನಿರ್ದೇಶನದ ಹೊಸ ಚಿತ್ರ "ಕಂಟ್ರಿ ಮೇಡ್ ಭಾಗ 2" ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ "ರಿಯಲ್ ಸ್ಟಾರ್ ಉಪೇಂದ್ರ"
#CountryMadePart2 #Arvindhkaushik #Upendra #Tittlereveled #Kannadapichhar

@countrymade @aravind_kaushik @shilpa_aravind @raghav.ram.23 @surya.dop @arjunaramu @santhoshradhakrishnan9 @abhilashdwarakish @ashvvitha._.gowda @pradeep_roshan_official @shetty_suji @kuladheepak @kuldeep_jd1 @praveenekantha21 @kannada_pichhar
#suddinota #aravindkaushik #shilpaaravind #countrymade #upendra

7 months ago | [YT] | 0

Suddinota ಸುದ್ದಿ ನೋಟ

ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ನಿರ್ದೇಶಕ ಜೋಗಿ ಪ್ರೇಮ್ ರಿಂದ ಕನಕಪುರ ಶ್ರೀನಿವಾಸ್ ನಿರ್ಮಾಪಕನ ವಿರುದ್ಧ ದೂರು

ಇತ್ತಿಚೆಗೆ ವೇದಿಕೆಯೊಂದರಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ನಿರ್ಮಾಪಕ‌ ಕನಕಪುರ ಶ್ರೀನಿವಾಸ್

#suddinota #prem #kannada

8 months ago | [YT] | 0